ಬೇಕಾದರೆ ನನ್ನ ತಲೆ ಮೇಲೆ ಕಾಲಿಟ್ಟು ಒದೆಯಿರಿ, ಆದರೆ ಬಂಗಾಳಿ ಜನರ ಕನಸನ್ನು ಒದೆಯಲು ಬಿಡುವುದಿಲ್ಲ: ಮಮತಾ ವಿರುದ್ಧ ಮೋದಿ ವಾಗ್ದಾಳಿ

ಕೊಲ್ಕತ್ತಾ :ಬೇಕಿದ್ದರೆ ನನ್ನ ತಲೆಯ ಮೇಲೆ ನಿಮ್ಮ ಕಾಲಿಟ್ಟು ನನ್ನನ್ನು ಒದೆಯಿರಿ, ಆದರೆ, ನೀವು ಬಂಗಾಳದ ಅಭಿವೃದ್ಧಿ ಮತ್ತು ಅದರ ಜನರ ಕನಸುಗಳನ್ನು ಕಾಲಿನಿಂದ ಒದೆಯುವುದಕ್ಕೆ ನಾನು ಬಿಡುವುದಿಲ್ಲ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಬಂಕುರಾದಲ್ಲಿ ಭಾನುವಾರ ಬಿಜೆಪಿ ಸಮಾವೇಶದಲ್ಲಿ ಮಾತನಾಡಿದ ಅವರು, ಮಮತಾ ಬ್ಯಾನರ್ಜಿ ವಿರುದ್ಧ ಮೇಲೆ ವಾಗ್ದಾಳಿ ನಡೆಸಿದರು.
ಬಂಗಾಳದ ಬೀದಿಗಳಲ್ಲಿ ಟಿಎಂಸಿ ಕಾರ್ಯಕರ್ತರು ದೀದಿ ಪರ ಪ್ರಚಾರಕ್ಕಾಗಿ ಮಾಡಿರುವ ಗ್ರಾಫಿಟಿಗಳ ಬಗ್ಗೆ ಉಲ್ಲೇಖಿಸಿದ ಪ್ರಧಾನಿ, ಅವಮಾನಕರವಾದ ಚಿತ್ರಗಳನ್ನು ಬಿಡಿಸಿ ರಾಜ್ಯದ ಸಂಸ್ಕೃತಿ ಮತ್ತು ಪರಂಪರೆ ಅಪಮಾನಿಸಲಾಗುತ್ತಿದೆ ಎಂದರು.
‘ದೀದಿಯ ಜನರು ಆಕೆ ಕಾಲಿನಿಂದ ನನ್ನ ತಲೆಗೆ ಹೊಡೆಯುತ್ತಿರುವ ಮತ್ತು ಫುಟ್​ಬಾಲ್ ಆಡುತ್ತಿರುವ ರೀತಿಯಲ್ಲಿ ಬಂಗಾಳದ ಬೀದಿಗಳಲ್ಲಿ ಗ್ರಾಫಿಟಿ ಮಾಡಿದ್ದಾರೆ. ದೀದಿ, ನೀವ್ಯಾಕೆ ಬಂಗಾಳದ ಸಂಸ್ಕೃತಿ ಮತ್ತು ಪರಂಪರೆಗಳನ್ನು ಅಪಮಾನಿಸುತ್ತಿದ್ದೀರಿ? ಬೇಕಿದ್ದರೆ ನನ್ನ ತಲೆಯ ಮೇಲೆ ನಿಮ್ಮ ಕಾಲಿಟ್ಟು ನನ್ನನ್ನು ಒದೆಯಿರಿ. ಆದರೆ, ದೀದಿ, ಬಂಗಾಳದ ಅಭಿವೃದ್ಧಿ ಮತ್ತು ಅದರ ಜನರ ಕನಸುಗಳನ್ನು ಕಾಲಿನಿಂದ ಒದೆಯುವುದಕ್ಕೆ ನಾನು ಬಿಡುವುದಿಲ್ಲ’ ಎಂದು ಮೋದಿ ಹೇಳಿದರು.
ಹತ್ತು ವರ್ಷಗಳ ಹಿಂದೆ ಬ್ಯಾನರ್ಜಿ ತಮ್ಮ ನಿಜ ಬಣ್ಣವನ್ನು ತೋರಿದ್ದರೆ, ರಾಜ್ಯದ ಜನತೆ ಅವರನ್ನು ಚುನಾಯಿಸುತ್ತಿರಲಿಲ್ಲ. ಈ ಚುನಾವಣೆಯಲ್ಲಿ ಅವರು ತಮ್ಮ ಸೋಲನ್ನು ನಿರೀಕ್ಷಿಸುತ್ತಿರುವುದರಿಂದ ಈಗ ಎಲೆಕ್ಟ್ರಾನಿಕ್ ಮತಯಂತ್ರಗಳ ಕಾರ್ಯವೈಖರಿಯನ್ನು ಪ್ರಶ್ನಿಸುತ್ತಿದ್ದಾರೆ ಎಂದು ಮೋದಿ ಟೀಕಿಸಿದರು.
ತಮ್ಮ ೧೦ ವರ್ಷಗಳ ಆಡಳಿತದಲ್ಲಿ, ದೀದಿ ತಮ್ಮ ರಾಜ್ಯದ ಅಭಿವೃದ್ಧಿ ನಿರ್ಲಕ್ಷಿಸಿರುವುದಾಗಿ ಮೋದಿ ಆರೋಪಿಸಿದರು.

ಪ್ರಮುಖ ಸುದ್ದಿ :-   ತಾಯಿಯ ಸಂಪತ್ತು ಉಳಿಸಿಕೊಳ್ಳಲು ಪಿತ್ರಾರ್ಜಿತ ತೆರಿಗೆ ಕಾನೂನು ರದ್ದುಗೊಳಿಸಿದ ರಾಜೀವ ಗಾಂಧಿ : ಪ್ರಧಾನಿ ಮೋದಿ ಆರೋಪ

2 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement