೩೦ ವರ್ಷಗಳ ನಂತರ ಅಂತೂ ಅಯನ್ನಾ ಉಗುರಿಗೆ ಬಿತ್ತು ಕತ್ತರಿ!!

ಚಿತ್ರ ಕೃಪೆ-ಇಂಟರ್ನೆಟ್‌‌

ಅಮೆರಿಕ: ವಿಶ್ವದಲ್ಲಿ ಅತಿ ಉದ್ದದ ಕೈ ಬೆರಳಿನ ಉಗುರು ಬೆಳೆಸಿದ್ದ ಅಮೆರಿಕಾದ ಅಯನ್ನಾ ವಿಲಿಯಮ್ಸ್‌ ಮೂರು ದಶಕಗಳ ನಂತರ ತಮ್ಮ ನಖಗಳನ್ನು ಕತ್ತರಿಸಿಕೊಂಡು ಸುದ್ದಿಯಾಗಿದ್ದಾರೆ.
ಅಯನ್ನಾ ಮೂವತ್ತು ವರ್ಷಗಳಿಂದ ತಮ್ಮ ಕೈಬೆರಳಿನ ಉಗುರುಗಳನ್ನು ಬೆಳೆಸಿಕೊಂಡಿದ್ದರು. ೨೦೧೭ರಲ್ಲಿ ಅಯನ್ನಾ ೧೯ ಅಡಿ ೧೦.೯ ಅಂಗುಲ ಉದ್ದ ಉಗುರು ಬೆಳೆಸಿ ವಿಶ್ವದಾಖಲೆ ಬರೆದಿದ್ದರು. ಪ್ರಸ್ತುತ ಅವರ ಉರುಗಿನ ಉದ್ದ ೨೪ ಅಡಿ ೦.೭ ಅಂಗುಲವಾಗಿದೆ. ಈಗ ಅವರು ತಮ್ಮದೇ ದಾಖಲೆಯನ್ನು ಮುರಿದಿದ್ದಾರೆ. ಉದ್ದ ಉಗುರುಗಳಿಂದಾಗಿಯೇ ಅಯನ್ನಾ ಸಹಸ್ರಾರು ಅಭಿಮಾನಿಗಳನ್ನು ಹೊಂದಿದ್ದರು. ಈಗ ಅಯನ್ನಾ ಅವರ ಉಗುರುಗಳನ್ನು ಕತ್ತರಿಸುತ್ತಿರುವ ೮ ೮ ನಿಮಿಷಗಳ ವಿಡಿಯೋ ವೈರಲ್‌ ಆಗಿದೆ.
ಟೆಕ್ಸಾಸ್‌ನ ಫೋರ್ತ್ ವರ್ತ್‌ನಲ್ಲಿರುವ ಟ್ರಿನಿಟಿ ವಿಸ್ಟಾ ಡರ್ಮಟಾಲಜಿಯ ಡಾ. ಆಲಿಸನ್ ರೀಡಿಂಗರ್, ಅಯನ್ನಾ ಅವರ ಉಗುರುಗಳನ್ನು ಕತ್ತರಿಸಿದ್ದಾರೆ. ಸಹಜವಾಗಿಯೇ ಅಯೆನ್ನಾ ಅವರಿಗೆ ಇದೊಂದು ಭಾವನಾತ್ಮಕ ಕ್ಷಣವಾಗಿತ್ತು. ನಾನು ಹಲವು ದಶಕದಿಂದ ಉಗುರುಗಳನ್ನು ಬೆಳೆಸಿದ್ದೇನೆ. ಈಗ ನಾನು ಹೊಸ ಜೀವನಕ್ಕೆ ಸಿದ್ಧಳಾಗಿದ್ದೇನೆ. ನಾನು ಉದ್ದನೇಯ ಉಗುರುಗಳನ್ನು ಮಿಸ್ ಮಾಡಿಕೊಳ್ಳುತ್ತೇನೆ ಎಂದು ಅಯೆನ್ನಾ ಹೇಳಿಕೊಂಡಿದ್ದಾರೆ.
ಸದ್ಯ ಡಾ ಆಲಿಸನ್ ಅಯೆನ್ನಾ ಅವರ ಉಗುರುಗಳನ್ನು ಕತ್ತರಿಸುವ 8 ನಿಮಿಷಗಳ ವಿಡಿಯೋವನ್ನು ಯುಟ್ಯೂಬ್‌ನಲ್ಲಿ ಹಂಚಿಕೊಳ್ಳಲಾಗಿದೆ. ಈ ವಿಡಿಯೋ ವಿವಿಧ ಸಾಮಾಜಿಕ ಮಾಧ್ಯಮ ಖಾತೆಯಲ್ಲಿಯೂ ವೈರಲ್ ಆಗುತ್ತಿದೆ.

ಪ್ರಮುಖ ಸುದ್ದಿ :-   27 ದೇಶಗಳಿಗೆ ಹರಡಿದ ಕೋವಿಡ್ ವೈರಸ್‌ ಹೊಸ ರೂಪಾಂತರಿ....!

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement