ಬಾಂಗ್ಲಾದೇಶದಲ್ಲಿ ಹಡಗು ಮುಳುಗಿ ೨೬ ಜನರ ಜಲಸಮಾಧಿ

ಢಾಕಾ: ಬಾಂಗ್ಲಾದೇಶದ ಶಿತಲಖ್ಯಾ ನದಿಯಲ್ಲಿ ಸರಕು ಹಡಗಿಗೆ ಡಿಕ್ಕಿ ಹೊಡೆದ ಪ್ರಯಾಣಿಕರ ಸಣ್ಣ ಹಡಗು ಮುಳುಗಿ ಕನಿಷ್ಟ 26 ಜನರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.
ಭಾನುವಾರ ಸಂಜೆ ಢಾಕಾದ ಆಗ್ನೇಯಕ್ಕೆ 16 ಕಿ.ಮೀ ದೂರದಲ್ಲಿರುವ ನಾರಾಯಣಗಂಜ್ ಜಿಲ್ಲೆಯಲ್ಲಿ ಘಟನೆ ನಡೆದಿದೆ.
ಎಂ.ಎಲ್.ಸಬೀತ್ ಅಲ್ ಹಸನ್ ಎಂಬ ಪ್ರಯಾಣಿಕರ ಹಡಗು ಎಸ್‌.ಕೆ.ಎಲ್ -3 ಎಂಬ ಸರಕು ಹಡಗಿಗೆ ಡಿಕ್ಕಿ ಹೊಡೆದ ನಂತರ ಪ್ರಯಾಣಿಕರ ಹಡಗು ನೀರಿನಲ್ಲಿ ಮುಳುಗಿದೆ. ಪ್ರಯಾಣಿಕರ ಹಡಗು ಮುನ್ಶಿಗಂಜ್‌ಗೆ ತೆರಳುತ್ತಿತ್ತು.
ಘಟನೆಯ ತನಿಖೆಗಾಗಿ ಹೆಚ್ಚುವರಿ ಜಿಲ್ಲಾ ಮ್ಯಾಜಿಸ್ಟ್ರೇಟ್ (ಎಡಿಎಂ) ನೇತೃತ್ವದಲ್ಲಿ ಏಳು ಸದಸ್ಯರ ಸಮಿತಿಯನ್ನು ರಚಿಸಲಾಗಿದೆ ಎಂದು ನಾರಾಯಣಗಂಜ್ ಜಿಲ್ಲಾಧಿಕಾರಿ ಮೊಸ್ಟೇನ್ ಬಿಲ್ಲಾ ತಿಳಿಸಿದ್ದಾರೆ.
ಘಟನೆಯಲ್ಲಿ ಮೃತರ ಕುಟುಂಬಕ್ಕೆ ತಲಾ ೨೫,೦೦೦ ಟಕಾ ನೀಡಲಾಗಿದೆ. ಅಪಘಾತದ ತನಿಖೆಗಾಗಿ ಬಾಂಗ್ಲಾದೇಶ ಒಳನಾಡಿನ ಜಲ ಸಾರಿಗೆ ಪ್ರಾಧಿಕಾರವು ನಾಲ್ಕು ಸದಸ್ಯರ ಸಮಿತಿ ರಚಿಸಿದೆ ಎಂದು ವರದಿ ತಿಳಿಸಿದೆ.
ಪ್ರಯಾಣಿಕರ ಹಡಗಿನಲ್ಲಿ ಅಂದಾಜು 150 ಪ್ರಯಾಣಿಕರಿದ್ದರು. ಅವರಲ್ಲಿ 50-60 ಮಂದಿ ಈಜಿ ಜೀವ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಬಂದರು ಪೊಲೀಸ್ ಅಧಿಕಾರಿ (ಒಸಿ) ದೀಪಕ್ ಚಂದ್ರ ಸಹಾ ತಿಳಿಸಿದ್ದಾರೆ.

ಪ್ರಮುಖ ಸುದ್ದಿ :-   ಕೋಟಿಗಟ್ಟಲೆ ಬೆಲೆಗೆ ಮಾರಾಟವಾಗಿ ನೂತನ ದಾಖಲೆ ನಿರ್ಮಿಸಿದ ಭಾರತದ ಮೂಲದ ಈ ತಳಿಯ ಹಸು..! ಬೆಲೆ ಕೇಳಿದ್ರೆ ದಂಗಾಗ್ತೀರಾ...!!

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement