ಭಾರತದಲ್ಲಿ ಏರುತ್ತಲೇ ಇದೆ ಕೊರೊನಾ ದೈನಂದಿನ ಸೋಂಕಿನ ಗ್ರಾಫ್‌..! 2.73 ಲಕ್ಷ ಪ್ರಕರಣ ದಾಖಲು..!!

ನವ ದೆಹಲಿ: ಭಾರತವು ಮತ್ತೊಂದು ಅತಿ ಹೆಚ್ಚು ಏಕದಿನ ಕೊರೊನಾ ವೈರಸ್‌ ಸೋಂಕು ದಾಖಲಿಸಿದ್ದು, ಕಳೆದ 24 ಗಂಟೆಗಳಲ್ಲಿ 2,73,810 ಕೊರೊನಾ ದೈನಂದಿನ ಸೋಂಕು ದಾಖಲಿಸಿದೆ.ಇದೇ ಅವಧಿಯಲ್ಲಿ ದಾಖಲೆಯ 1,619 ಹೊಸ ಸಾವುಗಳು ಸಂಭವಿಸಿವೆ,
ದೇಶದ ಒಟ್ಟು ಸೋಂಕಿತರ ಸಂಖ್ಯೆ 1,50,61,919 ಕ್ಕೆ ತಲುಪಿದೆ. ರಾಷ್ಟ್ರವ್ಯಾಪಿ ಸಾವಿನ ಸಂಖ್ಯೆ 1,78,769 ಕ್ಕೆ ತಲುಪಿದೆ.
ಕಳೆದ 24 ಗಂಟೆಗಳಲ್ಲಿ ‌ 1,44,178 ಬಿಡುಗಡೆಯಾಗಿದ್ದು, ಬಿಡುಗಡೆಯ ಸಂಖ್ಯೆ 1,29,53,821ಕ್ಕೆ ತಲುಪಿದೆ. ಸಕ್ರಿಯ ಆರೋಗ್ಯ ಪ್ರಕರಣಗಳು 19 ಲಕ್ಷ ದಾಟಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿ ಅಂಶಗಳು ತಿಳಿಸಿವೆ. ಸಕ್ರಿಯ ಪ್ರಕರಣಗಳು 19,29,329 ಪ್ರಕರಣಗಳನ್ನು ತಲುಪಿದೆ.
ದೇಶದಲ್ಲಿ ಒಟ್ಟು ದೈನಂದಿನ ಪ್ರಕರಣಗಳಲ್ಲಿ ಹೆಚ್ಚಳವು ಮುಖ್ಯವಾಗಿ ಮಹಾರಾಷ್ಟ್ರ, ಉತ್ತರ ಪ್ರದೇಶ, ದೆಹಲಿ, ಕರ್ನಾಟಕ, ಕೇರಳ, ತಮಿಳುನಾಡು, ಪಂಜಾಬ್‌, ಗುಜರಾತ್‌, ಛತ್ತೀಸಗಡ ಈ ರಾಜ್ಯಗಳಲ್ಲಿ ವರದಿಯಾಗುತ್ತಿವೆ. ಇದರಲ್ಲಿ ಮಹಾರಾಷ್ಟ್ರದಲ್ಲಿ ಭಾನುವಾರ 68 ಸಾವಿರಕ್ಕೂ ಹೆಚ್ಚು ಪ್ರಕರಣಗಳು ಹಾಗೂ ಉತ್ತರ ಪ್ರದೇಶದಲ್ಲಿ 30 ಸಾವಿರಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗಿವೆ.

ಪ್ರಮುಖ ಸುದ್ದಿ :-   ಇವಿಎಂ ಮತಗಳ ಜೊತೆ ವಿವಿಪ್ಯಾಟ್ ಮತಗಳ ಸಂಪೂರ್ಣ ಎಣಿಕೆ : ಎಲ್ಲ ಅರ್ಜಿಗಳನ್ನು ವಜಾ ಮಾಡಿದ ಸುಪ್ರೀಂ ಕೋರ್ಟ್

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement