ನಂದಿಗ್ರಾಮದಲ್ಲಿ ಸೋಲುವ ಭಯದಿಂದ ಬೇರೆಡೆ ಸ್ಪರ್ಧಿಸ್ತೀರಾ: ದೀದಿಗೆ ಮೋದಿ ಪ್ರಶ್ನೆ, ಅಲ್ಲಿ ಗೆಲ್ಲೋದು ನಾವೇ, ಬೇರೆಡೆ ಯಾಕೆ ಸ್ಪರ್ಧಿಸ್ಬೇಕು:ಟಿಎಂಸಿ ತಿರುಗೇಟು

ಕೊಲ್ಕತ್ತಾ: ದೀದಿ, ನಂದಿಗ್ರಾಮ ಕ್ಷೇತ್ರದಲ್ಲಿ ಸೋಲು ಕಾಣುವ ಭಯ ನಿಮ್ಮನ್ನ ಕಾಡುತ್ತಿದ್ದು, ಮತ್ತೊಂದು ಸುರಕ್ಷಿತ ಕ್ಷೇತ್ರದಿಂದ ನಾಮಪತ್ರ ಸಲ್ಲಿಸ್ತೀರಿ ಎನ್ನುವ ಸುದ್ದಿ ಹರಿದಾಡುತ್ತಿದೆ. ಇದರಲ್ಲಿ ಸತ್ಯಾಂಶವಿದೆಯಾ ಎಂದು ಪ್ರಧಾನಿ ಮೋದಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವ್ರನ್ನ ಪ್ರಧಾನಿ ಅವರನ್ನು ಪ್ರಶ್ನಿಸಿದ್ದಾರೆ.
ಜಿಲ್ಲೆಯ ಉಲುಬೇರಿಯಾದಲ್ಲಿ ಸಾರ್ವಜನಿಕ ಸಮಾವೇಶದಲ್ಲಿ ಮಾತನಾಡಿದ ಮೋದಿ, ‘ದೀದಿ ನಿಮ್ಮ ವರ್ತನೆ ನೋಡಿದರೆ ನಂದಿಗ್ರಾಮದಿಂದ ಸೋಲುತ್ತಿರುವುದಾಗಿ ತೋರಿಸುತ್ತದೆ. ನೀವು ಬೇರೆ ಕ್ಷೇತ್ರದಿಂದ ನಾಮಪತ್ರ ಸಲ್ಲಿಸುತ್ತೀರಿ ಎಂಬ ವದಂತಿಯಿದೆ. ಇದು ನಿಜವೇ ಎಂದು ಪ್ರಶ್ನಿಸಿದ್ದಾರೆ.
ಮಮತಾ ಬ್ಯಾನರ್ಜಿ ಆಡಳಿತವನ್ನು ತರಾಟೆಗೆ ತೆಗೆದುಕೊಂಡ ಅವರು ‘ಈಗಾಗಲೇ ನಂದಿಗ್ರಾಮದಲ್ಲಿ ಜನರು ನಿಮಗೆ ಉತ್ತರ ನೀಡಿದ್ದಾರೆ. ಈಗ ನೀವು ಬೇರೆಡೆ ಸ್ಪರ್ಧೆ ಮಾಡಿದರೂ ಜನ ನಿಮಗೆ ಉತ್ತರ ನೀಡಲು ಸಿದ್ಧರಿದ್ದಾರೆ. ಟಿಎಂಸಿಯ ದುರಾಡಳಿತ ಮತ್ತು ಸುಲಿಗೆಗಳಿಂದ ಬಂಗಾಳದ ಜನರು ಬೇಸತ್ತಿದ್ದಾರೆ. ತಮ್ಮ ಉಜ್ವಲ ಭವಿಷ್ಯಕ್ಕಾಗಿ ಮತ್ತು ಘನತೆಯಿಂದ ಬದುಕುವ ಹಕ್ಕಿಗಾಗಿ ಅವರು ಬಂಗಾಳದಲ್ಲಿ ನಿಜವಾದ ಬದಲಾವಣೆಗಾಗಿ ಕಾದು ಕುಳಿತಿದ್ದಾರೆ. ಇದು ಕೇವಲ ಚುನಾವಣೆ ಮಾತ್ರವಲ್ಲ, ಬಂಗಾಳದ ಕಳೆದುಹೋದ ವೈಭವ ಮರಳಿ ಪಡೆಯಲು ದಾರಿ ಮಾಡಿದೆ ಎಂದರು.
ಬಂಗಾಳಕ್ಕಾಗಿ ಕೇಂದ್ರ ಸರ್ಕಾರದ ಮಾರ್ಗಸೂಚಿ ಎತ್ತಿ ಹೇಳಿದ ಪ್ರಧಾನಿ ಮೋದಿ, ‘ಸೆಣಬಿನ ರೈತರು ಮತ್ತು ಕಾರ್ಮಿಕರಿಗೆ ಬೆಂಬಲ ನೀಡಲು ನಾವು ಬದ್ಧರಾಗಿದ್ದೇವೆ. ಜಾಗತಿಕವಾಗಿ ಏಕ-ಬಳಕೆಯ ಪ್ಲಾಸ್ಟಿಕ್ ಪ್ಯಾಕೇಜಿಂಗ್ʼಗೆ ಪರ್ಯಾಯವಾಗಿ ನಾವು ಸೆಣಬಿನ ಚೀಲಗಳನ್ನ ತಯಾರಿಸುತ್ತಿದ್ದೇವೆ. ಇದರಿಂದ ಸೆಣಬಿನ ಉದ್ಯಮ ಭಾರತದಲ್ಲಿ ಪ್ರವರ್ಧಮಾನಕ್ಕೆ ಬರಲು ನೆರವಾಗಲಿದೆ. ಬಂಗಾಳಕ್ಕೆ ಡಬಲ್ ಎಂಜಿನ್ ಸರ್ಕಾರ್ ಬೇಕೇ ಹೊರತು ಸುಲಿಗೆ ಸರ್ಕಾರವಲ್ಲ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ತಂದರೆ ಮಾತ್ರ ಬಂಗಾಳದಲ್ಲಿ ಅಭಿವೃದ್ಧಿ ಸಾಧ್ಯ’ ಎಂದು ಹೇಳಿದರು.
ಟಿಎಂಸಿ ತಿರುಗೇಟು..: ನಂದಿಗ್ರಾಮದಿಂದ ಸ್ಪರ್ಧಿಸಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಸೋಲಿನ ಭೀತಿಯಿಂದ ಮತ್ತೊಂದು ಕ್ಷೇತ್ರದಲ್ಲಿ ಸ್ಪರ್ಧಿಸಲಿದ್ದಾರೆ ಎಂಬ ಪ್ರಧಾನಿ ನರೇಂದ್ರ ಮೋದಿ ಹೇಳಿಕೆಯನ್ನು ತೃಣಮೂಲ ಕಾಂಗ್ರೆಸ್ ತಳ್ಳಿಹಾಕಿದೆ.
ನಂದಿಗ್ರಾಮದ ಹೊರತಾಗಿ ಬೇರೆ ಯಾವುದೇ ಎರಡನೆಯ ಕ್ಷೇತ್ರದಲ್ಲಿ ಮುಖ್ಯಮಂತ್ರಿ ಕಣಕ್ಕಿಳಿಯುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಅವರು ನಂದಿಗ್ರಾಮದಲ್ಲಿ ಸುಲಭವಾಗಿ ಗೆಲ್ಲಲಿದ್ದಾರೆ’ ಎಂದು ಟಿಎಂಸಿ ಮುಖಂಡರು ಹೇಳಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ಎರಡನೆಯ ಹಂತದ ಮತದಾನ ಗುರುವಾರ ನಡೆದಿದ್ದು, ನಂದಿಗ್ರಾಮ ಸೇರಿದಂತೆ 30 ಕ್ಷೇತ್ರಗಳಲ್ಲಿ ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ. ಇನ್ನೂ ಆರು ಹಂತಗಳ ಚುನಾವಣೆ ಬಾಕಿ ಇದ್ದು, ನಂದಿಗ್ರಾಮದಲ್ಲಿ ಸೋಲುವ ಸೂಚನೆ ಅರಿತಿರುವ ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರು ಮತ್ತೊಂದು ಕ್ಷೇತ್ರದಲ್ಲಿ ಕೂಡ ಕಣಕ್ಕಿಳಿಯಲು ತಯಾರಿ ಮಾಡುತ್ತಿದ್ದಾರೆ ಎಂದು ಲೇವಡಿ ಮಾಡಿದೆ. ಇದಕ್ಕೆ ಉತ್ತರಿಸಿರುವ ಟಿಎಂಸಿ, ಮಮತಾ ಬ್ಯಾನರ್ಜಿ ನಂದಿಗ್ರಾಮದಲ್ಲಿ ಗೆಲ್ಲುವುದರಿಂದ ಅವರು ಮತ್ತೊಂದು ಕ್ಷೇತ್ರದಿಂದ ಸ್ಪರ್ಧಿಸಿರುವ ಅವಶ್ಯಕತೆಯೇ ಇಲ್ಲ ಎಂದು ಹೇಳಿದೆ.

ಪ್ರಮುಖ ಸುದ್ದಿ :-   ಸಿಬಿಐ ಜಂಟಿ ನಿರ್ದೇಶಕರಾಗಿ ಐವರು ಡಿಐಜಿಗಳನ್ನು ನೇಮಕ ಮಾಡಿದ ಕೇಂದ್ರ

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement