ಹಲವೆಡೆ ಗುಡುಗು ಸಹಿತ ಆಲಿಕಲ್ಲು ಮಳೆ

posted in: ರಾಜ್ಯ | 0

ಕುಂದಾಪುರ/ಹುಬ್ಬಳ್ಳಿ/ವಿಜಯಪುರ: ಕುಂದಾಪುರ ತಾಲೂಕಿನ ಹಲವಡೆ ಭಾನುವಾರ ಸಂಜೆ ಗಾಳಿ ಮಳೆಯಾಗಿದೆ. ಕೆಲವೆಡೆ ತೋಟದಲ್ಲಿ ಅಡಿಕೆ ಮರಗಳು, ಬಾಳೆ ಗಿಡಗಳು ಉರುಳಿಬಿದ್ದು ಅಪಾರ ಹಾನಿ ಸಂಭವಿಸಿದೆ.ಹಲವೆಡೆ ಆಲಿಕಲ್ಲುಗಳೂ ಬಿದ್ದಿವೆ.
ಸಿದ್ದಾಪುರ, ಹೊಸಂಗಡಿ, ಹಳ್ಳಿಹೊಳೆ, ಅಜ್ರಿ, ಶಂಕರನಾರಾಯಣ, ಹಾಲಾಡಿ, ಗೋಳಿಯಂಗಡಿ, ಉಳ್ಳೂರು ಮೊದಲಾದೆಡೆ ಗುಡುಗು ಸಿಡಿಲು ಸಹಿತ ಮಳೆಯಾಗಿದೆ.ಗೋಳಿಯಂಗಡಿ ಪೇಟೆಯಲ್ಲಿ ಧಾರಾಕಾರ ಮಳೆ ಸುರಿದು ವಾರದ ಸಂತೆಗೆ ತೊಂದರೆಯಾಗಿತ್ತು. ಮಾರಾಟಕ್ಕೆ ಇಟ್ಟ ವಸ್ತುಗಳು ಹಾಗೂ ದಿನನಿತ್ಯದ ಬಳಕೆ ಸಹಿತ ಇತರ ವಸ್ತುಗಳು ಮಳೆ ನೀರಿಗೆ ಒದ್ದೆಯಾಗಿವೆ.
ಹುಬ್ಬಳ್ಳಿ ಹಾಗೂ ಸುತ್ತಮುತ್ತ ಗುಡುಗು ಸಹಿತ ಮಳೆಯಾಗಿದೆ. ಸುಮಾರು ಒಂದು ತಾಸಿನ ಅಂತರದಲ್ಲಿ ಎರಡು ಸಲ ಸುಮಾರು ಅರ್ಧ ತಾಸಿನಂತೆ ಸಾಧಾರಣ ಮಳೆಯಾಗಿದೆ. ಆದರೆ ಗಾಳಿ ಜೋರಾಗಿತ್ತು.
ವಿಜಯಪುರ ಜಿಲ್ಲೆಯ ತಿಕೋಟಾ ಸಮೀಪದ ಘೋಣಸಗಿ ಗ್ರಾಮದಲ್ಲಿ ಭಾನುವಾರ ಸಂಜೆ ಆಲಿಕಲ್ಲು ಮಳೆಯಾಗಿದೆ. ಉಳಿದಂತೆ ವಿಜಯಪುರ ನಗರ ಸೇರಿದಂತೆ ಕೆಲವೆಡೆ ಗುಡುಗು, ಸಿಡಿಲು, ಗಾಳಿಯೊಂದಿಗೆ ಸಾಧಾರಣ ಮಳೆಯಾಗಿದೆ.

advertisement

ಸುಂದರವಾದ ಮತ್ತು ವಿಶಾಲವಾದ ಸ್ಥಳದಲ್ಲಿ ನಿಮ್ಮ ರಜಾದಿನಗಳನ್ನು ಆನಂದಿಸಿು

ಉತ್ತರ ಕರ್ನಾಟಕದ ಅತಿ ದೊಡ್ಡ ರೆಸಾರ್ಟ್ ಮತ್ತು ಅಡ್ವೆಂಚರ್ ಪಾರ್ಕ್

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಮತ್ತು ವಿಚಾರಿಸಿ: 98867 84189

ಕನ್ನಡಿ ನ್ಯೂಸ್ ನ ದಿನದ ಪ್ರಮುಖ ಸುದ್ದಿಗಳು ಮತ್ತು ಮಾಹಿತಿಗಾಗಿ
ಟೆಲಿಗ್ರಾಮ್ ಚಾನೆಲ್ ಸೇರಿ
ವಾಟ್ಸಾಪ್ ಗ್ರೂಪ್ ಸೇರಿ
ಫೇಸ್ ಬುಕ್ ಫಾಲೋ ಮಾಡಿ
ಗೂಗಲ್ ನ್ಯೂಸ್ ನಲ್ಲಿ ಸೇರಿ
ಟ್ವಿಟರ್ ನಲ್ಲಿ ಫಾಲೋ ಮಾಡಿ
advertisement

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ.

(1. ಚೆನ್ನಾಗಿಲ್ಲ. 2. ಸಾಧಾರಣ. 3. ಪರವಾಗಿಲ್ಲ. 4. ಉತ್ತಮ . 5. ಅತ್ಯುತ್ತಮ)

ಓದಿರಿ :-   ಭಾರತದ ಎಲ್ಲ ರಾಜ್ಯಗಳು, ಅನೇಕ ದೇಶಗಳನ್ನು ಹೆಸರನ್ನು ಭೂಪಟ-ಧ್ವಜ ನೋಡಿಯೇ ಹೇಳುವ 18 ತಿಂಗಳ ಪುಟ್ಟಪೋರ ಅನಿಕೇತ ಭಟ್‌...!

5 / 5. ಒಟ್ಟು ವೋಟುಗಳು 4

ನಿಮ್ಮ ಕಾಮೆಂಟ್ ಬರೆಯಿರಿ

advertisement