ದೀದಿ ಭೀತಿಯಿಂದ ಯೋಗಿ ಜೀವನಚರಿತ್ರೆ ಪ್ರಕಾಶನಕ್ಕೆ ಮುಂದಾಗದ ಪಶ್ಚಿಮ ಬಂಗಾಳ ಪ್ರಕಾಶಕರು

ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್‌ ಅವರ ಜೀವನಚರಿತ್ರೆ “ದಿ ಮಾಂಕ್‌ ಹೂ ಬಿಕಮ್‌ ಚೀಫ್‌ ಮಿನಿಸ್ಟರ್‌ʼ ಕೃತಿಯ ಬಂಗಾಳಿ ಆವೃತ್ತಿ ಪ್ರಕಟಿಸಲು ಪಶ್ಚಿಮ ಬಂಗಾಳದ ಪ್ರಕಾಶಕರು ಮುಂದಾಗದಿರಲು ಮಮತಾ ಬ್ಯಾನರ್ಜಿ ಅವರ ಭೀತಿಯೇ ಕಾರಣ ಎಂದು ಕೃತಿಯ ಲೇಖಕ ಶಾಂತನು ಗುಪ್ತಾ ಹೇಳಿದ್ದಾರೆ.
ಮಮತಾ ಬ್ಯಾನರ್ಜಿ ಆಡಳಿತದ ಭಯದಿಂದಾಗಿ ಪಶ್ಚಿಮ ಬಂಗಾಳದ ಪ್ರಕಾಶನ ಸಂಸ್ಥೆಗಳು ತಮ್ಮ ಪುಸ್ತಕವನ್ನು ಬಂಗಾಳಿಯಲ್ಲಿ ಪ್ರಕಟಿಸುವುದಕ್ಕೆ ನಿರಾಸಕ್ತಿ ತೋರಿವೆ ಎಂದು ಅವರು ಆರೋಪಿಸಿದರು. ಹಿಂದಿ, ಮರಾಠಿ, ಗುಜರಾತಿ, ಮಲಯಾಳಂ, ಕನ್ನಡ, ತಮಿಳು ಮುಂತಾದ ಇತರ ಭಾರತೀಯ ಭಾಷೆಗಳಲ್ಲಿ ಕೃತಿ ಬೆಸ್ಟ್ ಸೆಲ್ಲರ್ ಆದರೂ ಬಾಂಗ್ಲಾ ಭಾಷೆಯಲ್ಲಿ ಪ್ರಕಾಶನ ಮಾಡಲು ಪ್ರಕಾಶಕರು ಮುಂದೆ ಬರುತ್ತಿಲ್ಲ ಎಂದರು.
ಯೋಗಿ ಆದಿತ್ಯನಾಥ್ ಅವರ ಜೀವನ ಚರಿತ್ರೆಯನ್ನು ಬಂಗಾಳಿಯಲ್ಲಿ ಪ್ರಕಟಿಸಲು ದೀದಿ ಮತ್ತು ಟಿಎಂಸಿ ಇಷ್ಟಪಡುವುದಿಲ್ಲ. ರಿಸ್ಕ್‌ ತೆಗೆದುಕೊಳ್ಳಲು ಪ್ರಕಾಶಕರು ಮುಂದೆ ಬರುತ್ತಿಲ್ಲ ಎಂದು ಶಾಂತನು ಗುಪ್ತಾ ತಿಳಿಸಿದರು.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement