ಅದಾನಿ ನಿವಾಸದಲ್ಲಿ ಅಮಿತ್‌ ಶಾ-ಪವಾರ್‌ ಭೇಟಿ ವದಂತಿ:ಎಲ್ಲವನ್ನೂ ಸಾರ್ವಜನಿಕವಾಗಿ ಹೇಳಲು ಸಾಧ್ಯವಿಲ್ಲ ಎಂದ ಶಾ

ಮಹಾರಾಷ್ಟ್ರದಲ್ಲಿ ನಡೆಯುತ್ತಿರುವ ರಾಜಕೀಯ ತಿಕ್ಕಾಟದ ಮಧ್ಯೆ ಬಿಜೆಪಿಯ ಹಿರಿಯ ನಾಯಕತ್ವವು ಶರದ್ ಪವಾರ್ ಅವರ ರಾಷ್ಟ್ರೀಯ ಕಾಂಗ್ರೆಸ್ ಪಕ್ಷ (ಎನ್‌ಸಿಪಿ)ದೊಂದಿಗೆ ಸಂಪರ್ಕದಲ್ಲಿದೆ ಎಂದು ಮಾಧ್ಯಮಗಳಲ್ಲಿ ಚರ್ಚೆಯಾಗುತ್ತಿದೆ. ಇದರ ಮಧ್ಯೆಯೇ ಶನಿವಾರ ಕೇಂದ್ರ ಗೃಹ ಸಚಿವ ಅಮಿತ ಶಾ ಹಾಗೂ ಎನ್‌ಸಿಪಿ ಮುಖ್ಯಸ್ಥ ಶರದ್‌ ಪವಾರ್‌ ಅಹಮದಾಬಾದಿನಲ್ಲಿ ಗೌತಮ ಅದಾನಿ ಮನೆಯಲ್ಲಿ ಭೇಟಿಯಾದರು ಎಂದು ಹಲವು ಮಾಧ್ಯಮಗಳಲ್ಲಿ ವರದಿಯಾಗಿದೆ.
ಎನ್‌ಸಿಪಿ ಪಕ್ಷವು ರಾಜ್ಯದ ಆಡಳಿತಾರೂಢ ಮಹಾ ಮಹಾ ವಿಕಾಸ್ ಅಘಾಡಿ ಸರ್ಕಾರದ ಅಂಗ ಪಕ್ಷಗಳಲ್ಲಿ ಒಂದು. ಉಳಿದಂತೆ ಸಿವಸೇನೆ ಹಾಗೂ ಕಾಂಗ್ರೆಸ್‌ ಪಕ್ಷ ಈ ಒಕ್ಕೂಟದಲ್ಲಿದೆ. ಮಹಾರಾಷ್ಟ್ರದಲ್ಲಿ ಇತ್ತೀಚಿನ ಬೆಳವಣಿಗೆಯ ನಂತರ ಬಿಜೆಪಿ ಹಾಗೂ ಎನ್‌ಸಿಪಿ ಉನ್ನತ ನಾಯಕರು ರಾಜ್ಯದಲ್ಲಿ ಸಂಭವನೀಯ ಒಕ್ಕೂಟದ ಬಗ್ಗೆ ಚರ್ಚಿಸುತ್ತಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿಗಳು ಬರುತ್ತಿವೆ. ಆದರೆ ಬಿಜೆಪಿ ಹಾಗೂ ಎನ್‌ಸಿಪಿ ಪಕ್ಷಗಳು ಮೌನಕ್ಕೆ ಶರಣಾಗಿವೆ.
ಶನಿವಾರ ಗೃಹ ಸಚಿವ ಅಮಿತ್ ಶಾ, ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಮತ್ತು ಎನ್‌ಸಿಪಿ ಮುಖಂಡ ಪ್ರಫುಲ್ ಪಟೇಲ್ ಶನಿವಾರ ಅಹಮದಾಬಾದ್‌ನ ಗೌತಮ್ ಅದಾನಿಯ ನಿವಾಸದಲ್ಲಿ ಭೇಟಿಯಾದರು ಎಂದು ವರದಿಯಾಗಿದೆ. ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆಯಾಗುವ ಸಾಧ್ಯತೆಯ ಬಗ್ಗೆ ಚರ್ಚಿಸಲು ಅವರು ಭೇಟಿಯಾದರು ಎಂದು ಮಾಧ್ಯಮಗಳು ವರದಿ ಮಾಡಿವೆ. ವಿಶೇಷವೆಂದರೆ, ಎರಡು ಪಕ್ಷಗಳ ನಾಯಕತ್ವದ ನಡುವಿನ ಉನ್ನತ ಮಟ್ಟದ ಭೇಟಿಗೆ ಸಂಬಂಧಿಸಿದಂತೆ ಎರಡೂ ರಾಜಕೀಯ ಪಕ್ಷಗಳು ಏನನ್ನೂ ಹೇಳದೆ ಮೌನ ವಹಿಸಿವೆ.
ಆದರೆ, ಒಂದು ದಿನದ ನಂತರ, ಉಭಯ ಪಕ್ಷಗಳ ನಾಯಕತ್ವದ ನಡುವೆ ಸಭೆ ನಡೆದಿರುವ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಒ ಎಲ್ಲವನ್ನೂ ಸಾರ್ವಜನಿಕವಾಗಿ ಪ್ರಕಟಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಭಾನುವಾರ, ಅಮಿತ್ ಶಾ ಅವರನ್ನು ಟೈಮ್ಸ್ ನೌ ವರದಿಗಾರ ಅಹಮದಾಬಾದಿನಲ್ಲಿ ಶರದ್ ಪವಾರ್ ಅವರೊಂದಿಗೆ ಭೇಟಿಯಾದ ವರದಿಗಳ ಬಗ್ಗೆ ಕೇಳಿದಾಗ ಪ್ರತಿಕ್ರಿಯಿಸಿದ ಅಮಿತ್ ಶಾ, “ಎಲ್ಲವನ್ನೂ ಸಾರ್ವಜನಿಕಗೊಳಿಸಲಾಗುವುದಿಲ್ಲ” ಎಂದು ಹೇಳಿದ್ದಾರೆ.
ಆದರೆ ಮಾಧ್ಯಮಗಳಲ್ಲಿ ಚರ್ಚೆಯಾಗುತ್ತಿರುವುದನ್ನು ಅವರು ನಿರಾಕರಿಸದ ಕಾರಣ ಉಭಯ ಕಡೆಯವರ ನಡುವೆ ಸಭೆ ನಡೆದಿದೆ ಎಂದು ಅರ್ಥೈಸಬಹುದಾಗಿದೆ.
ಮಹಾರಾಷ್ಟ್ರದ ಕಾಂಗ್ರೆಸ್-ಎನ್‌ಸಿಪಿ-ಶಿವಸೇನೆ ಮೈತ್ರಿಕೂಟಕ್ಕೆ ಮಹಾರಾಷ್ಟ್ರದ ಗೃಹ ಸಚಿವ ಅನಿಲ್‌ ದೇಶ್ಮುಖ್‌ ಅವರ ಸುಲಿಗೆ ಪ್ರಕರಣ ಸ್ಫೋಟಗೊಂಡಾಗಿನಿಂದ ಎನ್‌ಸಿಪಿ ಅಥವಾ ಶಿವಸೇನೆಗಳಲ್ಲಿ ಒಂದಾದ ಬಿಜೆಪಿಯೊಂದಿಗೆ ಕೈಜೋಡಿಸಲು ಒಕ್ಕೂಟದಿಂದ ದೂರವಿರಬಹುದು ಎಂಬ ವದಂತಿಗಳಿವೆ. ಈ ಹಿನ್ನೆಲೆಯಲ್ಲಿ ಅಮಿತ್‌ ಶಾ ಹಾಗೂ ಎನ್‌ಸಿಪಿ ಮುಖಂಡ ಶರದ್‌ ಪವಾರ್‌ ಭೇಟಿಯಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ಎರಡು ಪಕ್ಷಗಳು ಸ್ಪಷ್ಟವಾಗಿ ಏನನ್ನು ಹೇಳದಿದ್ದರೂ ನಿರಾಕರಿಸಿಯೂ ಇಲ್ಲ.

ಪ್ರಮುಖ ಸುದ್ದಿ :-   ವೀಡಿಯೋ..| ಎರಡೂ ಕೈತೋಳುಗಳಿಲ್ಲದೆ ಡ್ರೈವಿಂಗ್‌ ಲೈಸೆನ್ಸ್‌ ಪಡೆದ ಏಷ್ಯಾದ ಮೊದಲ ಮಹಿಳೆ ಇವರು : ಕೇರಳದ ಯುವತಿಯ ಕಾರ್‌ ಚಾಲನೆಗೆ ಬೆರಗಾಗ್ತೀರಾ..!

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement