ಕೇವಲ 9 ದಿನದಲ್ಲಿಯೇ ಭಾರತದಲ್ಲಿ 1 ಲಕ್ಷದಿಂದ 2ಲಕ್ಷಕ್ಕೆ ಜಿಗಿದ ದೈನಂದಿನ ಕೊರೊನಾ ಸೋಂಕು …!!

ನವ ದೆಹಲಿ: ದೇಶದಲ್ಲಿ ಎರಡನೇ ಅಲೆಯಲ್ಲಿ ಕೊರೋನಾ ಸಾಂಕ್ರಾಮಿಕ ವೇಗವಾಗಿ ಹರಡುತ್ತಿದೆ..ಹಲವು ರಾಜ್ಯಗಳಲ್ಲಿ ನಿರ್ಬಂಧಗಳ ವಿಧಿಸಲಾಗಿದ್ದರೂ ಕೊರೊನಾ ಸೋಂಕು ಹೆಚ್ಚುತ್ತಲೇ ಇದೆ.
ಗುರುವಾರ 2,00,739 ಹೊಸ ಪ್ರಕರಣಗಳು ವರದಿಯಾಗಿದ್ದು ಸತತ ಎರಡನೇ ದಿನ ಸಾವಿರಕ್ಕೂ ಹೆಚ್ಚು ಜನ ಮೃತಪಟ್ಟಿದ್ದಾರೆ…!
ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾದವರು 93,528 ಜನ ಮಾತ್ರ. ದೇಶದಲ್ಲಿ ಈವರೆಗೆ ಕೊರೋನಾ ಸೋಂಕು ಪೀಡಿತರ ಒಟ್ಟು ಸಂಖ್ಯೆ 1,40,74,564ಕ್ಕೆ ಏರಿಕೆ ಆಗಿದೆ.‌ ಈ ರೋಗಕ್ಕೆ 1,038 ಜನರು ಮೃತಪಟ್ಟಿದ್ದಾರೆ ಎಂದು ಗುರುವಾರ ಆರೋಗ್ಯ ಇಲಾಖೆ ಹೆಲ್ತ್‌ ಬುಲೆಟಿನ್‌ ತಿಳಿಸಿದೆ. ದೇಶದಲ್ಲಿ ಮೃತಪಟ್ಟವರ ಸಂಖ್ಯೆ 1,73,123ಕ್ಕೆ ಏರಿಕೆ ಆಗಿದೆ.
ಸಾಂಕ್ರಾಮಿಕ ರೋಗ ಹರಡಿದ ನಂತರದಿಂದ ದೈನಂದಿನ ಪ್ರಕರಣ ಒಂದು ಲಕ್ಷ ದಾಟಿದ್ದು ದೇಶದಲ್ಲಿ ಏಪ್ರಿಲ್ ‌6ರಂದು. ಆದರೆ ಅಲ್ಲಿಂದ ಅದು ಏರಿಕೆಯಾಗುತ್ತ ಬಂದು ಗುರುವಾರದ ಆರೋಗ್ಯ ಇಲಾಖೆ ವರದಿಯಂತೆ ಎರಡು ಲಕ್ಷ ಪ್ರಕರಣಗಳನ್ನು ದಾಟಿದೆ. ಅಂದರೆ ಕೇವಲ ಹತ್ತು ದಿನಗಳ ಅಂತರದಲ್ಲಿ ಅದು ಎರಡು ಪಟ್ಟು ಹೆಚ್ಚು ದೈನಂದಿನ ಪ್ರಕರಣಕ್ಕೆ ಕಾರಣವಾಗಿದೆ ಎಂದರೆ ಅದರ ಹರಡುವ ವೇಗ ಎಷ್ಟದೆ ಎಂದು ಊಹಿಸಬಹುದಾಗಿದೆ. ಏಪ್ರಿಲ್ 5ರಂದು 96,982, ಏಪ್ರಿಲ್ ‌6ರಂದು 1,15,736, ಏಪ್ರಿಲ್ 7ರಂದು 1,26,789, ಏಪ್ರಿಲ್ 8ರಂದು 1,31,968, ಏಪ್ರಿಲ್ 9ರಂದು 1,45,384, ಏಪ್ರಿಲ್ 10ರಂದು 1,52,879, ಏಪ್ರಿಲ್ 11ರಂದು 1,68,912, ಏಪ್ರಿಲ್ 12ರಂದು 1,61,736 ಪ್ರಕರಣಗಳು ಹಾಗೂ ಏಪ್ರಿಲ್ 13ರಂದು 1,84,372 ಹೊಸ ಪ್ರಕರಣಗಳು ಕಂಡುಬಂದಿದ್ದವು. ಈಗ ಏಪ್ರಿಲ್ 14ರಂದು 2,00,739 ಹೊಸ ಪ್ರಕರಣಗಳು ಕಂಡುಬಂದಿವೆ. ಮಾರನೇ ದಿನ ಪ್ರಕರಣದ ವರದಿಯಾಗುತ್ತದೆ.
ಕೊರೋನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಲಸಿಕೆ ಹಾಕುವ ಕಾರ್ಯವನ್ನು ಹಂತ ಹಂತವಾಗಿ ತೀವ್ರಗೊಳಿಸಲಾಗುತ್ತದೆ. ಈವರೆಗೆ ದೇಶಾದ್ಯಂತ ಒಟ್ಟು 11,44,93,238 ಜನರಿಗೆ ಲಸಿಕೆ ಹಾಕಲಾಗಿದೆ.

ಪ್ರಮುಖ ಸುದ್ದಿ :-   ಶಿಂಧೆ ಬಣದ ಶಿವಸೇನೆ ಸೇರಿದ ಬಾಲಿವುಡ್‌ ನಟ ಗೋವಿಂದ : 14 ವರ್ಷಗಳ ವನವಾಸದ ನಂತರ ರಾಜಕೀಯಕ್ಕೆ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement