ಡಬಲ್‌ ಮಾಸ್ಕ್‌ ಯಾಕೆ ಸುರಕ್ಷಿತ..ಹೊಸ ಅಧ್ಯಯನದಲ್ಲಿ ಬೆಳಕಿಗೆ

ಕೊರೊನಾ ವೈರಸ್​ ವಿರುದ್ಧ ರಕ್ಷಿಸಿಕೊಳ್ಳಲು ಮಾಸ್ಕ್‌ ಈಗ ಅನಿವಾರ್ಯ ಸಾಧನವಾಗಿದೆ. ಈಗ ಮಾಸ್ಕ್​ಗಳ ಸಂಬಂಧಕೂಡ ಅಧ್ಯಯನ ನಡೆದಿದ್ದು, ಎರಡು ಮಾಸ್ಕ್‌ ಒಟ್ಟಿಗೆ ಧರಿಸುವುದರಿಂದ ಕೊರೊನಾದಂತಹ ವೈರಸ್​ಗಳಿಂದ ನಾವು ಹೆಚ್ಚಿನ ಪ್ರಮಾಣದಲ್ಲಿ ರಕ್ಷಿಸಿಕೊಳ್ಳಬಹುದು ಎಂದು ಅಧ್ಯಯನ ತಿಳಿಸಿದೆ.
ಜಾಮಾ ಇಂಟರ್ನಲ್​ ಮೆಡಿಸಿನ್​ ಜರ್ನಲ್​ನಲ್ಲಿ ಪ್ರಕಟವಾದ ಬರಹದಲ್ಲಿ ಎರಡು ಮಾಸ್ಕ್​ಗಳ ಬಳಕೆಯಿಂದ ಪರದೆಗಳ ಸಂಖ್ಯೆ ಹೆಚ್ಚಾಗುತ್ತವೆ. ಇದರಿಂದಾಗಿ ಗಾಳಿ ಇನ್ನಷ್ಟು ಫಿಲ್ಟರ್​ ಆಗಲಿದೆ ಎಂದು ಹೇಳಿದೆ. ಅಲ್ಲದೆ, ಈ ಮಾಸ್ಕ್​ಗಳು ಮುಖಕ್ಕೆ ಸರಿಯಾಗಿ ಫಿಟ್​ ಆಗುವಂತೆ ಇರಬೇಕು ಎಂದು ನಾರ್ತ್ ಕ್ಯಾರೋಲಿನಾ ವಿಶ್ವ ವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಸಿಕ್​ಬರ್ಟ್​ ಬೆನ್ನೆಟ್​ ಬರೆದಿದ್ದಾರೆ.
ಸರ್ಜಿಕಲ್​ ಮಾಸ್ಕ್​ಗಳ ಮೇಲೆ ಬಟ್ಟೆಯಿಂದ ಮಾಡಲಾದ ಮಾಸ್ಕ್​ಗಳನ್ನ ಧರಿಸುವುದರಿಂದ ಫಿಲ್ಟರೇಷನ್​ ಸಾಮರ್ಥ್ಯ ಇನ್ನಷ್ಟು ಸುಧಾರಿಸಲಿದೆ. ಈ ಸರ್ಜಿಕಲ್​ ಮಾಸ್ಕ್​ಗಳ ಜೊತೆಯಲ್ಲಿ ಸ್ಲೀವ್ ಟೈಪ್​ ಮಾಸ್ಕ್​ಗಳನ್ನ ಧರಿಸುವುದರಿಂದ ಸೋಂಕಿನ ಅಪಾಯದಿಂದ ಹೆಚ್ಚು ಸುರಕ್ಷಿತವಾಗಿ ಇರಬಹುದಾಗಿದೆ ಎಂದು ಅವರು ಹೇಳಿದ್ದಾರೆ.
ಎರಡೆರಡು ಮಾಸ್ಕ್​​ಗಳ ಬಳಕೆ ವಿಚಾರವಾಗಿ ಮಾತನಾಡಿ ಏಮ್ಸ್ ನಿರ್ದೇಶಕ ಡಾ. ರಂದೀಪ್​ ಗುಲೇರಿಯಾ, ಎನ್​ 95 ಮಾಸ್ಕ್​ಗಳು ಕೊರೊನಾ ವಿರುದ್ಧ ಬಹಳ ಒಳ್ಳೆಯದು. ಆದರೆ ಅವು ಸ್ವಲ್ಪ ದುಬಾರಿ ಹಾಗೂ ಎಲ್ಲಾ ಬಾರಿಯೂ ಸಿಗುವುದಿಲ್ಲ. ಹೀಗಾಗಿ ಎರಡು ಮಾಸ್ಕ್​ಗಳ ಬಳಕೆ ಮಾಡುವುದು ಉತ್ತಮ ಎನ್ನುತ್ತಾರೆ. ಸರ್ಜಿಕಲ್​ ಮಾಸ್ಕ್​ ಹಾಗೂ ಬಟ್ಟೆಯ ಮಾಸ್ಕ್​ಗಳನ್ನ ಬಳಕೆ ಮಾಡುವುದರಿಂದ ಕೊರೊನಾದಿಂದ ಇನ್ನೂ ಹೆಚ್ಚು ಸುರಕ್ಷಿತವಾಗಿರಬಹುದು. ಒಂದು ವೇಳೆ ಆಗುವುದಿಲ್ಲ ಎಂದಾದರೆ ಎರಡು ಬಟ್ಟೆಯಿಂದ ಮಾಡಲ್ಪಟ್ಟ ಮಾಸ್ಕ್​ಗಳನ್ನೇ ಬಳಕೆ ಮಾಡಿ ಎಂದು ಅವರು ಹೇಳುತ್ತಾರೆ.
ಎನ್​​ 95 ಮಾಸ್ಕ್​ಗಳು ಶೇ.95ರಷ್ಟು ಫಿಲ್ಟರ್​ ಸಾಮರ್ಥ್ಯ ಹೊಂದಿದೆ. ಸರ್ಜಿಕಲ್​ ಮಾಸ್ಕ್​ಗಳು 85 ರಿಂದ 90 ಪ್ರತಿಶತ ಸುರಕ್ಷಿತವಾಗಿದೆ ಎಂದು ಹೇಳಬಹುದು. ಮಾಸ್ಕ್ ಧರಿಸುವ ವೇಳೆಯೂ ಸರಿಯಾದ ಕ್ರಮ ಅನುಸರಿಸಬೇಕು. ಮಾಸ್ಕ್​ ಹಾಕಿಕೊಂಡ ರೀತಿಯಿಂದ ನಮ್ಮ ಮೂಗಿನೊಳಕ್ಕೆ ಶುದ್ಧ ಗಾಳಿ ಹೋಗುತ್ತಿದ್ದೆಯೋ ಇಲ್ಲವೋ, ಮಾಸ್ಕ್‌ ಧರಿಸಿದರೂ ರೋಗಾಣು ಮೂಗಿಗಿ ಅವಕಾಶವಾಗುತ್ತದೆಯೋ ಎಂದು ನೋಡಿಕೊಳ್ಳಬೇಕು. ಮಾಸ್ಕ್​ ಸರಿಯಾಗಿ ಹಾಕಿಕೊಳ್ಳದೆ ಹೋದರೆ ಅದು ಬೇಕಾದರೆ ಡಬಲ್‌ ಮಾಸ್ಕ್‌ ಇದ್ದರೂ ಸೋಂಕಿಗೆ ಒಳಗಾಗೋ ಸಾಧ್ಯತೆ ಇರುತ್ತದೆ ಎಂದು ಗುಲೇರಿಯಾ ಹೇಳುತ್ತಾರೆ.

ಪ್ರಮುಖ ಸುದ್ದಿ :-   ಅತ್ಯಧಿಕ ಅಪಾಯದ ಮಟ್ಟ 6ರ ವಿರುದ್ಧ ರಕ್ಷಣೆಗಾಗಿ ದೇಶದ ಅತ್ಯಂತ ಹಗುರ ಬುಲೆಟ್ ಪ್ರೂಫ್ ಜಾಕೆಟ್‌ ಅಭಿವೃದ್ಧಿಪಡಿಸಿದ ಡಿ ಆರ್‌ ಡಿ ಒ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement