ಬಿಎಸ್‌ಎನ್‌ಎಲ್ ಖಾಸಗೀಕರಣವಿಲ್ಲ: ಕೇಂದ್ರ ಸರ್ಕಾರ

ನವ ದೆಹಲಿ : ಬಿಎಸ್‌ಎನ್‌ಎಲ್ ಖಾಸಗೀಕರಣಗೊಳಿಸುವ ಯಾವುದೇ ಯೋಜನೆ ಸರ್ಕಾರಕ್ಕೆ ಇಲ್ಲ ಎಂದು ಸಂವಹನ ಖಾತೆ ರಾಜ್ಯ ಸಚಿವ ಸಂಜಯ್ ಧೋತ್ರೆ ಹೇಳಿದ್ದಾರೆ.
ಸರ್ಕಾರಿ ಸ್ವಾಮ್ಯದ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (ಬಿಎಸ್‌ಎನ್‌ಎಲ್‌) ತನ್ನ 4 ಜಿ ವೈರ್‌ ಲೆಸ್ ಸೇವೆ ಮುಂದಿನ 18 ರಿಂದ 24 ತಿಂಗಳುಗಳಲ್ಲಿ ಪೂರ್ಣಗೊಳ್ಳಲಿದೆ ಎಂದು ನಿರೀಕ್ಷಿಸುತ್ತಿದೆ ಎಂದು ಸಚಿವ ಧೋತ್ರೆ ಬುಧವಾರ( ಲೋಕಸಭೆಗೆ ಮಾಹಿತಿ ನೀಡಿದ್ದಾರೆ.ಬಿ ಎಸ್‌ ಎನ್‌ ಎಲ್ ಖಾಸಗೀಕರಣಗೊಳಿಸುವ ಯಾವುದೇ ಯೋಜನೆ ಸರ್ಕಾರಕ್ಕೆ ಇಲ್ಲ ಎಂದು ಸಚಿವರು ಲೋಕಸಭೆಗೆ ಲಿಖಿತ ಅವರು ಉತ್ತರ ನೀಡಿದ್ದಾರೆ.
ಬಿಎಸ್‌ಎನ್‌ಎಲ್ ಮುಂಬರುವ 4 ಜಿ ಟೆಂಡರ್ ನಲ್ಲಿ ಭಾಗವಹಿಸಲು ಆಸಕ್ತಿ ಹೊಂದಿರುವ ಭಾರತೀಯ ಟೆಲಿಕಾಂ ಇಕ್ವಿಪ್ ಮೆಂಟ್ಸ್ ಉತ್ಪಾದಕರಿಂದ ಪೂರ್ವ ನೋಂದಣಿ ಅಥವಾ ಪರಿಕಲ್ಪನೆಯ ಪುರಾವೆ (ಪಿಒಸಿ) ಕೋರಿ ಜನವರಿ 1 ರಂದು ಬಿ ಎಸ್ ಎನ್ ಎಲ್ ಇನ್ವೈಟೆಡ್ ಎಕ್ಸ್ಪ್ರೆಷನ್ ಆಫ್ ಇಂಟ್ರೆಸ್ಟ್ ಅನ್ನು ಆಹ್ವಾನಿಸಿತ್ತು ಎಂದು ಹೇಳಿರುವ ಅವರು, 2017 ರ ಸಾಮಾನ್ಯ ಹಣಕಾಸು ನಿಯಮಗಳ ಕಾಯ್ದೆ 144 (xi) ಒಳಗೊಂಡಂತೆ ಸರ್ಕಾರದ ಅನ್ವಯವಾಗುವ ನಿಯಮಗಳು / ಮಾರ್ಗಸೂಚಿಗಳು / ಸಾರ್ವಜನಿಕ ಖರೀದಿ ಆದೇಶಗಳನ್ನು ಬಿ ಎಸ್ ಎನ್ ಎಲ್ ಅನುಸರಿಸುತ್ತದೆ” ಎಂದು ಧೋತ್ರೆ ಮಾಹಿತಿ ನೀಡಿದ್ದಾರೆ.

ಪ್ರಮುಖ ಸುದ್ದಿ :-   ದೆಹಲಿ ಹೈಕೋರ್ಟ್ ಮರುಮೌಲ್ಯಮಾಪನದ ಅರ್ಜಿ ತಿರಸ್ಕರಿಸಿದ ನಂತರ ಕಾಂಗ್ರೆಸ್ಸಿಗೆ 1700 ಕೋಟಿ ತೆರಿಗೆ ನೋಟಿಸ್ ನೀಡಿದ ಐಟಿ : ಮೂಲಗಳು

1 / 5. 1

ಶೇರ್ ಮಾಡಿ :

  1. Geek

    ಖಾಸಗೀಕರಣ ಮಾಡುವುದಿಲ್ಲ . ಆದರೆ ಟವರ್ ಗಳನ್ನು ಕಡಿಮೆ ದರದಲ್ಲಿ ಜಿಯೋಗೆ ಬಾಡಿಗೆ ಕೊಡುತ್ತಾರೆ. ಸಂಪೂರ್ಣ ದಿವಾಳಿಯಾದಮೇಲೆ ಬಿಎಸ್ ಎನ್ ಎಲ್ ಜಮೀನುಗಳನ್ನು ರೀಯಲ್ ಎಸ್ಟೇಟ್ ನವರಿಗೆ ಮಾರುತ್ತಾರೆ.

ನಿಮ್ಮ ಕಾಮೆಂಟ್ ಬರೆಯಿರಿ

advertisement