ಕೋವಿಡ್‌ ಎರಡನೇ ಅಲೆಯಲ್ಲಿ ಹೊಸ ಲಕ್ಷಣಗಳೊಂದಿಗೂ ಕಾಣಿಸಿಕೊಳ್ಳುತ್ತಿರುವ ಕೊರೊನಾ ವೈರಸ್..!

ನವ ದೆಹಲಿ : ದೇಶದಲ್ಲಿ ಮತ್ತೆ ಕೊರೊನಾ ವೈರಸ್ಪ್ರಕರಣಗಳು ಹೆಚ್ಚುತ್ತಿವೆ. ಈ ಬಾರಿ ಸೋಂಕಿತರ ಸಂಖ್ಯೆಯಲ್ಲಿ ಅತಿ ವೇಗದಲ್ಲಿ ಹೆಚ್ಚಳ ಕಂಡು ಬರುತ್ತಿದ್ದು, ಕೇವಲ ಒಂಭತ್ತು ದಿನಗಳಲೇ ಒಂದು ಲಕ್ಷ ದೈನಂದಿನ ಪ್ರಕರಣದಿಂದ ಎರಡು ಲಕ್ಷ ದೈನಂದಿನ ಪ್ರಕರಣಗಳಿಗೆ ಜಿಗಿದೆ. ಸೋಂಕಿತರಲ್ಲಿ ದಿನೇ ದಿನೇ ಹೊಸ ಹೊಸ ಲಕ್ಷಣಗಳು ಸಹ ಕಂಡುಬರುತ್ತಿವೆ.ಹಾಗಾದರೆ ಕೊರೊನಾ ಸೋಂಕಿಗೆ ಒಳಪಟ್ಟಿರುವುದನ್ನು ತಿಳಿದುಕೊಳ್ಳುವುದು ಹೇಗೆ ಎಂಬ ಪ್ರಶ್ನೆಯೂ ಉದ್ಭವವಾಗುತ್ತದೆ.
ಇಲ್ಲಿಯವರೆಗೆ ಶೀತ, ಕೆಮ್ಮು, ಜ್ವರ, ತಲೆನೋವು ಇವೆಲ್ಲಾ ಕೊರೊನಾ ವೈರಸ್ ಲಕ್ಷಣಗಳು ಎಂದು ಹೇಳಲಾಗುತ್ತಿತ್ತು. ಆದರೆ ಈಗ ಎರಡನೇ ಅಲೆಯಲ್ಲಿ ಹೊಸ ಹೊಸ ಲಕ್ಷಣಗಳು ಕಾಣಿಸಿಕೊಳ್ಳುತ್ತಿವೆ.
ಮೊದಲ ಕೋವಿಡ್‌ ಅಲೆಯಲ್ಲಿ ಶೀತ, ಕೆಮ್ಮು, ಜ್ವರ, ಉಸಿರಾಟದ ತೊಂದರೆಯಿದ್ದರೆ ಅಂಥವರು ಜಾಗರೂಕರಾಗಿರಬೇಕು ಕೋವಿಡ್-19 ಪರೀಕ್ಷೆಗೆ ಒಳಗಾಗಬೇಕು ಎಂದೆಲ್ಲಾ ಹೇಳಲಾಗುತ್ತಿತ್ತು. ಸರ್ಕಾರವೂ ಇದನ್ನು ಪ್ರಚುರ ಪಡಿಸುತ್ತಿತ್ತು. ಆದರೆ ಈಗ ಕೋವಿಡ್-19 ಎರಡನೇ ಅಲೆಯಲ್ಲಿ ಇನ್ನೂ ಅನೇಕ ಲಕ್ಷಣಗಳು ಕಾಣಿಸಿಕೊಂಡಿವೆ. ವೈದ್ಯರು ಕೂಡಾ ಹೊಸ ಲಕ್ಷಣಗಳು ಕಾಣಿಸಿಕೊಳ್ಳುತ್ತಿರುವುದನ್ನು ದೃಢಪಡಿಸಿದ್ದಾರೆ.
ತಜ್ಞರು ಹೇಳುವ ಪ್ರಕಾರ,
* ಇದು ಓರಲ್ ಸಿಸ್ಟಮ್ (Oral System) ಮೇಲೆ ಪರಿಣಾಮ ಬೀರಲಿದೆ. ಇದು ನಾಲಿಗೆಯ (Tongue) ಮೇಲೆ ಸುಡುವ ಸಂವೇದನೆ, ಒಂಥರ ಕಿರಿಕಿರಿಯನ್ನುಂಟು ಮಾಡುತ್ತದೆ. ಅನೇಕ ಜನರು ಬಾಯಿಯಲ್ಲಿ ಹುಣ್ಣುಗಳಾಗುವ ಬಗ್ಗೆಯೂ ಹೇಳುತ್ತಿದ್ದಾರೆ. ವೈದ್ಯರು ಇದನ್ನು ಕೋವಿಡ್ ಟಂಗ್ ಎಂದೂ ಕರೆಯುತ್ತಿದ್ದಾರೆ.
* ಹೊಟ್ಟೆ ನೋವು, ವಾಂತಿ , ಅತಿಸಾರ
* ಕೆಲವು ಸಂದರ್ಭಗಳಲ್ಲಿ ಕಂಜಕೆಕ್ಟಿವ್ ಐಸ್, ಕಣ್ಣುಗಳಲ್ಲಿ ನೀರು ಬರುವುದು, ಮಸುಕಾಗುವುದು ಅಥವಾ ಕೆಂಪಾಗುವುದು.
* ತೀವ್ರ ಸ್ನಾಯು ನೋವು ಅಥವಾ ಚರ್ಮದ ಸೋಂಕು.
* ದೇಹದಲ್ಲಿ ನಿಶ್ಯಕ್ತಿ ಕಾಡುತ್ತದೆ, ಎದ್ದು ನಿಲ್ಲುವುದಕ್ಕೂ ಸಾಧ್ಯವಾಗುವುದಿಲ್ಲ. ಇವರಲ್ಲಿ ಹಸಿವು ಕೂಡಾ ಕಡಿಮೆಯಾಗುತ್ತದೆ.
ಹೊಸ ಲಕ್ಷಣಗಳು ಅಂದ ತಕ್ಷಣ ಹಳೆಯ ರೋಗಲಕ್ಷಣಗಳನ್ನು ಕಾಣಿಸಿಕೊಳ್ಳುವುದಿಲ್ಲ ಎಂದರ್ಥವಲ್ಲ. ಇನ್ನೂ, ಹೆಚ್ಚಿನ ಸಂಖ್ಯೆಯ ಸೋಂಕಿತ ಜನರಿಗೆ ಜ್ವರ, ಶೀತ, ಕೆಮ್ಮು, ಉಸಿರಾಟದ ತೊಂದರೆ, ಮೈ ಕೈ ನೋವು ಕಾಣಿಸಿಕೊಳ್ಳುತ್ತಿದೆ. ಅದರ ಜೊತೆಗೆ ಇವೆಲ್ಲವೂ ಕಾಣಿಸಿಕೊಳ್ಳುವ ಹೊಸ ಲಕ್ಷಣಗಳಾಗಿವೆ.

ಪ್ರಮುಖ ಸುದ್ದಿ :-   ಮಣಿಪುರ : ಮತಗಟ್ಟೆ ಮೇಲೆ ಗುಂಡಿನ ದಾಳಿ; ದಿಕ್ಕಾ ಪಾಲಾಗಿ ಓಡಿದ ಮತದಾರರು

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement