ಸಿಡಿ ಪ್ರಕರಣದ ಯುವತಿ ನ್ಯಾಯಾಲಯದಲ್ಲಿ ಹೇಳಿಕೆ ದಾಖಲಿಸಲು ಕೋರ್ಟ್ ಅನುಮತಿ, ಯಾವುದೇ ಕ್ಷಣದಲ್ಲಿ ಹಾಜರು

ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತ ಯುವತಿ ಕೋರ್ಟ್ ಗೆ ಹಾಜರಾಗಿ ಹೇಳಿಕೆ ದಾಖಲಿಸಲು ಬೆಂಗಳೂರಿನ 24ನೇ ಎಸಿಎಂಎಂ ನ್ಯಾಯಾಲಯ ಅನುಮತಿ ನೀಡಿದೆ.
ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಯುವತಿಯ ಪರ ವಕೀಲ ಜಗದೀಶ್ ಯುವತಿಗೆ ಎಸ್‌ಐಟಿ ಮೇಲೆ ಹಾಗೂ ಪೊಲೀಸರ ಮೇಲೆ ಯಾವುದೇ ನಂಬಿಕೆ ಇಲ್ಲ ಹಾಗಾಗಿ ಕೋರ್ಟ್ ಮುಂದೆ ಹಾಜರಾಗಿ ನ್ಯಯಾಧೀಶರ ಎದುರು ಹೇಳಿಕೆ ದಾಖಲಿಸಲು ಅನುಮತಿ ನೀಡುವಂತೆ ಮನವಿ ಮಾಡಿದರು.ಇದನ್ನು ನ್ಯಾಯಾಲಯ ಪುರಸ್ಕರಿಸಿದರು.
ಮೊದಲು ಸಿ ಆರ್ ಪಿ ಸಿ ಸೆಕ್ಷನ್ 164ರ ಅಡಿ ಯುವತಿ ಹೇಳಿಕೆಗಳನ್ನು ದಾಖಲಿಸಿಕೊಳ್ಳಲಾಗುವುದು. ಬಳಿಕ ಯುವತಿ ತನಿಖೆಗೆ ಸಹಕರಿಸಬೇಕು. ಬಳಿಕ ತನಿಖಾಧಿಕಾರಿ ಮುಂದೆ ಯುವತಿ ಹೇಳಿಕೆ ನೀಡಲಿ ಎಂದು ನ್ಯಾಯಾಧೀಶರು ತಿಳಿಸಿದ್ದಾರೆ ಎಂದು ಯುವತಿ ಪರ ವಕೀಲ ಜಗದೀಶ ತಿಳಿಸಿದ್ದಾರೆ.
ಯುವತಿ ನ್ಯಾಯಾಲಯದಲ್ಲಿ ದಾಖಲಿಸುವ ಹೇಳಿಕೆಯನ್ನೂ ಗೌಪ್ಯವಾಗಿ ಇಡಲಾಗುವುದು. ಅಲ್ಲದೇ ಯುವತಿ ಮಾಡಿದ ಮನವಿಯಂತೆ ಯುವತಿಗೆ ರಕ್ಷಣೆ ನೀಡಲು ಎಸ್ ಐ ಟಿ ಸಿದ್ಧವಿದೆ ಎಂದು ನ್ಯಾಯಾಧೀಶರು ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಯುವತಿ ಯಾವುದೇ ಕ್ಷಣದಲ್ಲಿ ಕೋರ್ಟ್ ಮುಂದೆ ಹಾಜರಾಗುವ ಸಾಧ್ಯತೆ ಇದೆ.ಹೇಳಿಕೆ ದಾಖಲಿಸಲು ನ್ಯಾಯಾಲಯ ಅನುಮತಿ ನೀಡಿದೆ. ಆದರೆ ಇಷ್ಟೊತ್ತಿಗೆ ನ್ಯಾಯಾಲಯದ ಮುಂದೆ ಹಾಜರಾಗಿ ಹೇಳಿಕೆ ದಾಖಲಿಸಿ ಎಂದು ನ್ಯಾಯಾಲಯ ಹೇಳಿಲ್ಲ. ಈಗಾಗಲೇ ಯುವತಿ ಬೆಂಗಲೂರಿನಲ್ಲಿದ್ದಾಳೆ, ಪೊಲೀಸರು ರಕ್ಷಣೆ ಒದಿಗಿಸಿದ್ದಾರೆ. ನಾವು ಹಾಜರು ಪಡಿಸಲು ಸಿದ್ಧರಿದ್ದೇವೆ. ಯುವತಿಯ ಮಾನಸಿಕ ಸ್ಥಿತಿ ಆಧಾರದ ಮೇಲೆ ಹಾಜರು ಪಡಿಸುತ್ತೇವೆ ಎಂದು ವಕೀಲ ಜಗದೀಶ ತಿಳಿಸಿದರು.
ಆರೋಪಿ ಜೈಲಿಗೆ ಹೋಗಬೇಕು. ನನ್ನ ಬಳಿ ಹಣವಿದೆ, ನಾನೊಬ್ಬ ರಾಜಕಾರಣಿ, ತನಿಖೆ ಮೇಲೆ ಪ್ರಬಾವ ಬೀರುತ್ತೇನೆ ಎಂಬುದೆಲ್ಲ ಹೋಗಬೇಕು. ನ್ಯಾಯ ಎಲ್ಲರಿಗೂ ಒಂದೇ ಎಂಬ ಸಂದೇಶ ಹೋಗಬೇಕು ಎಂಬುದು ನನ್ನ ಅಭಿಪ್ರಾಯ ಎಂದು ಜಗದೀಶ ಹೇಳಿದರು.

ಪ್ರಮುಖ ಸುದ್ದಿ :-   ಬಿಜೆಪಿ ಅಭ್ಯರ್ಥಿಗಳ 7ನೇ ಪಟ್ಟಿ ಪ್ರಕಟ : ಚಿತ್ರದುರ್ಗದಲ್ಲಿ ಹಾಲಿ ಸಂಸದರಿಗೆ ಕೊಕ್, ಯಡಿಯೂರಪ್ಪ ಆಪ್ತನಿಗೆ ಟಿಕೆಟ್‌

3 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement