ಕೊರೊನಾ ಸೋಂಕಿಗೊಳಗಾದ ಶೇ.34 ಜನರಿಗೆ ಕಾಡುವ ಸಮಸ್ಯೆಗಳು: ಡಬ್ಲುಎಚ್‌ಒ ಮುಖ್ಯಸ್ಥರು ಹೇಳಿದ್ದೇನು?

ಜಿನಿವಾ: ಕೊರೊನಾ ಸೋಂಕಿನಿಂದ ಚೇತರಿಸಿಕೊಂಡ ನಂತರವೂ ಹಲವಾರು ಸಮಸ್ಯೆಗಳು ಪ್ರಾರಂಭವಾಗುತ್ತವೆ ಎಂದು ಸಂಶೋಧನೆ ಹೇಳುತ್ತದೆ ಎಂದು ವಿಶ್ವ ಆರೋಗ್ಯ ಸಂಸ್ಥೆ(ಡಬ್ಲುಎಚ್‌ ಒ) ಮಹಾನಿರ್ದೇಶಕ ಟೆಡ್ರೊಸ್ ಅಧಾನೊಮ್ ಎಚ್ಚರಿಸಿದ್ದಾರೆ.
ಕೊರೊನಾ ಸೋಂಕಿನಿಂದ ಚೇತರಿಸಿಕೊಳ್ಳುವ ಪ್ರತಿ ಮೂವರಲ್ಲಿ ಒಬ್ಬರು ನರ ಸಮಸ್ಯೆಗಳು ಅಥವಾ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದಾರೆ. ಕೊರೊನಾ ಸೋಂಕು ತಗುಲಿದ ಮೊದಲ ಆರು ತಿಂಗಳಲ್ಲಿ ಸುಮಾರು ಶೇ. 34ರಷ್ಟು ಜನರ ಮೇಲೆ ಬೇರೆಬೇರೆ ಋಣಾತ್ಮಕ ಪ್ರಭಾವ ಉಂಟಾಗಿದೆ ಎಂದು ಅವರು ಹೇಳಿದ್ದಾರೆ.
ಕೊರೊನಾದಿಂದ ಚೇತರಿಸಿಕೊಂಡ ಶೇ.17 ಮಂದಿಯಲ್ಲಿ ಆತಂಕ, ಶೇ. 14ರಷ್ಟು ಜನರಲ್ಲಿ ಮನಃಸ್ಥಿತಿ ಬದಲಾವಣೆ ಸಮಸ್ಯೆ ಎದುರಿಸುತ್ತಿದ್ದಾರೆ. ಶೇ.13ರಷ್ಟು ಜನರು ಮೊದಲ ಬಾರಿಗೆ ಮಾನಸಿಕ ಸಮಸ್ಯೆ ಎದುರಿಸುತ್ತಿದ್ದಾರೆ. ಸೆರೆಬ್ರಲ್ ರಕ್ತಸ್ರಾವ ಶೇ.0.6, ಪಾರ್ಶ್ವವಾಯು ಶೇ.2.1 ಹಾಗೂ ಮರೆವು ಶೇ. 0.7 ರಷ್ಟು ಮಂದಿಯಲ್ಲಿ ಕಂಡುಬರುತ್ತದೆ ಎಂದು ಸಂಶೋಧನೆ ಹೇಳಿದೆ ಎಂದು ತಿಳಿಸಿದ್ದಾರೆ.
ಜ್ವರ ಮತ್ತು ಇತರ ಉಸಿರಾಟದ ಸೋಂಕುಗಳಿಗಿಂತ ಕೊರೊನಾ ಹೆಚ್ಚು ಅಪಾಯಕಾರಿ ಎಂದು ಸಂಶೋಧಕರು ಹೇಳುತ್ತಾರೆ.ಕೊರೊನಾ ಸಾಂಕ್ರಾಮಿಕ ಎದುರಿಸಲು ವಿಶ್ವದ ರಾಷ್ಟ್ರಗಳು ಕಷ್ಟ ಪಡುತ್ತಿವೆ. ಕೊರೊನಾ ಎದುರಿಸುವಲ್ಲಿ ಸಾಕಷ್ಟು ಗೊಂದಲಗಳಿವೆ. ನಮ್ಮ ಬೇಜವಾಬ್ದಾರಿತನದಿಂದಾಗಿ ಸಾಂಕ್ರಾಮಿಕ ಅಂತ್ಯಗೊಳ್ಳಲು ನಾವು ಇನ್ನು ಬಹು ದೂರ ಕ್ರಮಿಸಬೇಕಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ(ಡಬ್ಲ್ಯುಎಚ್ ಒ) ಮಹಾನಿರ್ದೇಶಕ ಟೆಡ್ರೊಸ್ ಅಧಾನೊಮ್ ಹೇಳಿದ್ದಾರೆ.
ಅತ್ಯಾಧುನಿಕ ವೈದ್ಯಕೀಯ ಕ್ರಮಗಳ ಮೂಲಕ ಕೆಲ ತಿಂಗಳ ಅವಧಿಯಲ್ಲಿ ಕೊರೊನಾ ಸಾಂಕ್ರಾಮಿಕ ನಿಯಂತ್ರಿಸಬಹುದು ಎಂಬುದಂತೂ ಗೊತ್ತಾಗಿದೆ. ಈ ವರ್ಷದ ಮೊದಲ ಎರಡು ತಿಂಗಳ ಅಂಕಿ ಅಂಶ ನೋಡಿದರೆ ಅದು ನಮಗೆ ಗೊತ್ತಾಗುತ್ತದೆಕಳೆದ ಎರಡು ತಿಂಗಳಲ್ಲಿ ಸಾವು, ಹೊಸ ಪ್ರಕರಣಗಳ ಸಂಖ್ಯೆ ತೀವ್ರವಾಗಿ ಕುಸಿದಿದೆ,
ಆದರೆ ಕಳೆದ ಎರಡು ವಾರಗಳಲ್ಲಿ ಪ್ರಕರಣಗಳ ಸಂಖ್ಯೆಯಲ್ಲಿ ಶೇ. 9ರಷ್ಟು ಹೆಚ್ಚಳವಾಗಿದೆ.ಸಾವಿನ ಪ್ರಮಾಣಗಳಲ್ಲಿಯೂ ಹೆಚ್ಚಳವಾಗಿದೆ. ಕೆಲವು ದೇಶಗಳಲ್ಲಿ ಕೊರೊನಾ ಹೆಚ್ಚಳಗೊಂಡಿದ್ದರೂ ನೈಟ್ ಕ್ಲಬ್ ಗಳು, ರೆಸ್ಟೋರೆಂಟ್ ಗಳು ಹಾಗೂ ಮಾರುಕಟ್ಟೆಗಳು ಜನ ದಟ್ಟಣಿಯಿಂದ ತುಂಬಿ ತುಳುಕುತ್ತಿವೆ. ಈ ಬೇಜವ್ದಾರಿತನ ತೊಲಗಬೇಕು. ಅಂದಾಗ ಮಾತ್ರ ಕೊರೊನಾದಿಂದ ನಾವು ಬೇಗ ಹೊರಗೆ ಬರಬಹುದು ಎಂದು ಅವರು ಹೇಳಿದ್ದಾರೆ.

5 / 5. 3

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement