ವರ್ಕ್‌ ಫ್ರಮ್‌ ಹೋಮ್: ಗೂಗಲ್‌ಗೆ 7,418 ಕೋಟಿ ರೂ. ಉಳಿತಾಯ..!

ಕೋವಿಡ್-19 ಸಾಂಕ್ರಾಮಿಕದ ಕಾರಣ ವಿಶ್ವದ ಬಹುತೇಕ ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸ ಮಾಡಲು ಸೂಚಿಸಿವೆ. ಅದರಲ್ಲೂ ಕೋವಿಡ್-19 ಎರಡನೇ ಅಲೆಯು ವರ್ಕ್ ಫ್ರಮ್ ಹೋಮ್ ಅವಧಿ ಮುಂದೂಡುವಂತೆ ಮಾಡಿದೆ. ಇದರಿಂದ ಅನೇಕ ಕಂಪನಿಗಳಿಗೆ ಸಾಕಷ್ಟು ಉಳಿತಾಯವಾಗಿದೆ. ಇದರಲ್ಲಿ ಸರ್ಚ್‌ ಎಂಜಿನ್ ದೈತ್ಯ ಗೂಗಲ್‌ಗೆ ಬರೋಬ್ಬರಿ 7,418 ಕೋಟಿ ರೂ ( 1 ಶತಕೋಟಿ ಡಾಲರ್) ಉಳಿತಾಯವಾಗಿದೆ.
ಕೊರೊನಾ ಕಾರಣದ ನಿರ್ಬಂಧಗಳಿಂದಾಗಿ ಜನರು ಆನ್‌ಲೈನ್‌ನಲ್ಲೇ ಪ್ರವಾಸಗಳು ಮತ್ತು ಹೋಟೆಲ್‌ಗಳನ್ನು ಕಾಯ್ದಿರಿಸುತ್ತಿದ್ದಾರೆ. ಇದು ಗೂಗಲ್‌ಗೆ ಉತ್ತಮ ಜಾಹೀರಾತು ಆದಾಯ ತಂದುಕೊಡುತ್ತಿದೆ. ಜೊತೆಗೆ ಗೂಗಲ್‌ನ ಉದ್ಯೋಗಿಗಳು ಮನೆಯಿಂದಲೇ ಕೆಲಸ ಮಾಡುತ್ತಿದ್ದಾರೆ ಮತ್ತು ಅವರ ಪ್ರಯಾಣಕ್ಕೂ ಕಂಪನಿಯಿಂದ ಹಣ ಖರ್ಚಾಗುತ್ತಿಲ್ಲ, ಹೀಗಾಗಿ ಉಳಿತಾಯ ಹೆಚ್ಚಾಗಿದೆ ಎಂದು ವಿಶ್ಲೇಷಿಸಲಾಗಿದೆ.
ಕಂಪನಿಯ ಫೈಲಿಂಗ್ ಪ್ರಕಾರ ಮೊದಲ ತ್ರೈಮಾಸಿಕದಲ್ಲಿ ಗೂಗಲ್‌ನ ಮಾತೃಸಂಸ್ಥೆ ಆಲ್ಫಾಬೆಟ್‌ ಇಂಕ್ ಕಂಪನಿಯು ಹಿಂದಿನ ಒಂದು ವರ್ಷದ ಅವಧಿಗೆ ಹೋಲಿಸಿದರೆ ಪ್ರಚಾರ, ಪ್ರಯಾಣ ಮತ್ತು ಮನರಂಜನೆಯಿಂದ $268 ಮಿಲಿಯನ್ ವೆಚ್ಚ ಉಳಿಸಿದೆ.
ವಾರ್ಷಿಕ ಆಧಾರದ ಮೇಲೆ ಅದು ಸುಮಾರು 7,418 ಕೋಟಿ ರೂ. ( 1 ಶತಕೋಟಿ ಡಾಲರ್‌ಗೂ ಹೆಚ್ಚು) ಲಾಭವಾಗಿದೆ. ವಾಸ್ತವವಾಗಿ, ಈ ವರ್ಷದ ಆರಂಭದಲ್ಲಿ ಆಲ್ಫಾಬೆಟ್ ತನ್ನ ವಾರ್ಷಿಕ ವರದಿಯಲ್ಲಿ ಜಾಹೀರಾತು ಮತ್ತು ಪ್ರಚಾರದ ವೆಚ್ಚಗಳು 1.4 ಬಿಲಿಯನ್ ಡಾಲರ್ ಇಳಿಕೆಯಾಗಿದೆ. ಇದರಿಂದ ಕಂಪನಿಯ ಖರ್ಚು ಕಡಿಮೆಯಾಗಿದ್ದು, ಪ್ರಯಾಣ ಮತ್ತು ಮನರಂಜನಾ ವೆಚ್ಚವು $371 ಮಿಲಿಯನ್‌ನಷ್ಟು ಇಳಿದಿದೆ. ಉಳಿತಾಯದ ಜೊತೆಗೆ ಕಂಪನಿಯ ಆದಾಯವು ಶೇಕಡಾ 34ರಷ್ಟು ಹೆಚ್ಚಿದೆ ಎಂದು ಹೇಳಿದೆ.

ಇಂದಿನ ಪ್ರಮುಖ ಸುದ್ದಿ :-   'ನಮಸ್ತೆ' : ಮಾನವರೂಪಿ ರೋಬೋಟ್ ಯೋಗ ಮಾಡುವ ವೀಡಿಯೊ ಹಂಚಿಕೊಂಡ ಟೆಸ್ಲಾ | ವೀಕ್ಷಿಸಿ

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ.

(1. ಚೆನ್ನಾಗಿಲ್ಲ. 2. ಸಾಧಾರಣ. 3. ಪರವಾಗಿಲ್ಲ. 4. ಉತ್ತಮ . 5. ಅತ್ಯುತ್ತಮ)

5 / 5. ಒಟ್ಟು ವೋಟುಗಳು 3

ನಿಮ್ಮ ಕಾಮೆಂಟ್ ಬರೆಯಿರಿ

ಕನ್ನಡಿ ನ್ಯೂಸ್ ನ ದಿನದ ಪ್ರಮುಖ ಸುದ್ದಿಗಳು ಮತ್ತು ಮಾಹಿತಿಗಾಗಿ
ವಾಟ್ಸಾಪ್ ಗ್ರೂಪ್ ಸೇರಿ
ಟೆಲಿಗ್ರಾಮ್ ಚಾನೆಲ್ ಸೇರಿ
ಫೇಸ್ ಬುಕ್ ಫಾಲೋ ಮಾಡಿ
ಗೂಗಲ್ ನ್ಯೂಸ್ ನಲ್ಲಿ ಸೇರಿ
ಟ್ವಿಟರ್ ನಲ್ಲಿ ಫಾಲೋ ಮಾಡಿ
advertisement