ಹ್ಯಾಮ್ಸ್ಟರ್‌ಗಳಲ್ಲಿ ಕೋವಿಡ್‌ ವಿರುದ್ಧ ಪರಿಣಾಮ ತೋರಿದ ಔಷಧ, ಈಗ ಮಾನವ ಪ್ರಯೋಗಗಳ ಅಂತಿಮ ಹಂತದಲ್ಲಿ: ವರದಿ

ನವ ದೆಹಲಿ: ವಿಷಮಶೀತ ಜ್ವರ (influenza)ಕ್ಕೆ ಚಿಕಿತ್ಸೆ ನೀಡಲು ಆರಂಭದಲ್ಲಿ ಅಭಿವೃದ್ಧಿಪಡಿಸಿದ ಮೌಖಿಕವಾಗಿ ನಿರ್ವಹಿಸಲಾದ ಆಂಟಿವೈರಲ್ ಔಷಧವು ಕಿರುಕಡಿಗಗಳಲ್ಲಿ (hamsters) ಕೊರೊನಾ ವೈರಸ್‌ ಮಟ್ಟವನ್ನು ಗಮನಾರ್ಹವಾಗಿ ಕಡಿಮೆ ಮಾಡಿದೆ ಮತ್ತು ಇದು ಮಾನವನ ಮೇಲಿನ ಪ್ರಯೋಗಗಳ ಅಂತಿಮ ಹಂತದಲ್ಲಿದೆ, ಕೋವಿಡ್‌-19 ಎದುರಿಸಲು ಬೇಕಾದ ಭರವಸೆ ಹೊಂದಿದೆ ಎಂದು ಸಂಶೋಧಕರು ಹೇಳಿದ್ದಾರೆ.
ಅಮೆರಿಕದ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಹೆಲ್ತ್ (ಎನ್ಐಹೆಚ್) ಮತ್ತು ಬ್ರಿಟನ್ನಿನ ಪ್ಲೈಮೌತ್ ವಿಶ್ವವಿದ್ಯಾಲಯದ ವಿಜ್ಞಾನಿಗಳು ಮೊಲ್ನುಪಿರಾವೀರ್ ಎಂದು ಕರೆಯಲ್ಪಡುವ ಎಂಕೆ -4482 ಔಷಧವನ್ನು 12 ತಾಸುಗಳ ಮೊದಲು ಅಥವಾ SARS-CoV- ಸೋಂಕಿನ 12 ತಾಸುಗಳ ನಂತರ ನೀಡಿದರೆ ಅದು ಕೋವಿಡ್‌-19ಕ್ಕೆ ಕಾರಣವಾಗುವ ಕೊರೊನಾ ವೈರಸ್‌ಗೆ ಪರಿಣಾಮಕಾರಿ ಎಂದು ಕಂಡುಬಂದಿದೆ ಎಂದು ಶಂಧೋಧಕರು ಹೇಳಿದ್ದಾರೆ.ಔಷಧವು ಶ್ವಾಸಕೋಶಕ್ಕೆ ಉಂಟಾಗುವ ಹಾನಿ ಕಡಿಮೆ ಮಾಡುತ್ತದೆ ಎಂದು ಹ್ಯಾಮ್ಸ್ಟರ್‌ಗಳ ಮೇಲೆ ನಡೆಸಿದ ಅಧ್ಯಯನ ಹೇಳುತ್ತದೆ.
ಏಪ್ರಿಲ್ 16 ರಂದು ನೇಚರ್ ಕಮ್ಯುನಿಕೇಷನ್ಸ್ ಜರ್ನಲ್ಲಿನಲ್ಲಿ ಪ್ರಕಟವಾದ ಬರಹದಲ್ಲಿ ಎಂಕೆ -4482ರೊಂದಿಗಿನ ಚಿಕಿತ್ಸೆಯು SARS-CoV-2ಕ್ಕೆ ಹೆಚ್ಚಿನ ಅಪಾಯ ಒಡ್ಡುವ ಸಾಧ್ಯತೆಯನ್ನು ತಗ್ಗಿಸುತ್ತದೆ ಮತ್ತು ಸ್ಥಾಪಿತ SARS-CoV-2 ಸೋಂಕಿಗೆ ಮಾತ್ರ ಬಳಸಬಹುದು ಅಥವಾ ಸಂಯೋಜಿಸಬಹುದಾದ ಇತರ ಏಜೆಂಟ್‌ ಗಳಿಗೂ ಚಿಕಿತ್ಸೆ ನೀಡಲು ಬಳಸಬಹುದು.ಹೆಚ್ಚಿನ ಅಪಾಯದ ಸಂದರ್ಭದಲ್ಲಿ SARS-CoV-2 ವಿರುದ್ಧ ಬಳಕೆಗೆ ಪ್ರಸ್ತುತ ಯೋಗ್ಯವಾದ ಯಾವುದೇ ಔಷಧಿಗಳಿಲ್ಲ ಎಂದು ಸಂಶೋಧಕರು ತಿಳಿಸಿದ್ದಾರೆ.
SARS-CoV-2 ವಿರುದ್ಧದ ಲಸಿಕೆಗಳಿಗೆ ವ್ಯತಿರಿಕ್ತವಾಗಿ, ವೈರಸ್ ವಿರುದ್ಧ ನಮ್ಮಲ್ಲಿ ನಿಜವಾಗಿಯೂ ಪರಿಣಾಮಕಾರಿಯಾದ ಬಹಳ ಔಷಧಿಗಳಿಲ್ಲ. MK-4482 ಎಂಬುದು SARS-CoV-2 ವಿರುದ್ಧ ಹೆಚ್ಚುವರಿ ಆಂಟಿವೈರಲ್ ಎಂದು ಗುರುತಿಸುವ ಒಂದು ಉತ್ತೇಜಕ ಫಲಿತಾಂಶವಾಗಿದೆ” ಎಂದು ಪ್ಲೈಮೌತ್ ವಿಶ್ವವಿದ್ಯಾಲಯದ ವೈರಾಲಜಿ ಮತ್ತು ಇಮ್ಯುನೊಲಾಜಿಯ ಸಹಾಯಕ ಪ್ರಾಧ್ಯಾಪಕ ಮತ್ತು ಎನ್ಐಎಚ್‌ ನಲ್ಲಿ ಅತಿಥಿ ಸಂಶೋಧಕರಾಗಿರುವ ಮೈಕೆಲ್ ಜಾರ್ವಿಸ್ ಹೇಳಿದ್ದಾರೆ.
ಮೊಲ್ನುಪಿರಾವಿರ್ ಎಂದೂ ಕರೆಯಲ್ಪಡುವ ಈ ಔಷಧವು SARS-CoV-2 ಸೋಂಕಿತ ರೋಗಿಗಳ ಮೇಲಿನ ವೈದ್ಯಕೀಯ ಪ್ರಯೋಗಗಳು ಅಂತಿಮ ಹಂತದಲ್ಲಿದೆ” ಎಂದು ಅವರು ಹೇಳಿದ್ದಾರೆ.
ವೈರಸ್‌ಗೆ ಒಡ್ಡಿಕೊಂಡ ನಂತರ ಮಾನವನ ದತ್ತಾಂಶವು ಸಹ ಕಿರುಕಡಿಗಗಳ (hamsters )ರೀತಿಯಲ್ಲಿಯೇ ಆಂಟಿವೈರಲ್ ಪರಿಣಾಮ ತೋರಿಸಿದರೆ ಇದು ವಿಷಮಶೀತ ಜ್ವರ (influenza)ಕ್ಕೆ ಟ್ಯಾಮಿಫ್ಲು ಬಳಸುವ ವಿಧಾನದಂತೆಯೇ ಮೌಖಿಕವಾಗಿ ನಿರ್ವಹಿಸುವ ಮಾತ್ರೆಯಾಗಿ ಬಳಸಲು ಸೂಕ್ತವಾಗಬಹುದು ಎಂದು ಸಂಶೋಧಕರು ಹೇಳಿದ್ದಾರೆ. ಈ ಹೆಚ್ಚುವರಿ ನಿಯಂತ್ರಣ ಕ್ರಮವು ಪ್ರಸ್ತುತ ಸಾಂಕ್ರಾಮಿಕ ರೋಗದಲ್ಲಿ ನಿಜವಾಗಿಯೂ ಉಪಯುಕ್ತವಾಗಿದೆ ಎಂದು ನಾನು ಭಾವಿಸುತ್ತೇನೆ” ಎಂದು ಜಾರ್ವಿಸ್ ಹೇಳಿದ್ದಾರೆ.
ರೆಮ್ಡೆಸಿವಿರ್ ಅನ್ನು ಈಗಾಗಲೇ ಅಮೆರಿಕದ ಫುಡ್ ಅಂಡ್ ಡ್ರಗ್ ಅಡ್ಮಿನಿಸ್ಟ್ರೇಷನ್ ತುರ್ತು ಬಳಕೆಯ ದೃಢೀಕರಣದ (ಇಯುಎ) ಅಡಿಯಲ್ಲಿ ಅನುಮೋದಿಸಿದ್ದರೂ, ಇದನ್ನು ಅಭಿದಮನಿ (intravenously) ಮೂಲಕ ಒದಗಿಸಬೇಕು, ಇದರ ಬಳಕೆಯನ್ನು ಪ್ರಾಥಮಿಕವಾಗಿ ರೋಗದ ನಂತರದ ಹಂತಗಳ ಕ್ಲಿನಿಕಲ್ ಸೆಟ್ಟಿಂಗ್‌ಗಳಿಗೆ ಸೀಮಿತವಾಗಿದೆ.
ಸಂಶೋಧನಾ ಗುಂಪು ಕಳೆದ ವರ್ಷ ಒಂದು ಮಾದರಿಯನ್ನು ಅಭಿವೃದ್ಧಿಪಡಿಸಿತು, ಇದು ಜನರಲ್ಲಿ SARS-CoV-2 ಸೋಂಕು ಮತ್ತು ಸೌಮ್ಯ ರೋಗವನ್ನು ಅನುಕರಿಸಲು ಹ್ಯಾಮ್ಸ್ಟರ್‌ಗಳನ್ನು ಬಳಸುತ್ತದೆ. ಪ್ರಸ್ತುತ ಸಂಶೋಧನೆಯು ಹ್ಯಾಮ್ಸ್ಟರ್‌ಗಳ ಮೂರು ಗುಂಪುಗಳನ್ನು ಒಳಗೊಂಡಿತ್ತು – ಸೋಂಕಿನ ಪೂರ್ವ ಚಿಕಿತ್ಸೆಯ ಗುಂಪು, ಸೋಂಕಿನ ನಂತರದ ಚಿಕಿತ್ಸೆಯ ಗುಂಪು ಮತ್ತು ಸಂಸ್ಕರಿಸದ ನಿಯಂತ್ರಣ ಗುಂಪು. ವಿಜ್ಞಾನಿಗಳು ಎಂಕೆ -4482 ಔಷಧವನ್ನು ಎರಡು ಚಿಕಿತ್ಸಾ ಗುಂಪುಗಳಲ್ಲಿ ಪ್ರತಿ 12 ಗಂಟೆಗಳಿಗೊಮ್ಮೆ ಮೂರು ದಿನಗಳ ವರೆಗೆ ನಿರ್ವಹಿಸುತ್ತಿದ್ದರು. ಆಗ ಪ್ರತಿ ಚಿಕಿತ್ಸಾ ಗುಂಪುಗಳಲ್ಲಿನ ಪ್ರಾಣಿಗಳು ತಮ್ಮ ಶ್ವಾಸಕೋಶದಲ್ಲಿ ನಿಯಂತ್ರಣ ಗುಂಪಿಗಿಂತ 100 ಪಟ್ಟು ಕಡಿಮೆ ಸಾಂಕ್ರಾಮಿಕ ವೈರಸ್ ಹೊಂದಿದ್ದವು ಎಂದು ಅಧ್ಯಯನದಲ್ಲಿ ಕಂಡುಬಂದಿದೆ.
ಎರಡು ಚಿಕಿತ್ಸಾ ಗುಂಪುಗಳಲ್ಲಿನ ಪ್ರಾಣಿಗಳು ನಿಯಂತ್ರಣ ಗುಂಪಿಗಿಂತ ಶ್ವಾಸಕೋಶದಲ್ಲಿ ಗಮನಾರ್ಹವಾಗಿ ಕಡಿಮೆ ಗಾಯಗಳು ಅಥವಾ ಅಂಗಾಂಶ ಹಾನಿಯನ್ನು ಹೊಂದಿವೆ ಎಂದು ಸಂಶೋಧಕರು ಹೇಳಿದ್ದಾರೆ.
ಎಂಕೆ -4482 ಇತರ ಸಂಬಂಧಿತ ಮಾನವ ಕೊರೊನಾ ವೈರಸ್‌ಗಳು, ಮಧ್ಯಪ್ರಾಚ್ಯದ ಉಸಿರಾಟದ ಸಿಂಡ್ರೋಮ್ (ಮರ್ಸ್) ಮತ್ತು ತೀವ್ರ ಉಸಿರಾಟದ ಸಿಂಡ್ರೋಮ್ (SARS) ಪ್ರತಿರೂಪವನ್ನುಇಲಿಗಳ ಮಾದರಿಗಳಲ್ಲಿ ತೀವ್ರವಾಗಿ ಪ್ರತಿಬಂಧಿಸುತ್ತದೆ ಎಂದು ಸಂಶೋಧಕರು ಗಮನಿಸಿದ್ದಾರೆ.
ತಮ್ಮ ಹಿಂದಿನ ಸಂಶೋಧನೆಯಲ್ಲಿ, ಪ್ರಯೋಗಾಲಯದಲ್ಲಿನ ಮಾನವ ಶ್ವಾಸಕೋಶದ ಕೋಶಗಳಲ್ಲಿ SARS-CoV-2 ಪುನರಾವರ್ತನೆಯ ಮೇಲೆ ಔಷಧದ ಪ್ರತಿಬಂಧಕ ಪರಿಣಾಮವನ್ನು ತಂಡವು ನಿರ್ಧರಿಸಿತು. ಯಾವುದೇ ಔಷಧಿ ನಿಯಂತ್ರಣಗಳಿಗೆ ಹೋಲಿಸಿದರೆ ಚಿಕಿತ್ಸೆಯು SARS-CoV-2 ಪ್ರತಿರೂಪದ ಗಮನಾರ್ಹ ಇಳಿಕೆಗೆ ಕಾರಣವಾಯಿತು. ಔಷಧವು ಕನಿಷ್ಠ ಸೆಲ್ಯುಲರ್ ವಿಷತ್ವವನ್ನು ಮಾತ್ರ ಪ್ರದರ್ಶಿಸಿತು ಎಂದು ಸಂಶೋಧನೆ ಹೇಳಿದೆ.

ಪ್ರಮುಖ ಸುದ್ದಿ :-   ವೀಡಿಯೊ...: ಭಾರೀ ಮಳೆ-ಬಿರುಗಾಳಿಯ ನಡುವೆ ಹಸಿರು ಬಣ್ಣಕ್ಕೆ ತಿರುಗಿದ ದುಬೈನ ಆಕಾಶ...!

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement