ಸಿ.ಟಿ.ರವಿಗೆ ಪ್ರತ್ಯುತ್ತರ: ಬಿಜೆಪಿ ವಂಶಪಾರಂಪರ್ಯ ರಾಜಕಾರಣದ ಲಿಸ್ಟ್ ಕೊಟ್ಟು ಜಾಲಾಡಿದ ಕಾಂಗ್ರೆಸ್..!

ಬೆಂಗಳೂರು: ಕರ್ನಾಟಕದಲ್ಲಿ ನಡೆಯಲಿರುವ ಮೂರು ಕ್ಷೇತ್ರಗಳ ಉಪಚುನಾವಣೆ ಸಮಯದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್‌ ಮಧ್ಯೆ ಟ್ವಿಟ್ಟರ್‌ ವಾರ್‌ ಜೋರಾಗಿಯೇ ನಡೆಯುತ್ತಿದೆ. ಉಪ ಚುನಾವಣೆ, ಸಿಡಿ ಪ್ರಕರಣ, ಸಾರಿಗೆ ನೌಕರರ ಮುಷ್ಕರ ಮುಂತಾದ ವಿಚಾರಗಳಲ್ಲಿ ಟ್ವಟ್ಟರ್‌ನಲ್ಲಿ ತೀವ್ರ ವಾಗ್ಯದ್ಧಕ್ಕೆ ಕಾರಣವಾಗಿದ್ದ ಬಿಜೆಪಿ-ಕಾಂಗ್ರೆಸ್‌ನ ಸಮರ ಈಗ ವಂಶಪಾರಂಪರ್ಯ ಆಡಳಿತದತ್ತ ತಿರುಗಿದೆ.
ಕಾಂಗ್ರೆಸ್‌ನಲ್ಲಿರುವುದು ವಂಶ ಪಾರಂಪರ್ಯದ ರಾಜಕಾರಣ. ಅದನ್ನು ಬಿಟ್ಟು ಅವರಿಗೆ ಬೇರೇನೂ ಗೊತ್ತಿಲ್ಲ ಎಂದು ಲೇವಡಿ ಮಾಡುತ್ತಿದ್ದ ಬಿಜೆಪಿಗೆ ಕರ್ನಾಟಕದಲ್ಲಿ ಬಿಜೆಪಿಯಲ್ಲಿನ ವಂಶಪಾರಂಪರ್ಯ ರಾಜಕಾರಣದ ಬಗ್ಗೆ ಅದರ ನಾಯಕರನ್ನುಕಾಂಗ್ರೆಸ್‌ ಜಾಲಾಡಿದೆ. ಬಿಜೆಪಿಯಲ್ಲಿನ ವಶಂ ಪಾರಂಪರ್ಯದ ದೊಡ್ಡ ಪಟ್ಟಿಯನ್ನೇ ನೀಡಿದೆ.
ಕಾಂಗ್ರೆಸ್ಸಿನಲ್ಲಿ ನೆಹರೂ ಕುಟುಂಬ, ಜೆಡಿಎಸ್‌ನಲ್ಲಿ ಗೌಡ್ರ ಕುಟುಂಬ, ಡಿಎಂಕೆಯಲ್ಲಿ ಕರುಣಾನಿಧಿ ಕುಟುಂಬ ಮತ್ತು ಎನ್ಸಿಪಿಯಲ್ಲಿ ಶರದ್ ಪವಾರ್ ಕುಟುಂಬವೇ ಬಾಸ್. ನಮ್ಮದು ಏನಿದ್ದರೂ ಕೇಡರ್ ಬೇಸ್ ಪಕ್ಷ, ಕಾರ್ಯಕರ್ತರೇ ನಮಗೆ ಬಾಸ್ ಎಂದು ಹೇಳಿದ್ದ ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಕಾಂಗ್ರೆಸ್‌ ಅನ್ನು ಲೇವಡಿ ಮಾಡಿದ್ದರು. ಅಲ್ಲದೆ ವಂಶಪಾರಂಪರ್ಯ ಆಡಳಿತ ಬಿಜೆಪಿ ಡಿಎನ್‌ಎನಲ್ಲೇ ಇಲ್ಲ ಎಂದು ಸಿ.ಟಿ.ರವಿ ಟ್ವೀಟ್ ಮಾಡಿದ್ದರು. ಇದಕ್ಕೆ ಟ್ವೀಟ್‌ ಮೂಲಕವೇ ತೀಕ್ಷ್ಣ ಉತ್ತರ ನೀಡಿರುವ ಕಾಂಗ್ರೆಸ್‌ ಬಿಜೆಪಿ ವಂಶಾಡಳಿತದ ದೊಡ್ಡ ಪಟ್ಟಿಯನ್ನೇ ಬಿಡುಗಡೆ ಮಾಡಿದೆ.
ರಾಜ್ಯ ಮತ್ತು ದೇಶದಲ್ಲಿ ಬಿಜೆಪಿಯ ಕುಟುಂಬ ರಾಜಕಾರಣದ ಬಗ್ಗೆ ಹೆಸರು, ಫೋಟೋ ಸಮೇತ ಕಾಂಗ್ರೆಸ್ ಟ್ವೀಟ್ ಮಾಡಿದ್ದು, ಪಟ್ಟಿಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ, ಅವರ ಹೆಸರೇ ಮೊದಲಿಗೆ ಇದೆ..!
ಇದಕ್ಕೆ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್,ಯಡಿಯುರಪ್ಪ ಅವರನ್ನು ಕುಗ್ಗಿಸಿ, ವಿಜಯೇಂದ್ರ ಅವರನ್ನು ಓಡಿಸುವ ಪ್ರಯತ್ನದಲ್ಲಿ ಸುಳ್ಳೇಕೆ ಹೇಳುತ್ತೀರಿ? ಮಂಗಳಾ ಅಂಗಡಿಯವರನ್ನ ಅಭ್ಯರ್ಥಿಯನ್ನಾಗಿಸಿ ನಮ್ಮಲ್ಲಿ ವಂಶಪಾರಂಪರ್ಯ ಇಲ್ಲವೆಂದು ಹಸಿ ಸುಳ್ಳು ಹೇಳಿದರೆ ನಂಬಲು ಜನ ಮೂರ್ಖರೇ?” ಎಂದು ಪ್ರಶ್ನಿಸಿದೆ.
ನಿಮ್ಮ ಪಕ್ಷವೂ ವಿಶಾಲವಾಗಿ ಬೆಳೆದು ಹರಡಿಕೊಂಡಿರುವ ವಂಶವೃಕ್ಷ”. ವಂಶಪಾರಂಪರ್ಯ ನಮ್ಮ ಪಕ್ಷದ ಡಿಎನ್‌ಎನಲ್ಲೇ ಇಲ್ಲ ಎಂದು ಹಸಿ ಸುಳ್ಳು ಹೇಳಿದ ಸಿ.ಟಿ.ರವಿ ಅವರೇ ನಿಮ್ಮ ಪಕ್ಷದಲ್ಲಿ ವಿಶಾಲವಾಗಿ ಬೆಳೆದು ಹರಡಿಕೊಂಡಿರುವ ವಂಶವೃಕ್ಷವನ್ನು ಸ್ವಲ್ಪ ನೋಡಿಕೊಳ್ಳಿ. ಇವರೆಲ್ಲರ ಡಿಎನ್‌ಎ ಬಗ್ಗೆ ನಿಮಗೆ ಅನುಮಾನವಿದೆಯೇ? ಇದ್ದರೆ ಒಮ್ಮೆ ನಿಮ್ಮವರ ಡಿಎನ್‌ಎ ಪರೀಕ್ಷೆ ಅಭಿಯಾನ ಹಮ್ಮಿಕೊಳ್ಳಿ, ಇಲ್ಲವೇ ಸುಳ್ಳುಗಳನ್ನು ಹೇಳುವುದನ್ನು ಬಿಡಿ” ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ. ಇದಕ್ಕೆ ಹಲವಾರು ಜನರ ಫೋಟೋಗಳನ್ನೂ ಬಿಡುಗಡೆ ಮಾಡಿದೆ.

ಪ್ರಮುಖ ಸುದ್ದಿ :-   ವಿದ್ಯಾರ್ಥಿನಿ ನೇಹಾ ಹತ್ಯೆ ಪ್ರಕರಣ: ಮಗನಿಗೆ ಯಾವ ಶಿಕ್ಷೆ ಕೊಟ್ರೂ ಸ್ವಾಗತಿಸ್ತೇನೆ ಎಂದ ಕೊಲೆ ಆರೋಪಿ ಫಯಾಜ್‌ ತಂದೆ

ಈ ಸಂಬಂಧ ಎರಡು ಲಿಸ್ಟ್‌ಗಳನ್ನು ಕಾಂಗ್ರೆಸ್‌ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದು, ಮೊದಲನೆಯದ್ದರಲ್ಲಿ ರಾಜಯ ಬಿಜೆಪಿ ನಾಕರ ವಂಶ ಪಾರಂರರ್ಯದ ಬಗ್ಗೆ ಇದೆ. ಎರಡನೇ ಲಿಸ್ಟ್‌ನಲ್ಲಿ ರಾಷ್ಟ್ರ ನಾಯಕರ ವಂಶ ಪಾರಂಪರ್ಯದ ಬಗ್ಗೆ ಇದೆ. ರಾಜ್ಯ ಲಿಸ್ಟ್‌ನಲ್ಲಿ ಯಡಿಯೂರಪ್ಪ ಮತ್ತವರ ಕುಟುಂಬ, ಈಶ್ವರಪ್ಪ, ಸಿ.ಎಂ.ಉದಾಸಿ, ಶಶಿಕಲಾ ಜೊಲ್ಲೆ, ಉಮೇಶ್ ಕತ್ತಿ, ರವಿ ಸುಬ್ರಮಣ್ಯ ಮತ್ತು ತೇಜಸ್ವಿ ಸೂರ್ಯ ಮುಂತಾದವರ ಹೆಸರನ್ನು ಫೋಟೋ ಸಮೇತ ಹಾಕಿದೆ.
ಬಿಜೆಪಿ ವಂಶವೃಕ್ಷ ಪಟ್ಟಿಯಲ್ಲಿ ಅಮಿತ್ ಶಾ ಮತ್ತವರ ಪುತ್ರ, ರಾಜನಾಥ್ ಸಿಂಗ್, ವಸುಂಧರಾ ರಾಜೆ, ಗೋಪಿನಾಥ ಮುಂಡೆ, ರಮಣ್ ಸಿಂಗ್, ದಿ.ಸುಷ್ಮಾ ಸ್ವರಾಜ್ ಕುಟುಂಬ, ಯಶವಂತ್ ಸಿನ್ಹಾ, ಕಲ್ಯಾಣ್ ಸಿಂಗ್, ಧರ್ಮೇಂದ್ರ ಪ್ರಧಾನ್ ಕುಟುಂಬ ಮುಂತಾದವರ ಹೆಸರನ್ನು ಕಾಂಗ್ರೆಸ್ ಟ್ವೀಟ್ ನಲ್ಲಿ ನಮೂದಿಸಿದೆ.

5 / 5. 1

ಶೇರ್ ಮಾಡಿ :

  1. geek

    ಸುದೀರ್ಘ ಕಾಲ ದೇಶದ ರಾಜಕೀಯದಲ್ಲಿದ್ದರೂ ವಂಶಪಾರಪರ್ಯ ರಾಡಕಾರಣ ಇಲ್ಲವೇ ಇಲ್ಲ ಎಂಬಷ್ಟು ಕಡಿಮೆಯಿರುವುದ ಕಮ್ಯೂನಿಸ್ಟ್ ಪಕ್ಷಗಳಲ್ಲಿ ಮಾತ್ರ. ಅಧಿಕಾರವೇ ಪ್ರಧಾನವಾಗದೇ ತತ್ವ ಸಿದ್ಧಾಂತಗಳನ್ನು ಹಟಹಿಡಿದು ಪಾಲಿಸುವುದನ್ನೂ ಆ ಪಕ್ಷಗಳಲ್ಲಿ ಕಾಣಬಹುದು. ಕೇರಳದಲ್ಲೊಂದೇ ಅಧಿಕಾರದಲ್ಲಿದ್ದರೂ ಪಕ್ಷದ ಸಿದ್ಧಾಂತದ ಪ್ರಕಾರ ಸತತ ಎರಡು ಬಾರಿ ಆಯ್ಕೆಯಾದವರಿಗೆ ಮತ್ತೊಮ್ಮೆ ಟಿಕೆಟ್ ಇಲ್ಲ ಎಂಬ ಆಂತರಿಕ ನಿಯಮದಂತೆ ಹಲವಾರು ಮಂತ್ರಿಗಳು ಹಾಗೂ ಹಾಲಿ ಶಾಸಕರಿಗೆ ಕೇರಳದಲ್ಲಿ ಈ ಬಾರಿಯ ಚುನಾವಣೆಯಲ್ಲಿ ಟಿಕೆಟ್ ನೀಡಿಲ್ಲ.

ನಿಮ್ಮ ಕಾಮೆಂಟ್ ಬರೆಯಿರಿ

advertisement