ವಿಶ್ವದ ಸಂತಸವಾಗಿರುವ ದೇಶಗಳ ಪಟ್ಟಿ ಬಿಡುಗಡೆ : ಪಾಕಿಸ್ತಾನವು ಭಾರತಕ್ಕಿಂತ ಹೆಚ್ಚು ಸಂತೋಷವಾಗಿದೆ..!

ವಿಶ್ವದಲ್ಲಿ ಅತ್ಯಂತ ಸಂತಸವಾಗಿರುವ ರಾಷ್ಟ್ರಗಳ ಪಟ್ಟಿ ಬಿಡುಗಡೆ ಮಾಡಲಾಗಿದೆ.
ವಿಶ್ವಸಂಸ್ಥೆಯು ಶುಕ್ರವಾರ ಬಿಡುಗಡೆ ಮಾಡಿದ ವಿಶ್ವ ಸಂತೋಷ ವರದಿ 2021ರ ಪಟ್ಟಿಯಲ್ಲಿ ಫಿನ್ಲೆಂಡ್ ಅಗ್ರಸ್ಥಾನದಲ್ಲಿದ್ದು, 149 ರಾಷ್ಟ್ರಗಳ ಪೈಕಿ ಭಾರತ 139ನೇ ಸ್ಥಾನ ಪಡೆದುಕೊಂಡಿದೆ. ವಿಶೇಷವೆಂದರೆ ಪಾಕಿಸ್ತಾನವು ಭಾರಕ್ಕಿಂತ ಹೆಚ್ಚು ಸಂತೋಷ ಇರುವ ರಾಷ್ಟ್ರವಾಗಿದೆ. ಯಾಕೆಂದರೆ ಅದು 105ನೇ ಸ್ಥಾನದಲ್ಲಿದೆ.
ವಿಶ್ವದ 149 ದೇಶಗಳ ನಾಗರಿಕರು ತಾವು ಎಷ್ಟು ಸಂತೋಷದಿಂದ ಇದ್ದೇವೆ ಎಂದು ಹೇಳಿರುವುದರ ಮೇಲೆ ದೇಶಗಳು ವರದಿಯಲ್ಲಿ ತಮ್ಮ ಸ್ಥಾನಗಳನ್ನು ಪಡೆದಿವೆ. ಜನರ ಜೀವನದ ಸಂರಚನೆ ಮತ್ತು ಗುಣಮಟ್ಟದ ಮೇಲೆ ವೈರಸ್ ನ ಪರಿಣಾಮ ಹಾಗೂ ಸಾಂಕ್ರಾಮಿಕವನ್ನು ವಿಶ್ವದಾದ್ಯಂತ ಸರ್ಕಾರಗಳು ಹೇಗೆ ಎದುರಿಸಿದೆ ಎಂಬ ಮಾಹಿತಿಯನ್ನು ಆಧರಿಸಿ ಈ ಮೌಲ್ಯಮಾಪನ ಮಾಡಲಾಗಿದೆ. ಈ ಪಟ್ಟಿಯಲ್ಲಿ ಭಾರತ 139ನೇ ಸ್ಥಾನದಲ್ಲಿದೆ. ಕಳೆದ ವರ್ಷ 140ನೇ ಸ್ಥಾನದಲ್ಲಿತ್ತು. ಫಿನ್ಲೆಂಡ್ ಮೊದಲ ಸ್ಥಾನದಲ್ಲಿದ್ದು, ಐಸ್ ಲ್ಯಾಂಡ್, ಡೆನ್ಮಾರ್ಕ್, ಸ್ವಿಟ್ಜರ್ಲ್ಯಾಂಡ್ , ನೆದರ್ ಲ್ಯಾಂಡ್ಸ್, ಸ್ವಿಡನ್, ಜರ್ಮನಿ ಮತ್ತು ನಾರ್ವೆ ನಂತರದ ಸ್ಥಾನದಲ್ಲಿವೆ.
ಪಾಕಿಸ್ತಾನ 105ನೇ, ಬಾಂಗ್ಲಾದೇಶ 101 ಮತ್ತು ಚೀನಾ 84ನೇ ಸ್ಥಾನದಲ್ಲಿವೆ. ವಿಶ್ವದ ಅತ್ಯಂತ ಶ್ರೀಮಂತ ರಾಷ್ಟ್ರವಾಗಿರುವ ಅಮೆರಿಕಾ 19ನೇ ಸ್ಥಾನದಲ್ಲಿದೆ.

ಪ್ರಮುಖ ಸುದ್ದಿ :-   ಕೆಲ ದಿನಗಳ ಹಿಂದೆ ಆತ್ಮಹತ್ಯೆಗೆ ಯತ್ನಿಸಿದ್ದ ತಮಿಳುನಾಡು ಸಂಸದ ಹೃದಯಾಘಾತದಿಂದ ಸಾವು

3.3 / 5. 4

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement