ಭಾರತದಲ್ಲಿ ಮುಂದುವರಿದ ದೈನಂದಿನ ಕೊರೊನಾ ಸೋಂಕಿನ ದಾಖಲೆ ಏರಿಕೆ ಗ್ರಾಫ್‌..ಸಾವಿನ ಸಂಖ್ಯೆಯೂ ಏರಿಕೆ..!

ನವ ದೆಹಲಿ: ಭಾರತದಲ್ಲಿ ಕಳೆದ ಇಪ್ಪತ್ನಾಲ್ಕು ತಾಸಿನಲ್ಲಿ ದಾಖಲೆಯ ದೈನಂದಿನ 2,34,692 ಕೊರೊನಾ ಸೋಂಕು ದಾಖಲಾಗಿದೆ, ಮತ್ತು 1,341 ಸಾವುಗಳು ವರದಿಯಾಗಿವೆ.
ಭಾರತದ ಕೋವಿಡ್ -19 ಸಂಖ್ಯೆ 1,45,26,609 ಕ್ಕೆ ಏರಿದ್ದು, ಮತ್ತು ಮೃತಪಟ್ಟವರ ಸಂಖ್ಯೆ 1,75,649 ಕ್ಕೆ ತಲುಪಿದೆ ಎಂದು ಆರೋಗ್ಯ ಸಚಿವಾಲಯ ಶನಿವಾರ ತಿಳಿಸಿದೆ. .
ದೇಶದಲ್ಲಿ ಸಕ್ರಿಯ ಕಕೊರೊನಾ ವೈರಸ್ ಪ್ರಕರಣಗಳ ಸಂಖ್ಯೆ 16 ಲಕ್ಷ ಮೀರಿದೆ ಎಂದು ಬೆಳಿಗ್ಗೆ 8 ಗಂಟೆಗೆ ನವೀಕರಿಸಿದ ಸಚಿವಾಲಯದ ಮಾಹಿತಿಯು ತೋರಿಸಿದೆ.ಸತತ 38 ನೇ ದಿನಕ್ಕೆ ಸ್ಥಿರವಾದ ಹೆಚ್ಚಳ ದಾಖಲಿಸಿದ ಕೋವಿಡ್‌-19 ಪ್ರಕರಣಗಳು ದೇಶದಲ್ಲಿ 16,79,740 ಕ್ಕೆ ಏರಿದೆ. ಅದರ ಒಟ್ಟು ಕ್ಯಾಸೆಲೋಡ್‌ನ ಶೇಕಡಾ 11.56 ರಷ್ಟಿದೆ, ರಾಷ್ಟ್ರೀಯ ಕೋವಿಡ್‌-19 ಚೇತರಿಕೆ ದರ ಕುಸಿದು ಶೇ 87.23 ಕ್ಕೆ ತಲುಪಿದೆ.
ರೋಗದಿಂದ ಚೇತರಿಸಿಕೊಂಡವರ ಸಂಖ್ಯೆ 1,26,71,220 ಕ್ಕೆ ಏರಿಕೆಯಾಗಿದ್ದು, ಪ್ರಕರಣದ ಸಾವಿನ ಪ್ರಮಾಣ ಶೇಕಡಾ 1.21 ಕ್ಕೆ ಇಳಿದಿದೆ ಎಂದು ಡೇಟಾ ತಿಳಿಸಿದೆ.
ಭಾರತದ ಕೋವಿಡ್‌ -19 ಮೊತ್ತವು ಕಳೆದ ವರ್ಷ ಆಗಸ್ಟ್ 7 ರಂದು 20 ಲಕ್ಷ, ಆಗಸ್ಟ್ 23 ರಂದು 30 ಲಕ್ಷ, ಸೆಪ್ಟೆಂಬರ್ 5 ರಂದು 40 ಲಕ್ಷ ಮತ್ತು ಸೆಪ್ಟೆಂಬರ್ 16 ರಂದು 50 ಲಕ್ಷ ದಾಟಿತ್ತು. ಇದು ಸೆಪ್ಟೆಂಬರ್ 28 ರಂದು 60 ಲಕ್ಷ, ಅಕ್ಟೋಬರ್ 11 ರಂದು 70 ಲಕ್ಷ, ಅಕ್ಟೋಬರ್ 29 ರಂದು 80 ಲಕ್ಷ, ನವೆಂಬರ್ 20 ರಂದು 90 ಲಕ್ಷ ಮತ್ತು ಡಿಸೆಂಬರ್ 19 ರಂದು ಒಂದು ಕೋಟಿ ಗಡಿ ದಾಟಿದೆ.
ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ಐಸಿಎಂಆರ್) ಪ್ರಕಾರ, ದೇಶದಲ್ಲಿ ವೈರಲ್ ಕಾಯಿಲೆಗೆ ಸಂಬಂಧಿಸಿದಂತೆ ಇದುವರೆಗೆ 26,49,72,022 ಮಾದರಿಗಳನ್ನು ಪರೀಕ್ಷಿಸಲಾಗಿದೆ, ಇದರಲ್ಲಿ ಶುಕ್ರವಾರದ 14,95,397 ಪರೀಕ್ಷೆ ಸೇರಿವೆ.

advertisement

ಸುಂದರವಾದ ಮತ್ತು ವಿಶಾಲವಾದ ಸ್ಥಳದಲ್ಲಿ ನಿಮ್ಮ ರಜಾದಿನಗಳನ್ನು ಆನಂದಿಸಿು

ಉತ್ತರ ಕರ್ನಾಟಕದ ಅತಿ ದೊಡ್ಡ ರೆಸಾರ್ಟ್ ಮತ್ತು ಅಡ್ವೆಂಚರ್ ಪಾರ್ಕ್

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಮತ್ತು ವಿಚಾರಿಸಿ: 98867 84189

ಕನ್ನಡಿ ನ್ಯೂಸ್ ನ ದಿನದ ಪ್ರಮುಖ ಸುದ್ದಿಗಳು ಮತ್ತು ಮಾಹಿತಿಗಾಗಿ
ಟೆಲಿಗ್ರಾಮ್ ಚಾನೆಲ್ ಸೇರಿ
ವಾಟ್ಸಾಪ್ ಗ್ರೂಪ್ ಸೇರಿ
ಫೇಸ್ ಬುಕ್ ಫಾಲೋ ಮಾಡಿ
ಗೂಗಲ್ ನ್ಯೂಸ್ ನಲ್ಲಿ ಸೇರಿ
ಟ್ವಿಟರ್ ನಲ್ಲಿ ಫಾಲೋ ಮಾಡಿ
advertisement

ಓದಿರಿ :-   ದೂರವಾಣಿ ಕರೆಗಳಿಗೆ ‘ಹಲೋ’ ಬದಲಿಗೆ ‘ವಂದೇ ಮಾತರಂ’ ಎಂದು ಉತ್ತರಿಸಿ: ಅಧಿಕಾರಿಗಳಿಗೆ ಮಹಾರಾಷ್ಟ್ರ ಸರ್ಕಾರದ ಸೂಚನೆ

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ.

(1. ಚೆನ್ನಾಗಿಲ್ಲ. 2. ಸಾಧಾರಣ. 3. ಪರವಾಗಿಲ್ಲ. 4. ಉತ್ತಮ . 5. ಅತ್ಯುತ್ತಮ)

5 / 5. ಒಟ್ಟು ವೋಟುಗಳು 1

ನಿಮ್ಮ ಕಾಮೆಂಟ್ ಬರೆಯಿರಿ

advertisement