ನೈಜಿರಿಯಾ ಜೈಲಿನ ಮೇಲೆ ಉಗ್ರರ ಗ್ರೆನೇಡ್‌ ದಾಳಿ : 1800 ಖೈದಿಗಳು ಪರಾರಿ..!

ವಾರಿ: ಜೈಲಿನ ಮೇಲೆ ಸಶಸ್ತ್ರಧಾರಿ ಉಗ್ರರು ದಾಳಿ ನಡೆಸಿ 1800 ಖೈದಿಗಳನ್ನು ಬಂಧಮುಕ್ತಗೊಳಿಸಿದ ನಮತರ ಅವರು ಪರಾರಿಯಾದ ಘಟನೆ ನೈಜಿರಿಯಾದಲ್ಲಿ ನಡೆದಿದೆ.
ಓವೇರಿ ಜೈಲಿನ ಮೇಲೆ ಮಧ್ಯರಾತ್ರಿ ಶಸ್ತ್ರಧಾರಿ ಉಗ್ರರ ಗುಂಪು ಗ್ರೆನೆಡ್ ದಾಳಿ ಮಾಡಿದ್ದಲ್ಲದೆ, ಗನ್‍ಗಳಿಂದ ಮನ ಬಂದಂತೆ ಗುಂಡು ಹಾರಿಸಿ 1800 ಖೈದಿಗಳನ್ನು ಬಿಡುಗಡೆ ಮಾಡಿದ್ದು ಅವರು ಪರಾರಿಯಾಗಿದ್ದಾರೆ.
ಪೊಲೀಸರು ಮತ್ತು ಉಗ್ರರ ನಡುವೆ ಎರಡು ತಅಸಿಗೂ ಹೆಚ್ಚು ಕಾಲ ಗುಂಡಿನ ಚಕಮಕಿ ನಡೆದಿದ್ದು, ಕೆಲ ಪೊಲೀಸರು ಹಾಗೂ ಉಗ್ರು ಘಟನೆಯಲ್ಲಿ ಗಾಯಗೊಂಡಿದ್ದಾರೆ. ಗುಂಡಿನ ಚಕಮಕಿ ಹಾಗೂ ಗ್ರೆನೇಡ್‌ ದಾಳಿಯಿಂದಾಗಿ ಘಟನೆಯಲ್ಲಿ ಜೈಲಿನ ಕಟ್ಟಡಗಳಿಗೆ ಧಕ್ಕೆಯಾಗಿವೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಜೈಲಿನಿಂದ ಪರಾರಿಯಾಗುವ ಕುತಂತ್ರದಲ್ಲಿ 35 ಖೈದಿಗಳು ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದ್ದು ಪರಾರಿಯಾಗಿರುವ ಎಲ್ಲಾ ಖೈದಿಗಳನ್ನು ಮತ್ತೆ ಬಂಧಿಸಲು ತ್ವರಿತ ಕಾರ್ಯಾಚರಣೆ ಕೈಗೊಳ್ಳಲಾಗಿದೆ ಎಂದು ಜೈಲು ವಕ್ತಾರ ಫ್ರಾನ್ಸಿಸ್ ಏನೋಬೋರೋ ತಿಳಿಸಿದ್ದಾರೆ.
ಕೆಲ ದಿನಗಳ ಹಿಂದೆ ಉಗ್ರರು ನಾಲ್ಕು ಪೊಲೀಸ್ ಠಾಣೆಗಳು, ನಾಕಾಬಂಧಿ ಹಾಗೂ ವಾಹನಗಳ ಮೇಲೆ ದಾಳಿ ನಡೆಸಿ 12ಕ್ಕೂ ಹೆಚ್ಚು ಭದ್ರತಾ ಸಿಬ್ಬಂದಿ ಹತ್ಯೆ ಮಾಡಿದ್ದರು ಇದರ ಬೆನ್ನಲ್ಲೇ ಈಗ ಜೈಲಿನ ಮೇಲೂ ದಾಳಿ ನಡೆಸಿದ್ದಾರೆ.
ಇಗ್ಬೋ ಜನರ ರಕ್ಷಣೆಗಾಗಿ ಹೋರಾಟದ ಹಾದಿ ಹಿಡಿದಿರುವ ಈಸ್ಟರ್ನ್ ಸೆಕ್ಯೂರಿಟಿ ನೆಟ್‍ವರ್ಕ್ ಈ ಕೃತ್ಯವೆಸಗಿರುವ ಸಾಧ್ಯತೆಗಳಿವೆ ಎಂದು ಪೊಲೀಸರು ಶಂಕಿಸಿದ್ದಾರೆ.

advertisement

ಸುಂದರವಾದ ಮತ್ತು ವಿಶಾಲವಾದ ಸ್ಥಳದಲ್ಲಿ ನಿಮ್ಮ ರಜಾದಿನಗಳನ್ನು ಆನಂದಿಸಿು

ಉತ್ತರ ಕರ್ನಾಟಕದ ಅತಿ ದೊಡ್ಡ ರೆಸಾರ್ಟ್ ಮತ್ತು ಅಡ್ವೆಂಚರ್ ಪಾರ್ಕ್

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಮತ್ತು ವಿಚಾರಿಸಿ: 98867 84189

ಕನ್ನಡಿ ನ್ಯೂಸ್ ನ ದಿನದ ಪ್ರಮುಖ ಸುದ್ದಿಗಳು ಮತ್ತು ಮಾಹಿತಿಗಾಗಿ
ಟೆಲಿಗ್ರಾಮ್ ಚಾನೆಲ್ ಸೇರಿ
ವಾಟ್ಸಾಪ್ ಗ್ರೂಪ್ ಸೇರಿ
ಫೇಸ್ ಬುಕ್ ಫಾಲೋ ಮಾಡಿ
ಗೂಗಲ್ ನ್ಯೂಸ್ ನಲ್ಲಿ ಸೇರಿ
ಟ್ವಿಟರ್ ನಲ್ಲಿ ಫಾಲೋ ಮಾಡಿ
advertisement

ಓದಿರಿ :-   ಕಾಲಿಗೆ ಪೆಟ್ಟು ಮಾಡಿಕೊಂಡ ಮಾಲೀಕ ನಡೆಯುವಂತೆಯೇ ಕುಂಟುತ್ತ ಬೀದಿಯಲ್ಲಿ ನಡೆಯುವ ನಾಯಿ: ವೀಕ್ಷಿಸಿ

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ.

(1. ಚೆನ್ನಾಗಿಲ್ಲ. 2. ಸಾಧಾರಣ. 3. ಪರವಾಗಿಲ್ಲ. 4. ಉತ್ತಮ . 5. ಅತ್ಯುತ್ತಮ)

5 / 5. ಒಟ್ಟು ವೋಟುಗಳು 1

ನಿಮ್ಮ ಕಾಮೆಂಟ್ ಬರೆಯಿರಿ

advertisement