ಶ್ರೀಲಂಕಾದಲ್ಲಿ ಗಾಳಿಯಲ್ಲಿ ಹಾರುವ ಹೊಸ ಕೊರೋನಾ ವೈರಸ್ ರೂಪಾಂತರ ತಳಿ ಪತ್ತೆ..!

ಕೊಲಂಬೊ: ಗಾಳಿಯಲ್ಲಿ ಹರಡುವ ಮತ್ತು ಹೆಚ್ಚು ಶಕ್ತಿಯುತವಾದ ಹೊಸ ಕೊರೊನಾ ವೈರಸ್ ಹೊಸ ತಳಿಯನ್ನು ಶ್ರೀಲಂಕಾದಲ್ಲಿ ಪತ್ತೆ ಮಾಡಲಾಗಿದೆ ಎಂದು ಕೊಲಂಬೊದ ಉನ್ನತ ಇಮ್ಯುನಾಲಜಿಸ್ಟ್ ತಿಳಿಸಿದ್ದಾರೆ.
ಈ ಕೊರೊನಾ ವೈರಸ್‌ ರೂಪಾಂತರವು ಸುಮಾರು ಒಂದು ಗಂಟೆಗಳ ಕಾಲ ಗಾಳಿಯಲ್ಲಿ ಹರಡಬಲ್ಲದು ಮತ್ತು ವೇಗವಾಗಿ ಹರಡುತ್ತಿದೆ ಎಂದು ಶ್ರೀ ಜಯವರ್ಧನಪುರ ವಿಶ್ವವಿದ್ಯಾಲಯದ ಇಮ್ಯುನಾಲಜಿ ಮತ್ತು ಮಾಲಿಕ್ಯುಲಾರ್ ಸೈನ್ಸಸ್ ವಿಭಾಗದ ಮುಖ್ಯಸ್ಥೆ ನೀಲಿಕಾ ಮಾಲವಿಗ್ ಹೇಳಿದ್ದಾರೆ.
ಕೊರೊನಾ ವೈರಸ್ ನ ಈ ರೂಪಾಂತರವು ದ್ವೀಪದಲ್ಲಿ ಇಲ್ಲಿಯವರೆಗೆ ಕಂಡುಬರುವುದಕ್ಕಿಂತ ಹೆಚ್ಚು ಟ್ರಾನ್ಸ್ ಮಿಸಿಬಲ್ ಆಗಿದೆ. ಹೊಸ ತಳಿಯು ಗಾಳಿಯಲ್ಲಿ ಹರಡುತ್ತದೆ, ಹನಿಗಳು ಸುಮಾರು ಒಂದು ಗಂಟೆಗಳ ಕಾಲ ಗಾಳಿಯಲ್ಲಿ ಹಾರಬಹುದು’ ಎಂದು ಮಲಾವಿಗ್ ಹೇಳಿದರು.
ಕಳೆದ ವಾರದ ಹೊಸ ವರ್ಷದ ಆಚರಣೆಯ ನಂತರ ಹೊಸ ರೂಪಾಂತರವು ವೇಗವಾಗಿ ಹರಡುತ್ತಿದೆ ಮತ್ತು ಹೆಚ್ಚಿನ ಯುವ ಸಮೂಹ ಸೋಂಕಿಗೆ ಒಳಗಾಗುತ್ತಿದೆ ಎಂದು ಆರೋಗ್ಯ ಅಧಿಕಾರಿಗಳು ಆತಂಕ ವ್ಯಕ್ತ ಪಡಿಸಿದ್ದಾರೆ.
ಮುಂದಿನ ಎರಡು ಇನ್ ಕ್ಯುಬೇಶನ್ ಅವಧಿಗಳಲ್ಲಿ, ರೋಗವು ಮೂರನೇ ಅಲೆಗೆ ಪ್ರಗತಿ ಹೊಂದಬಹುದು ಎಂದು ಸಾರ್ವಜನಿಕ ಆರೋಗ್ಯ ಪರಿವೀಕ್ಷಕರ ಉಪುಲ್ ರೋಹನಾ ಹೇಳಿದರು,
ಏತನ್ಮಧ್ಯೆ, ಕೋವಿಡ್ ತಡೆಗಟ್ಟಲು ಸಚಿವಾಲಯವು ಹೊಸ ಮಾರ್ಗಸೂಚಿಗಳನ್ನು ಹೊರಡಿಸಿದ್ದು, ಅದು ಮೇ ೩೧ ರವರೆಗೆ ಜಾರಿಯಲ್ಲಿರುತ್ತದೆ.
ಏಪ್ರಿಲ್ ಹೊಸ ವರ್ಷದ ಮಧ್ಯಭಾಗಕ್ಕೆ ಸುಮಾರು ೧೫೦ ಇದ್ದ ದೇಶಾದ್ಯಂತದ ಪ್ರಕರಣಗಳು ಈಗ ದಿನಕ್ಕೆ ೬೦೦ಕ್ಕೂ ಹೆಚ್ಚು ಏರಿಕೆ ಕಂಡಿದೆ. ಶ್ರೀಲಂಕಾ ಕೂಡ ತನ್ನ ಆರೋಗ್ಯ ರಕ್ಷಣಾ ಸಾಮರ್ಥ್ಯದಿಂದ ಖಾಲಿಯಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇತರ ಅನೇಕ ರಾಷ್ಟ್ರಗಳಂತೆ ಶ್ರೀಲಂಕಾವೂ ಕೊರೊನಾ ವೈರಸ್ ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆ ಕಾಣುತ್ತಿದ್ದು, ಪ್ರಸ್ತುತ ಈ ಸಂಖ್ಯೆ 99,691 ಪ್ರಕರಣಗಳು ಮತ್ತು ರೋಗದಿಂದ 638 ಸಾವುಗಳು ಸಂಭವಿಸಿವೆ.

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

0 / 5. ಒಟ್ಟು ವೋಟುಗಳು 0

ನಿಮ್ಮ ಕಾಮೆಂಟ್ ಬರೆಯಿರಿ