ಬೆಂಗಳೂರು ಆಸ್ಪತ್ರೆಯಲ್ಲಿ ಹಾಸಿಗೆಗಾಗಿ ಪರದಾಡಿದ ಸಾಲುಮರದ ತಿಮ್ಮಕ್ಕ..!

posted in: ರಾಜ್ಯ | 0

ಬೆಂಗಳೂರು: ಇತ್ತೀಚೆಗೆ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಪದ್ಮಶ್ರೀ ಸಾಲುಮರದ ತಿಮ್ಮಕ್ಕ ತಿಮ್ಮಕ್ಕ ಮತ್ತೆ ಬೆನ್ನು ನೋವಿಗೆ ಒಳಗಾಗಿದ್ದು, ನಾನ್ ಕೋವಿಡ್ ಹಾಸಿಗೆಗಾಗಿ ಅವರು ಬೆಂಗಳೂರಿನಲ್ಲಿ ಪರದಾಡಬೇಕಾಯಿತು.
ಕಳೆದ ಡಿಸೆಂಬರ್‌ನಲ್ಲಿ ಮನೆಯಲ್ಲಿ ಜಾರಿ ಬಿದ್ದು ಬೆನ್ನುಮೂಳೆ ಮುರಿತಕ್ಕೆ ಒಳಗಾಗಿದ್ದ ಅವರಿಗೆ ಬೆಂಗಳೂರಿನ ಜಯನಗರದ ಅಪೋಲೊ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ನಡೆಸಲಾಗಿತ್ತು. ಇದೀಗ ಮತ್ತೆ ಅದೇ ಜಾಗದಲ್ಲಿ ತೀವ್ರ ಬೆನ್ನು ನೋವು ಕಾಣಿಸಿಕೊಂಡಿದೆ, ಅವರು ಆಸ್ಪತ್ರೆಗೆ ದಾಖಲಾಗಲು ಎರಡು ಗಂಟೆಗಳ ಕಾಲ ಪರದಾಡಬೇಕಾಯಿತು.
ಈಗ ಬೆಂಗಳೂರಿನ ಬಹುಪಾಲು ಆಸ್ಪತ್ರೆಗಳಲ್ಲಿ ಕೊರೊನಾ ರೋಗಿಗಳು ತುಂಬಿ ತುಳುಕುತ್ತಿರುವುದರಿಂದ ನಾನ್‌ ಕೋವಿಡ್ ಆಸ್ಪತ್ರೆಗಳು ಲಭ್ಯವಾಗುತ್ತಿಲ್ಲ. ಅವರು ದಾಖಲಾಗಲು ಎರಡು ಗಂಟೆಗಗಳ ಕಾಲ ಹುಡುಕಾಟ ನಡೆಸಲಾಯಿತು. ತಿಮ್ಮಕ್ಕ ಅವರಿಗೆ ಶಸ್ತ್ರಚಿಕಿತ್ಸೆ ನಡೆಸಿದ್ದ ಅಪೋಲೋ ಆಸ್ಪತ್ರೆ ವೈದ್ಯರೂ ನಾನ್ ಕೋವಿಡ್ ಹಾಸಿಗೆ ಹೊಂದಿಸಲು ನಿರಂತರ ಪ್ರಯತ್ನ ನಡೆಸಿದರು.
ಅಂತಿಮವಾಗಿ ಜಯನಗರದ ಅಪೋಲೊ ಆಸ್ಪತ್ರೆಯಲ್ಲಿ ಅವರಿಗೆ ಹಾಸಿಗೆ ಒದಗಿಸಲಾಗಿದೆ. ಸದ್ಯಕ್ಕೆ ಎಮರ್ಜೆನ್ಸಿ ವಾರ್ಡ್ ಗೆ ಶಿಫ್ಟ್ ಮಾಡಿ ವೈದ್ಯರು ತಪಾಸಣೆ ನಡೆಸುತ್ತಿದ್ದಾರೆ.

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

5 / 5. ಒಟ್ಟು ವೋಟುಗಳು 2

ನಿಮ್ಮ ಕಾಮೆಂಟ್ ಬರೆಯಿರಿ