ಲೋಕಸಭೆ ಚುನಾವಣೆಯಲ್ಲಿ ದೀದಿ ವಾರಾಣಸಿ ಸ್ಪರ್ಧೆ: ಜೈ ಶ್ರೀರಾಂ ಘೋಷಣೆಯೊಂದಿಗೆ ಮೋದಿ ಆಹ್ವಾನ

2024ರಲ್ಲಿ ವಾರಾಣಸಿಯಿಂದ ಪ್ರಧಾನಿ ಮೋದಿ ವಿರುದ್ಧ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸ್ಪರ್ಧಿಸಲಿದ್ದಾರೆ ಎಂದು ತೃಣಮೂಲ ಕಾಂಗ್ರೆಸ್‌ ಶುಕ್ರವಾರ ಹೇಳಿದ ಬೆನ್ನಲ್ಲೇ ಜೈ ಶ್ರೀರಾಮ್ ಘೋಷಣೆಯೊಂದಿಗೆ ಮಮತಾ ಬ್ಯಾನರ್ಜಿಯವರನ್ನು ತಮ್ಮ ವಿರುದ್ಧ ವಾರಾಣಸಿಯಲ್ಲಿ ಸ್ಪರ್ಧಿಸಲು ಆಹ್ವಾನಿಸಿದ್ದಾರೆ.
ಪಶ್ಚಿಮ ಬಂಗಾಳದ ದಕ್ಷಿಣ 24 ಪರಗಣದ ಸನರ್ಪುರದಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಚುನಾವಣಾ ಸಮಾವೇಶದಲ್ಲಿ ಶನಿವಾರ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, 2024ರ ಲೋಕಸಭಾ ಚುನಾವಣೆಯಲ್ಲಿ ವಾರಾಣಸಿಯಿಂದ ಸ್ಪರ್ಧಿಸುವುದಾಗಿ ದೀದಿ ಪಕ್ಷ ಹೇಳುತ್ತಿದೆ. ಈ ಹೇಳಿಕೆಯಿಂದ ಎರಡು ವಿಷಯಗಳು ಸ್ಪಷ್ಟ. ಒಂದು, ದೀದಿ ಬಂಗಾಳದಲ್ಲಿ ತನ್ನ ಸೋಲನ್ನು ಒಪ್ಪಿಕೊಂಡಿದ್ದಾಳೆ ಎಂಬುದು. ಇದು ಸರಿಯೋ ತಪ್ಪೋ ಎನ್ನುವುದು ಪ್ರಶ್ನೆಯಲ್ಲ. ಇಲ್ಲದಿದ್ದರೆ, ಅವರು ಪಶ್ಚಿಮ ಬಂಗಾಳ ಬಿಟ್ಟು ಏಕೆ ಹೊರಗೆ ಹೋಗುತ್ತಾರೆ. ಎರಡನೆಯದಾಗಿ, ದೀದಿ ಈಗಾಗಲೇ ರಾಜ್ಯದ ಹೊರಗೆ ತಮ್ಮ ಸ್ಥಾನ ಹುಡುಕುತ್ತಿದ್ದಾರೆ’ ಎಂದು ಪ್ರಧಾನಿ ಮೋದಿ ಹೇಳಿದರು.
ಹಲ್ದಿಯಾ ಮತ್ತು ವಾರಣಾಸಿಯನ್ನ ಸಂಪರ್ಕಿಸಲು ಬಿಜೆಪಿ ಸರ್ಕಾರ ಅಭಿವೃದ್ಧಿ ಪಡಿಸಿದ ಜಲಮಾರ್ಗದಿಂದಾಗಿ ಮಮತಾ ಮನಸ್ಸು ವಾರಾಣಸಿಯತ್ತ ಮುಖ ಮಾಡಿರಬೇಕು ಎಂದಿರುವ ಪ್ರಧಾನಿ, ವಿಧಾನಸಭೆ ಚುನಾವಣೆಯಲ್ಲಿ ಸೋತ ನಂತರ ಲೋಕಸಭೆ ಚುನಾವಣೆಯ ಪರೀಕ್ಷಿಸುವುದರಲ್ಲಿ ತಪ್ಪೇನೂ ಇಲ್ಲ ಎಂದು ಮಾರ್ಮಿಕವಾಗಿ ಹೇಳಿದರು.
, ವಾರಾಣಸಿ, ಕಾಶಿ, ಉತ್ತರ ಪ್ರದೇಶದ ನನ್ನ ಜನರು ಎಷ್ಟು ದೊಡ್ಡ ಹೃದಯವಂತರು. ನಿಮ್ಮನ್ನು ಹೊರಗಿನವರು, ಪ್ರವಾಸಿಗ ಅಥವಾ ಪ್ರವಾಸಿ ತಂಡ ಎಂದು ಯಾರೂ ಕರೆಯುವುದಿಲ್ಲ ಎಂದು ನಾನು ನಿಮಗೆ ಹೇಳಬಯಸುತ್ತೇನೆ’ ಎನ್ನುವ ಮೂಲಕ ಮಮತಾ ಬ್ಯಾನರ್ಜಿ ಅವರ ಹೊರಗಿನವರು ಎಂಬ ಹೇಳಿಕೆಗೆ ಟಾಂಗ್‌ ನೀಡಿದರು.

ಪ್ರಮುಖ ಸುದ್ದಿ :-   ನಾಳೆ ಫಿಲಿಪ್ಪೀನ್ಸ್‌ಗೆ ʼಬ್ರಹ್ಮೋಸ್ ಕ್ಷಿಪಣಿʼಗಳ ಮೊದಲ ಸೆಟ್ ನೀಡಲಿದೆ ಭಾರತ

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement