ರಾಜ್ಯಾದ್ಯಂತ ಭಾಗಶಃ ಲಾಕ್ ಡೌನ್ ಜಾರಿ..ಕೋವಿಡ್ ಪರಿಷ್ಕೃತ ಮಾರ್ಗಸೂಚಿ ಬಿಡುಗಡೆ.. ಯಾವುದೆಲ್ಲ ಇರುತ್ತದೆ..ಇರುವುದಿಲ್ಲ..?

posted in: ರಾಜ್ಯ | 0

ಬೆಂಗಳೂರು: ರಾಜ್ಯ ಸರ್ಕಾರ 24 ಗಂಟೆಯಲ್ಲಿ ಕೋವಿಡ್ ಪರಿಷ್ಕೃತ ಮಾರ್ಗಚೂಚಿ ಬಿಡುಗಡೆ ಮಾಡಿದ್ದು, ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಭಾಗಶಃ ಲಾಕ್ ಡೌನ್ ಜಾರಿ ಮಾಡಲಾಗಿದೆ.
ರಾತ್ರಿ ಕರ್ಫ್ಯೂ ಮತ್ತು ವೀಕೆಂಡ್ ಕರ್ಫ್ಯೂ ವಿಧಿಸಿ ರಾಜ್ಯ ಸರ್ಕಾರ ಬುಧವಾರ ಮಾರ್ಗಸೂಚಿ ಹೊರಡಿಸಿತ್ತು. ಆದರೆ ರಾಜ್ಯದಲ್ಲಿ ಮಾರ್ಗಸೂಚಿಯನ್ನು ಸಮಪರ್ಕವಾಗಿ ಪಾಲಿಸದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪರಿಷ್ಕೃತ ಮಾರ್ಗಸೂಚಿ ಬಿಡುಗಡೆ ಮಾಡಿದ್ದಾರೆ.
ಅಗತ್ಯ ಸೇವೆಗಳನ್ನು ಹೊರತುಪಡಿಸಿ ಎಲ್ಲ ವ್ಯಾಪಾರ-ವಹಿವಾಟುಗಳನ್ನು ಮೇ 4ರ ನಿಷೇಧಿಸಲಾಗಿದೆ. ಹೊಸ ಮಾರ್ಗಸೂಚಿ ಜಾರಿಯಾಗುತ್ತಿದ್ದಂತೆ ಪೊಲೀಸರು ರಾಜ್ಯಾದ್ಯಂತ ರಸ್ತೆಗೆ ಇಳಿದಿದ್ದು ಎಲ್ಲ ಚಟುವಟಿಕೆಗಳಿಗೆ ಬ್ರೇಕ್ ಹಾಕುತ್ತಿದ್ದಾರೆ.
ಮೇ4ರ ವರೆಗೆ ರಾಜ್ಯದ ಎಲ್ಲ ಅಂಗಡಿಗಳನ್ನ ಮುಚ್ಚಲು ಆದೇಶಿಸಲಾಗಿದ್ದು, ದಿನಸಿ, ತರಕಾರಿ, ಹಾಲು, ಮೆಡಿಕಲ್ ಗಳಿಗಷ್ಟೇ ಅವಕಾಶ ನೀಡಲಾಗಿದೆ.
ಯಾವ್ಯಾವುದಕ್ಕೆ ಮುಚ್ಚಲು ಆದೇಶ:
*ಶಾಲಾ-ಕಾಲೇಜುಗಳು, ಕೋಚಿಂಗ್‌ ಸೆಂಟರಗಳು, ತರಬೇತಿ ಕೇಂದ್ರಗಳು, ಚಿತ್ರ ಮಂದಿರಗಳು, ಶಾಪಿಂಗ್‌ ಮಾಲ್‌ಗಳು ,ಜಿಮ್‌, ಸ್ಪಾ. ಈಜುಕೊಳ,

* ದೈನಂದಿನ ಪೂಜಾ ಕೈಂಕರ್ಯಕ್ಕೆ ಯಾವುದೇ ತೊಂದರೆಯಿಲ್ಲ, ಆದರೆ ಎಲ್ಲ ವಿಧದ ಧಾರ್ಮಿಕ ಸ್ಥಳಗಳಿಗೆ ಸಾರ್ವಜನಿಕರ ಪ್ರವೇಶಕ್ಕೆ ನಿಷೇಧ,

*ಹೊಟೇಲ್‌ , ರೆಸ್ಟೊರೆಂಟ್‌, ಬಾರ್‌ ಮತ್ತು ರೆಸ್ಟೊರೆಂಟ್‌, ಲಿಕ್ಕರ್‌ ಶಾಪ್‌ಗಳಲ್ಲಿ ಪಾರ್ಸೆಲ್‌ಗಳಿಗೆ ಮಾತ್ರ ಅವಕಾಶ.

*ಸಾಮಾಜಿಕ, ರಾಜಕೀಯ, ಕ್ರೀಡೆ, ಮನೋರಂಜನೆ, ಶೈಕ್ಷಣಿಕ, ಧಾರ್ಮಿಕ ಹಾಗೂ ಇತರ ಕಾರ್ಯಕ್ರಮಗಳು.

*ಲಾಡ್ಜ್‌ಗಳಲ್ಲಿ ಈಗಾಗಲೇ ತಂಗಿರುವ ಅತಿಥಿಗಳಿಗೆ ಮಾತ್ರವೇ ಸೇವೆ ನೀಡಲು ಅವಕಾಶ.

*ಅಗತ್ಯ ವಸ್ತುಗಳು ಹಾಗೂ ಕಟ್ಟಡ ನಿರ್ಮಾಣ ಸಾಮಗ್ರಿಗಳನ್ನು ಹೊರತು ಪಡಿಸಿ ಎಲ್ಲ ಅಂಗಡಿಗಳನ್ನು ಮುಚ್ಚತಕ್ಕದ್ದು.

ಯಾವ್ಯಾವುದಕ್ಕೆ ಅನುಮತಿ..:
*ಕೋವಿಡ್‌ ಸುರಕ್ಷಾ ನಿಯಮಗಳೊಂದಿಗೆ ಎಲ್ಲ ಬಗೆಯ ನಿರ್ಮಾಣ ಹಾಗೂ ದುರಸ್ತಿ ಕಾಮಗಾರಿಗಳಿಗೆ ಹಾಗೂ ಚಟುವಟಿಕೆಗಳಿಗೆ ಅವಕಾಶ.

*ಮುಂಗಾರು ಪೂರ್ವ ಕೃಷಿ ಚಟುವಟಿಕೆಗಳಿಗೆ ಅವಕಾಶ

*ಎಲ್ಲ ಬಗೆಯ ಕೈಗಾರಿಕೆಗಳು, ಉತ್ಪಾದನಾ ಘಟಕಗಳು ಹಾಗೂ ಸಂಸ್ಥೆಗಳು ಕಾರ್ಯನಿರ್ವಹಿಸಬಹುದು.

*ಸಿಬ್ಬಂದಿ ಓಡಾಟಕ್ಕೆ ಸಂಸ್ಥೆಗಳಿಂದ ಪಡೆದುಕೊಂಡ ಐಡಿ ಕಾರ್ಡ್‌ ತೋರಿಸುವುದು ಕಡ್ಡಾಯ

*ಪಡಿತರ ಅಂಗಡಿ, ದಿನಸಿ ಅಂಗಡಿ, ಹಣ್ಣು-ತರಾಕರಿ, ಹಾಲಿನ ಬೂತ್‌, ಮೀನು-ಮಾಂಸ, ಪಶು ಆಹಾರ ಅಂಗಡಿಗಳ ಸೇವೆ ಅಬಾಧಿತ.

*ಮೈದಾನ ಇಲ್ಲ ತೆರೆದ ಪ್ರದೇಶದಲ್ಲಿ ಮಾತ್ರ ಸಗಟು ತರಕಾರಿ, ಹಣ್ಣು-ಹೂವಿನ ಮಾರಾಟಕ್ಕೆ ಅವಕಾಶ,ಕಟ್ಟಡದಲ್ಲಿ ನಡೆಸುವಂತಿಲ್ಲ.

*ಬ್ಯಾಂಕ್‌, ವಿಮಾ ಕಚೇರಿ, ಎಟಿಎಂ, ಮುದ್ರಣ ಮತ್ತು ಎಲೆಕ್ಟ್ರಾನಿಕ್‌ ಮಾಧ್ಯಮ, ಶೇರು ವಿನಿಮಯ ಕೇಂದ್ರಗಳಿಗೆ ಅವಕಾಶ.

*ಮದುವೆ ಸಮಾರಂಭಗಳಿಗೆ ಕೇವಲ ೫೦ ಜನರಿಗೆ ಅವಕಾಶ.

ಅಂತ್ಯಕ್ರಿಯೆಯಲ್ಲಿ ೨೦ ಜನರಿಗೆ ಅವಕಾಶ.

*ರಾಜ್ಯದಲ್ಲಿ ವ್ಯಕ್ತಿಗಳ ಸಂಚಾರ ಹಾಗೂ ಸರಕು ಸಾಗಣೆಗೆ ಮುಕ್ತ ಅವಕಾಶ,ಯಾವುದೇ ಪೂರ್ವಾನುಮತಿ ಬೇಕಿಲ್ಲ.

*ಮೆಟ್ರೋ, ಬಸ್‌, ಕ್ಯಾಬ್‌, ಆಟೋ ಚಾಲನೆಗೆ ಅವಕಾಶ. ಒಟ್ಟು ಆಸನದ ಸಾಮರ್ಥ್ಯ ಶೇ೫೦ರಷ್ಟು ಮಾತ್ರ.

*ಶನಿವಾರ ಮತ್ತು ಭಾನುವಾರ ವೀಕೆಂಡ್‌ ಕರ್ಫ್ಯೂ ಸಮಯದಲ್ಲಿ ದಿನಸಿ, ತರಕಾರಿ, ಹಾಲಿನ ಅಂಗಡಿಗಳು ಬೆಳಿಗ್ಗೆ ೬ರಿಂದ ರಾತ್ರಿ ೧೦ರ ವರೆಗೆ ಮಾತ್ರ ತೆರೆದಿರುತ್ತದೆ.Order and Guidelines Copy

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

5 / 5. ಒಟ್ಟು ವೋಟುಗಳು 2

ನಿಮ್ಮ ಕಾಮೆಂಟ್ ಬರೆಯಿರಿ