ಪಾಕಿಸ್ತಾನಕ್ಕೆ ದೊಡ್ಡ ಶಾಕ್‌ ನೀಡಿದ ಬ್ರಿಟನ್‌

ಲಂಡನ್: ಮೊದಲೇ ಕೊರೊನಾ ವೈರಸ್ ಹಾಗೂ ಹಣದುಬ್ಬರದಿಂದಾಗಿ ತತ್ತರಿಸಿರುವ ಪಾಕಿಸ್ತಾನಕ್ಕೆ ಬ್ರಿಟನ್ ಶಾಕ್‌ ನೀಡಿದೆ. ಬ್ರಿಟನ್‌, ಹೆಚ್ಚಿನ ಅಪಾಯದ ದೇಶಗಳ ವಿಭಾಗದಲ್ಲಿ ಪಾಕಿಸ್ತಾನವನ್ನೂ ಸೇರಿಸಿದೆ.
ಬ್ರಿಟನ್‌, ಮನಿ ಲಾಂಡರಿಂಗ್ ಮ್ತು ಭಯೋತ್ಪಾನೆಗೆ ಹಣಕಾಸು ಮಾಡುವ ಕುರಿತಾಗಿನ ತನ್ನ ನಿಯಮಗಳಿಗೆ ತಿದ್ದುಪಡಿ ತಂದಿದ್ದು, ಇದರ ಅಡಿ ಮನಿ ಲಾಂಡರಿಂಗ್ ಹಾಗೂ ಭಯೋತ್ಪಾದಕ ಹಣಕಾಸು ವ್ಯವಸ್ಥೆಗೆ ಹೆಚ್ಚು ಒಳಗಾದ ದೇಶಗಳ ಪಟ್ಟಿಯಲ್ಲಿ ಜೊತೆಗೆ ಪಾಕಿಸ್ತಾನವೂ ಸ್ಥಾನ ಪಡೆದಿದೆ.ಉತ್ತರ ಕೊರಿಯಾ, ಸಿರಿಯಾ, ಜಿಂಬಾಬ್ವೆ, ಸಿರಿಯಾ, ಯೆಮೆನ್ ಇತರ ದೇಶಗಳು.
ಕಳೆದ ತಿಂಗಳು ಬ್ರಿಟನ್‌ ಮನಿ ಲಾಂಡರಿಂಗ್, ಟೆರರ್ ಫೈನಾನ್ಸಿಂಗ್ ಮತ್ತು ಫಂಡ್ಸ್ ಟ್ರಾನ್ಸ್ಫರ್ ಆಕ್ಟ್ 2017 ಅನ್ನು ತಿದ್ದುಪಡಿ ಮಾಡಿದ್ದು, ಇದು ಮಾರ್ಚ್ 26 ರಿಂದ ಜಾರಿಗೆ ಬಂದಿದೆ. ಈ ತಿದ್ದುಪಡಿಯ ಮೂಲಕ ಭಯೋತ್ಪಾದನೆಗೆ ಹಣಕಾಸು ಒದಗಿಸುವ ದೇಶಗಳಲ್ಲಿ ಪಾಕಿಸ್ತಾನವೂ ಒಂದು ಎಂದು ಬ್ರಿಟನ್ ಸ್ಪಷ್ಟಪಡಿಸಿದೆ. ಬ್ರಿಟನ್‌ ಕೈಗೊಂಡ ಈ ಕ್ರಮಗೀಂದಾಗಿ ಮೊದಲೇ ಆರ್ಥಿಕವಾಗಿ ತೀವ್ರ ತೊಂದರೆಯಲ್ಲಿರುವ ಪಾಕಿಸ್ತಾನಕ್ಕೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಅಲ್ಲದೆ ಅಂತಾರಾಷ್ಟ್ರೀಯವಾಗಿ ಅಂ ಪಾಕಿಸ್ತಾನ’ದ ಚಿತ್ರದ ಮೇಲೆ ಋಣಾತ್ಮಕ ಪರಿಣಾಮ ಬೀರಲಿದೆ.
ಪಾಕಿಸ್ತಾನದಿಂದ ಆಕ್ಷೇಪ:
ಬ್ರಿಟನ್‌ನ ಈ ಕ್ರಮಕ್ಕೆ ಪಾಕಿಸ್ತಾನ ಆಕ್ಷೇಪ ವ್ಯಕ್ತಪಡಿಸಿದೆ. ಬ್ರಿಟನ್‌ ತಾನು ಕೈಗೊಂಡ ನಿರ್ದಾರವನ್ನು ಪುನರ್‌ ಪರಿಶೀಲಿಸಬೇಕು. ಬ್ರಿಟನ್‌ ಕ್ರಮಗಳು ವಾಸ್ತವಿಕ ನೆಲೆಗಟ್ಟಿನಲ್ಲಿ ಇಲ್ಲ ಎಂದು ಪಾಕಿಸ್ತಾನ ಹೇಳಿದೆ. ಆದರೆ, ಪಾಕಿಸ್ತಾನದ ಮನವಿಗೆ ಬ್ರಿಟನ್ ಪ್ರತಿಕ್ರಿಯಿಸಿಲ್ಲ.

ಪ್ರಮುಖ ಸುದ್ದಿ :-   ವೀಡಿಯೊ...: ಭಾರೀ ಮಳೆ-ಬಿರುಗಾಳಿಯ ನಡುವೆ ಹಸಿರು ಬಣ್ಣಕ್ಕೆ ತಿರುಗಿದ ದುಬೈನ ಆಕಾಶ...!

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement