18 ರಿಂದ 44 ವರ್ಷದೊಳಗಿನ ಭಾರತದ ಒಟ್ಟಾರೆ ಜನಸಂಖ್ಯೆಯ ಕೋವಿಡ್‌ ಲಸಿಕೆಗೆ ತಗಲುವ ವೆಚ್ಚವೆಷ್ಟು..?

ಇತ್ತೀಚೆಗಷ್ಟೇ ಕೇಂದ್ರ ಸರ್ಕಾರವು ಮೇ 1ರಿಂದ 18 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲರಿಗೂ ಲಸಿಕೆಗಳನ್ನು ನೀಡುವುದಾಗಿ ಘೋಷಿಸಿತು. ಈ ಮೊದಲು 45 ವರ್ಷ ವಯಸ್ಸಿನವರಿಗೆ ಉಚಿತ ಲಸಿಕೆ ನೀಡುತ್ತಿದ್ದರೆ, ಇದೀಗ 18 ರಿಂದ 44 ವಯಸ್ಸಿನ ಜನರು ಅವುಗಳನ್ನು ಹಣ ಪಾವತಿಸಿ ಪಡೆಯಬೇಕಾಗುತ್ತದೆ ಎಂದು ಸೂಚಿಸಿದೆ.
ಇದರರ್ಥ ರಾಜ್ಯ ಸರ್ಕಾರಗಳು ಲಸಿಕೆಗಳನ್ನು ಉಚಿತವಾಗಿ ಪೂರೈಸಲು ನಿರ್ಧರಿಸದಿದ್ದರೆ, ಜನರು ಅದನ್ನು ಹಣ ನೀಡಿ ಪಡೆಯಬೇಕಾಗುತ್ತದೆ. ಇಲ್ಲಿಯವರೆಗೆ ಏಳು ರಾಜ್ಯ ಸರ್ಕಾರಗಳು ಉಚಿತ ಲಸಿಕೆಗಳನ್ನು ನೀಡುವುದಾಗಿ ಪ್ರಕಟಿಸಿವೆ.

8 ರಿಂದ 44 ವರ್ಷದೊಳಗಿನ ಜನಸಂಖ್ಯೆಗೆ ಲಸಿಕೆ ಹಾಕಲು ಎಷ್ಟು ವೆಚ್ಚವಾಗುತ್ತದೆ?
ಕೋವಿಡ್-19 ಲಸಿಕೆ ಖರೀದಿ ಮತ್ತು ಇತರ ಪ್ರಮುಖ ವಿಚಾರಗಳ ಬಗ್ಗೆ ಇನ್ನೂ ಸ್ಪಷ್ಟತೆ ಸಿಗಬೇಕಿದೆ. ಇಲ್ಲಿಯವರೆಗೆ ಆಕ್ಸ್‌ಫರ್ಡ್ / ಅಸ್ಟ್ರಾಜೆನೆಕಾ ಲಸಿಕೆ ಕೋವಿಶೀಲ್ಡ್‌ ಬೆಲೆಯನ್ನು ಮಾತ್ರ ಪ್ರಕಟಿಸಗಿದೆ. ರಾಜ್ಯ ಸರ್ಕಾರಗಳಿಗೆ ಒಂದು ಡೋಸ್‌ಗೆ 400 ರೂಪಾಯಿ ಮತ್ತು ಖಾಸಗಿ ಆಸ್ಪತ್ರೆಗಳಿಗೆ ಡೋಸ್‌ಗೆ 600 ರೂಪಾಯಿ ಬೆಲೆ ನಿಗದಿ ಮಾಡಿದ್ದು, ಇತರ ಲಸಿಕೆಗಳ ಬೆಲೆ ಇನ್ನೂಬೆಲೆ ನಿಗದಿ ಮಾಡಬೇಕಿದೆ..

ಈಗ ಪ್ರಕಟವಾಗಿರುವ ಕೋವಿಶೀಲ್ಡ್‌ ಲಸಿಕೆ ಪ್ರಕಟಿಸಿದ ಬೆಲೆಯನ್ನೇ ಆಧಾರವಾಗಿಟ್ಟುಕೊಂಡು ಹೇಳುವುದಾದರೆ 18 ರಿಂದ 44 ವರ್ಷದೊಳಗಿನ ಜನರಿಗೆ ಲಸಿಕೆ ನೀಡಲು ಬೇಕಾಗುವ ಹಣ 47,500 ಕೋಟಿ ರೂ.ಗಳಿಂದ 71,500 ಕೋಟಿಗಳ ವರೆಗೆ ಇರಬಹುದು ಅಂದಾಜಿಸಲಾಗಿದೆ. ಭಾರತದಲ್ಲಿ 18 ರಿಂದ 44 ವರ್ಷ ವಯಸ್ಸಿನ ಒಟ್ಟು ಜನಸಂಖ್ಯೆ 59.46 ಕೋಟಿ ಎಂದು ಅಂದಾಜಿಸಲಾಗಿದೆ. 800 ರೂ.ಗಳಂತೆ ಗುಣಿಸಿದಾಗ (ಎರಡು ಡೋಸ್‌ ಸೇರಿ) ಒಟ್ಟು ವೆಚ್ಚ 47,566 ಕೋಟಿ ಆಗುತ್ತದೆ. 1200 ರೂಪಾಯಿನಿಂದ ಗುಣಿಸಿದರೆ (ಎರಡು ಡೋಸ್‌ ಸೇರಿ) 71,349 ಕೋಟಿ ರೂ.ಗಳಾಗುತ್ತದೆ. ಹೀಗಾಗಿ ವೆಚ್ಚ ಸದ್ಯಕ್ಕೆ ಇವೆರಡರ ಮಧ್ಯೆ ಇರುತ್ತದೆ.
ರಾಜ್ಯಗಳ ಮೇಲೆ ಬೀಳುವ ಹಣಕಾಸಿನ ಹೊರೆ ಎಷ್ಟು..?
ರಾಜ್ಯಗಳ ಮೇಲಿನ ಕೋವಿಡ್‌ ವೆಚ್ಚ ಸಂಪೂರ್ಣ ಎಷ್ಟು ಎಂಬುದು ಸದ್ಯ ಬಹಿರಂಗಗೊಂಡಿಲ್ಲ. ವ್ಯಾಕ್ಸಿನೇಷನ್‌ನ ಹಣಕಾಸಿನ ಹೊರೆಯನ್ನು ರಾಜ್ಯಗಳ ಒಟ್ಟು ಬಜೆಟ್ ವೆಚ್ಚದ ಪಾಲು ಎಂದು ವ್ಯಾಖ್ಯಾನಿಸಲಾಗಿದೆ. ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿ (ಸಿಎಮ್‌ಐಇ) ಡೇಟಾಬೇಸ್ ಮತ್ತು ಜನಸಂಖ್ಯಾ ಪ್ರೊಜೆಕ್ಷನ್ ವರದಿಯ ಅಂಕಿ-ಅಂಶಗಳ ಪ್ರಕಾರ 21 ರಾಜ್ಯಗಳಲ್ಲಿ, ಬಿಹಾರವು ಹೆಚ್ಚಿನ ಹೊರೆಯನ್ನು ಎದುರಿಸಲಿದ್ದು, 2021-22ರಲ್ಲಿ ಒಟ್ಟು ರಾಜ್ಯ ಖರ್ಚಿನ ಶೇಕಡಾ 1.8ರಷ್ಟು ಇರಲಿದೆ ಎಂದು ಹೇಳಲಾಗಿದೆ.
2020-21ರಲ್ಲಿ ರಾಜ್ಯಗಳ ಒಟ್ಟು ಆರೋಗ್ಯ ಖರ್ಚಿನಲ್ಲಿ ಶೇಕಡಾ 26ರಷ್ಟು ವ್ಯಾಕ್ಸಿನೇಷನ್ ವೆಚ್ಚವಾಗಿದೆ ಎಂದು ಅಂದಾಜಿಸಲಾಗಿದೆ.

-ಆಧಾರ: goodreturns.in

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

5 / 5. ಒಟ್ಟು ವೋಟುಗಳು 1

ನಿಮ್ಮ ಕಾಮೆಂಟ್ ಬರೆಯಿರಿ