ಭಾರತದಲ್ಲಿ ಮೊದಲ ಬಾರಿಗೆ ಒಂದೇ ದಿನದಲ್ಲಿ 1.07 ಲಕ್ಷ ಹೊಸ ಕೊರೊನಾ ಪ್ರಕರಣ…!!!

ನವ ದೆಹಲಿ: ಮಂಗಳವಾರ ಭಾರತವು ಅತಿಹೆಚ್ಚು ದೈನಂದಿನ ಕೊರೊನಾ ಸೋಂಕು ದಾಖಲಿಸಿದೆ. ಎಲ್ಲ ರಾಜ್ಯಗಳ ಅಂಕಿ-ಅಂಶಗಳನ್ನು ಗಮನಿಸಿ ಭಾರತವು ಮಂಗಳವಾರ 1.07 ಲಕ್ಷ ದೈನಂದಿನ ಕೊರೊನಾ ಪ್ರಕರಣಗಳನ್ನು ದಾಖಲಿಸಿದೆ.
ಮಂಗಳವಾರ ಮುಂದಿನ ನಾಲ್ಕು ವಾರಗಳು “ಬಹಳ ನಿರ್ಣಾಯಕ” ಎಂದು ಕೇಂದ್ರವು ಎಚ್ಚರಿಸಿದೆ ಹಾಗೂ ಕೊವಿಡ್‌ ಸಾಂಕ್ರಾಮಿಕ ರೋಗದ ಎರಡನೇ ತರಂಗ ನಿಯಂತ್ರಿಸಲು ಜನರ ಪಾಲ್ಗೊಳ್ಳುವಿಕೆ ಕೋರಿದೆ.
ಪಿಟಿಐ ವರದಿ ಉಲ್ಲೇಖಿಸಿ ನ್ಯೂ ಇಂಡಿಯನ್‌ ಎಕ್ಸ್‌ಪೆಸ್‌ ವರದಿ ಮಾಡಿದ್ದು, ವರದಿ ಪ್ರಕಾರ, ವಿವಿಧ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಮಂಗಳವಾರ ಸಂಜೆ ಪ್ರಕಟಿಸಿದ ದೈನಂದಿನ ಕೊರೊನಾ ಪ್ರಕರಣಗಳ ಸಂಖ್ಯೆಗಳ ಪ್ರಕಾರ, ಮಂಗಳವಾರ ವರದಿಯಾದ ಹೊಸ ಪ್ರಕರಣಗಳ ಪ್ರಮಾಣವು 1.07 ಲಕ್ಷಗಳನ್ನು ದಾಟಿದೆ, ಇದು 2020 ರ ಜನವರಿ 30 ರಂದು ಮಾರಣಾಂತಿಕ ವೈರಸ್‌ನ ಮೊದಲ ಪ್ರಕರಣ ವರದಿಯಾದ ನಂತರ ಭಾರತದಲ್ಲಿ ಇದುವರೆಗೆ ದಾಖಲಾದ ಅತಿ ಹೆಚ್ಚು ದೈನಂದಿನ ಪ್ರಕರಣಗಳಾಗಿವೆ.
ಮೂರು ದಿನಗಳಲ್ಲಿ ಎರಡನೇ ಬಾರಿಗೆ ದೈನಂದಿನ ಪ್ರಕರಣವು 1 ಲಕ್ಷ ಸಂಖ್ಯೆಗಳನ್ನು ದಾಟಿದಂತಾಗಿದೆ.ಭಾರತ ಭಾನುವಾರ 24 ಗಂಟೆಗಳ ಅವಧಿಯಲ್ಲಿ ಸಾರ್ವಕಾಲಿಕ ಗರಿಷ್ಠ 1,03,558 ಪ್ರಕರಣಗಳನ್ನು ದಾಖಲಿಸಿತ್ತು.
ಕೊವಿಡ್‌-19 ಎರಡನೇ ಅಲೆ ಕಳೆದ ವರ್ಷಕ್ಕಿಂತಲೂ ದೇಶದಲ್ಲಿ ವೇಗವಾಗಿ ಹರಡುತ್ತಿದೆ ಎಂದು ಕೇಂದ್ರವು ಎಚ್ಚರಿಸಿದ ಬೆನ್ನಲ್ಲೇ ಕೇಂದ್ರ ಆರೋಗ್ಯ ಸಚಿವ ಹರ್ಷ್ ವರ್ಧನ್, ಜನರು ರೋಗ ಎದುರಿಸಲು ಮಾಸ್ಕ್‌ ಧರಿಸುವಂತಹ ಕ್ರಮಗಳಿಗೆ ‘ತಿಲಾಂಜಲಿ ನೀಡಿದ್ದಾರೆ ಎಂದು ತೋರುತ್ತದೆ ಎಂದು ಹೇಳಿದ್ದಾರೆ.
ಎಲ್ಲಾ ವಯೋಮಾನದವರನ್ನು ಒಳಗೊಳ್ಳಲು ಕೊವಿಡ್‌ ಅಭಿಯಾನ ವಿಸ್ತರಿಸುವ ಒತ್ತಾಡವನ್ನು ಕೇಂದ್ರವು ಎದುರಿಸುತ್ತಿದೆ. ಪ್ರಸ್ತುತ, 45 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಮಾತ್ರ ಲಸಿಕೆ ತೆಗೆದುಕೊಳ್ಳಲು ಅನುಮತಿ ಇದೆ.
ಕೊರೊನಾ ವೈರಸ್ ಸೋಂಕಿನ ಉಲ್ಬಣ ಹೆಚ್ಚಾಗಿದೆ. ರಾಷ್ಟ್ರ ರಾಜಧಾನಿ ಮಂಗಳವಾರ 5,100 ಹೊಸ ಪ್ರಕರಣಗಳನ್ನು ದಾಖಲಿಸಿದೆ, ಇದು ಈ ವರ್ಷ ಅತಿ ಹೆಚ್ಚು ಪ್ರಕರಣವಾಗಿದೆ.ಹೀಗಾಗಿ ಏಪ್ರಿಲ್ 30 ರವರೆಗೆ ರಾತ್ರಿ 10 ರಿಂದ ಬೆಳಿಗ್ಗೆ 5 ರ ವರೆಗೆ ಕರ್ಫ್ಯೂ ಜಾರಿ ಮಾಡಲಾಗಿದೆ.

ಪ್ರಕರಣಗಳಲ್ಲಿ ತೀವ್ರ ಏರಿಕೆಯೊಂದಿಗೆ ದೇಶದಲ್ಲಿ ಸಾಂಕ್ರಾಮಿಕ ಪರಿಸ್ಥಿತಿ ಹದಗೆಟ್ಟಿದೆ ಮತ್ತು ಜನಸಂಖ್ಯೆಯ ಹೆಚ್ಚಿನ ಭಾಗವು ವೈರಸ್‌ಗೆ ತುತ್ತಾಗಿದೆ ಎಂದು ನೀತಿ ಆಯೋಗದ ಸದಸ್ಯ (ಆರೋಗ್ಯ) ಡಾ ವಿ.ಕೆ. ಪಾಲ್ ಹೇಳಿದ್ದಾರೆ.
ಎರಡನೇ ತರಂಗವನ್ನು ನಿಯಂತ್ರಿಸಲು ಜನರ ಭಾಗವಹಿಸುವಿಕೆ ಅತ್ಯಗತ್ಯ. ಮುಂದಿನ ನಾಲ್ಕು ವಾರಗಳು ಬಹಳ ನಿರ್ಣಾಯಕವಾಗಲಿವೆ. ಇಡೀ ದೇಶವು ಒಗ್ಗೂಡಿ ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡುವ ಪ್ರಯತ್ನಗಳನ್ನು ಮಾಡಬೇಕಾಗಿದೆ.ಸಾಂಕ್ರಾಮಿಕದ ತೀವ್ರತೆ ಹೆಚ್ಚಾಗಿದೆ ಮತ್ತು ಇದು ಕಳೆದ ಬಾರಿಗಿಂತ ವೇಗವಾಗಿ ಹರಡುತ್ತಿದೆ. ಕೆಲವು ರಾಜ್ಯಗಳಲ್ಲಿ, ಇದು (ಸ್ಥಿತಿ) ಇತರರಿಗಿಂತ ಕೆಟ್ಟದಾಗಿದೆ ಆದರೆ ದೇಶಾದ್ಯಂತ ಏರಿಕೆ (ಪ್ರಕರಣಗಳಲ್ಲಿ) ಕಂಡುಬರುತ್ತದೆ” ಎಂದು ಅವರು ಹೇಳಿದ್ದಾರೆ.
ಕೊವಿಡ್‌- ಸೂಕ್ತವಾದ ನಡವಳಿಕೆ, ಧಾರಕ ಕ್ರಮಗಳು, ಪರೀಕ್ಷೆಯನ್ನು ಹೆಚ್ಚು ಪರಿಣಾಮಕಾರಿಯಾಗಿ ಕಾರ್ಯಗತಗೊಳಿಸಬೇಕು, ವೈದ್ಯಕೀಯ ಮೂಲಸೌಕರ್ಯಗಳನ್ನು ಹೆಚ್ಚಿಸಬೇಕು ಮತ್ತು ಲಸಿಕಾ ಅಭಿಯಾನ ತೀವ್ರಗೊಳಿಸಬೇಕು, ಕಡ್ಡಾಯವಾಗಿ ಮಾಸ್ಕ್‌ ಧರಿಸಬೇಕು. ಜನಸಂದಣಿಯಿಂದ ದೂರವಿರುವುದು ಮುಂತಾದ ಕೊವಿಡ್‌- ಸೂಕ್ತ ನಡವಳಿಕೆಯನ್ನು ಅನುಸರಿಸಬೇಕಾಗುತ್ತದೆ ಎಂದು ಪಾಲ್ ಜನರಿಗೆ ಮನವಿ ಮಾಡಿದ್ದಾರೆ.
ಕೊರೊನಾ ವೈರಸ್ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆ ಮತ್ತು ಅದರೊಂದಿಗೆ ಮರಣ ಪ್ರಮಾಣವೂ ಹೆಚ್ಚುತ್ತಿದೆ. ಜನಸಂಖ್ಯೆಯ ಗಾತ್ರ ಮತ್ತು ಪ್ರತಿ ಮಿಲಿಯನ್‌ಗೆ ಸಾವಿನ ವಿಷಯದಲ್ಲಿ ನಾವು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದೇವೆ ಮತ್ತು ಸಾಂಕ್ರಾಮಿಕ ರೋಗವು ನಿಯಂತ್ರಣದಲ್ಲಿದೆ.ಆದರೆ ವೇಗವಾಗಿ ಹರಡುವುದನ್ನು ನಿಂತ್ರಿಸಲು ಕೊವಿಡ್‌ ಮಾರ್ಗಸೂಚಿಗಳನ್ನು ಪಾಲಿಸಬೇಕು ಎಂದು ಹೇಳಿದ್ದಾರೆ.

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

0 / 5. ಒಟ್ಟು ವೋಟುಗಳು 0

ನಿಮ್ಮ ಕಾಮೆಂಟ್ ಬರೆಯಿರಿ