ಪಾಕಿಸ್ತಾನ: ಹಿಂದೂ ದೇಗುಲ ಪುನರ್‌ನಿರ್ಮಾಣಕ್ಕೆಸರ್ಕಾರದಿಂದ 3.48 ಕೋಟಿ ರೂ. ಬಿಡುಗಡೆ

ಪೇಶಾವರ: ಕಳೆದ ವರ್ಷ ಡಿಸೆಂಬರ್‌ನಲ್ಲಿ ಕೆಲವು ಸ್ಥಳೀಯ ಮೌಲ್ವಿಗಳು ಮತ್ತು ಇಸ್ಲಾಮಿಸ್ಟ್ ಪಕ್ಷದ ಜಮಿಯತ್ ಉಲೆಮಾ-ಇ-ಇಸ್ಲಾಂ ಸದಸ್ಯರ ನೇತೃತ್ವದ ಗುಂಪಿನಿಂದ ಹಾನಿಗೊಳಗಾಗಿದ್ದ ಹಿಂದೂ ದೇವಾಲಯದ ಪುನರ್ ನಿರ್ಮಾಣಕ್ಕಾಗಿ ಪಾಕಿಸ್ತಾನದ ಖೈಬರ್ ಪಕ್ತುನ್ಖ್ವಾ ಪ್ರಾಂತೀಯ ಸರ್ಕಾರ 3.48 ಕೋಟಿ ರೂ. ಬಿಡುಗಡೆ ಮಾಡಿದೆ.
ಶತಮಾನ ಹಳೆಯದಾದ ದೇವಾಲಯ ಮತ್ತು ಅದರ ಪಕ್ಕದ ‘ಸಮಾಧಿ’ ಮೇಲೆ ನಡೆದ ದಾಳಿಯನ್ನು ಮಾನವ ಹಕ್ಕುಗಳ ಕಾರ್ಯಕರ್ತರು ಮತ್ತು ಅಲ್ಪಸಂಖ್ಯಾತ ಹಿಂದೂ ಸಮುದಾಯದ ಮುಖಂಡರು ತೀವ್ರವಾಗಿ ಖಂಡಿಸಿದ್ದರು. ದೇವಾಲಯವನ್ನು ಶೀಘ್ರವಾಗಿ ಪೂರ್ಣಗೊಳಿಸುವಂತೆ ಸುಪ್ರೀಂ ಕೋರ್ಟ್ ಪ್ರಾಂತೀಯ ಸರ್ಕಾರಕ್ಕೆ ನಿರ್ದೇಶನ ನೀಡಿತ್ತು.
ಖೈಬರ್ ಪಖ್ತುನ್ಖ್ವಾ ಪ್ರಾಂತ್ಯದ ಕರಕ್ ಜಿಲ್ಲೆಯ ಟೆರ್ರಿ ಗ್ರಾಮದಲ್ಲಿ ಕಳೆದ ವರ್ಷ ಡಿಸೆಂಬರ್ 30ರಂದು ನಾಶ ಮಾಡಲಾಗಿದ್ದ ಶ್ರೀ ಪರಮಹನ್ಸ್ ಜೀ ಮಹಾರಾಜ್ ಅವರ ಸಮಾಧಿಯ ಪುನರ್ನಿರ್ಮಾಣಕ್ಕಾಗಿ ಪ್ರಾಂತೀಯ ಸರ್ಕಾರವು ಅಕಾಫ್ ಇಲಾಖೆಗೆ 3.48 ಕೋಟಿ ರೂ. ಬಿಡುಗಡೆ ಮಾಡಿದೆ.

advertisement

ಸುಂದರವಾದ ಮತ್ತು ವಿಶಾಲವಾದ ಸ್ಥಳದಲ್ಲಿ ನಿಮ್ಮ ರಜಾದಿನಗಳನ್ನು ಆನಂದಿಸಿು

ಉತ್ತರ ಕರ್ನಾಟಕದ ಅತಿ ದೊಡ್ಡ ರೆಸಾರ್ಟ್ ಮತ್ತು ಅಡ್ವೆಂಚರ್ ಪಾರ್ಕ್

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಮತ್ತು ವಿಚಾರಿಸಿ: 98867 84189

ಕನ್ನಡಿ ನ್ಯೂಸ್ ನ ದಿನದ ಪ್ರಮುಖ ಸುದ್ದಿಗಳು ಮತ್ತು ಮಾಹಿತಿಗಾಗಿ
ಟೆಲಿಗ್ರಾಮ್ ಚಾನೆಲ್ ಸೇರಿ
ವಾಟ್ಸಾಪ್ ಗ್ರೂಪ್ ಸೇರಿ
ಫೇಸ್ ಬುಕ್ ಫಾಲೋ ಮಾಡಿ
ಗೂಗಲ್ ನ್ಯೂಸ್ ನಲ್ಲಿ ಸೇರಿ
ಟ್ವಿಟರ್ ನಲ್ಲಿ ಫಾಲೋ ಮಾಡಿ
advertisement

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ.

(1. ಚೆನ್ನಾಗಿಲ್ಲ. 2. ಸಾಧಾರಣ. 3. ಪರವಾಗಿಲ್ಲ. 4. ಉತ್ತಮ . 5. ಅತ್ಯುತ್ತಮ)

ಓದಿರಿ :-   ಭೂಮಿಯ ಮೇಲಿನ ಐದು ಮಹಾಸಾಗರಗಳ ಬಗ್ಗೆ ಗೊತ್ತು: ಆದ್ರೆ ಈಗ ಆರನೇ ಮಹಾಸಾಗರ ಪತ್ತೆ...ಇಲ್ಲಿದೆ ಮಾಹಿತಿ

5 / 5. ಒಟ್ಟು ವೋಟುಗಳು 1

ನಿಮ್ಮ ಕಾಮೆಂಟ್ ಬರೆಯಿರಿ

advertisement