ತನಗೆ ಆರೈಕೆ ಮಾಡಿದ್ದ ವೈದ್ಯರೊಬ್ಬರನ್ನು 12 ವರ್ಷಗಳ ಬಳಿಕ ಗುರುತು ಹಿಡಿದ ಥಾಯ್ಲೆಂಡ್‌ನ ಕಾಡಾನೆಯೊಂದರ ಕ್ಯಾಮೆರಾದಲ್ಲಿ ಸೆರೆ ಹಿಡಿದ ದೃಶ್ಯ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೆಟ್ಟಿಗರ ಪ್ರಶಂಸೆಗೆ ಪಾತ್ರವಾಗುತ್ತಿದೆ.

ಥಾಯ್ಲೆಂಡಿನ ಪಶುವೈದ್ಯ ಡಾ. ಪಟ್ಟರಪಾಲ್ ಮನೀಯನ್ ಅವರನ್ನು ೧೨ ವರ್ಷಗಳ ಬಳಿಕ 31 ವರ್ಷದ ಈ ಆನೆ ಗುರುತು ಹಿಡಿದಿದೆ. ತನ್ನ ಸೊಂಡಿಲಿನಿಂದ ಮೈ ನೇವರಿಸಿ ಅವರನ್ನು ಮುದ್ದು ಮಾಡಿದೆ.
ಪ್ಲಾಯ್ ಥಾಂಗ್ ಹೆಸರಿನ ಈ ಆನೆ ತನ್ನದೇ ವಿಶಿಷ್ಟವಾದ ದನಿಯಲ್ಲಿ ವೈದ್ಯ ಮನೀಯನ್ ಅವರ ಜೊತೆ ಮಾತನಾಡಿದೆ. ಈ ಹೃದಯಸ್ಪರ್ಶಿ ಕ್ಷಣಗಳನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿಯಲಾಗಿದೆ.ಕಾಡಿನಲ್ಲಿ ತಮ್ಮ ದೈನಂದಿನ ಕರ್ತವ್ಯದಲ್ಲಿದ್ದ ವೇಳೆ ವೈದ್ಯರೊಂದಿಗೆ ಗಜರಾಯ ಸಂಧಿಸಿದಾಗ ಗುರುತು ಹಿಡಿದಿದ್ದಾನೆ.
2009ರಲ್ಲಿ ಪ್ಲಾಯ್ ಥಾಂಗ್ ಆನೆ ಜ್ವರ, ಹೊಟ್ಟೆ ನೋವು, ಮುಖ, ಹೊಟ್ಟೆ ಹಾಗೂ ಕತ್ತಿನಲ್ಲಿ ಊತದಿಂದ ನರಳುತ್ತಿತ್ತು. ಜೊತೆಯಲ್ಲಿ ಅನೀ ಮಿಯಾ, ನಿಸ್ತೇಜ ಕಾಲುಗಳು ಹಾಗೂ ಪ್ಯಾರಾಸಿಟಿಕ್ ಪರಿಸ್ಥಿತಿಯನ್ನು ಗಜರಾಯ ಎದುರಿಸುತ್ತಿತ್ತು.
ಆಗ ಲಂಪಾಂಗ್‌ನಲ್ಲಿರುವ ಶುಶ್ರೂಷಾ ಕೇಂದ್ರಕ್ಕೆ ಕರೆತಂದು ಸೂಕ್ತ ಚಿಕಿತ್ಸೆ ಕೊಟ್ಟು, ವನ್ಯಜೀವಿ ಇಲಾಖೆಯ ಸಿಬ್ಬಂದಿಯ ಆರೈಕೆಯಲ್ಲಿ ಚೇತರಿಸಿಕೊಳ್ಳಲು ವ್ಯವಸ್ಥೆ ಮಾಡಲಾಗಿತ್ತು. ಡಾ. ಪಟ್ಟರಪಾಲ್ ಮನೀಯನ್ ಈ ಆನೆಗೆ ಚಿಕಿತ್ಸೆ ನೀಡಿದ್ದರು. ಬಹಳ ದಿನಗಳ ಬಳಿಕ ಸಂಪೂರ್ಣವಾಗಿ ಚೇತರಿಸಿಕೊಂಡ ಬಳಿಕ ಪ್ಲಾಯ್‌ನನ್ನು ಮತ್ತೆ ಕಾಡಿಗೆ ಬಿಟ್ಟು ಬರಲಾಗಿತ್ತು. ೧೨ ವರ್ಷಗಳ ಬಳಿಕ ಈಗ ಕಾಡಿನಲ್ಲಿ ಭೇಟಿಯಾದ ತನ್ನನ್ನು ಉಪಚರಿಸಿದ ವೈದ್ಯನನ್ನು ಆನೆ ಗುರುತು ಹಿಡಿದು ಆತನಿಗೆ ಕೃತಜ್ಷತೆ ಸಲ್ಲಿಸಿದನ್ನು ಕ್ಯಾಮೆರಾದಲ್ಲಿ ಸೆರೆಹಿಡಲಾಗಿದ್ದು ಅದು ಸಾಮಾಜಿಕ ಜಾಲತಾಣದಲ್ಲಿ ಎಚ್ಚರ ಮೆಚ್ಚುಗೆ ಪಡೆಯುತ್ತಿದೆ. ಆನೆ ಥಾಯ್ಲೆಂಡ್‌ನ ರಾಷ್ಟ್ರಪ್ರಾಣಿ. ಈ ದೇಶದಲ್ಲಿ 3000 – 4000 ಆನೆಗಳಿವೆ.
ನಿಮ್ಮ ಕಾಮೆಂಟ್ ಬರೆಯಿರಿ