2020ರಲ್ಲಿ ಗೂಗಲ್‌ನಲ್ಲಿ ಅತಿ ಹೆಚ್ಚು ಹುಡುಕಿದ್ದು ಹೆಂಗಸರನ್ನು ಕಂಟ್ರೋಲ್ ಮಾಡುವುದು ಹೇಗೆ..?!

ಯಾವುದರ ಬಗ್ಗೆಯಾದರೂ ತಿಳಿದುಕೊಳ್ಳಬೇಕಾದರೆ ಗೂಗಲ್‌ ಸರ್ಚ್‌ ಮಾಡುತ್ತೇವೆ. ಗೂಗಲ್‌ನಲ್ಲಿ ಇಲ್ಲದ ವಿಷಯಗಲೇ ಇಲ್ಲ. ಎಲ್ಲ ಭಾಷೆಯ ವಿಷಯಗಳೂ ಇಲ್ಲಿ ಸಿಗುತ್ತವೆ. ಇದು ಮಾಹಿತಿಯ ಕಣಜ. ಆದರೆ ಇಲ್ಲಿ ನಾವು-ನೀವು ಊಹಿಸದೇ ಇರುವ ವಿಷಯಕ್ಕೂ ಗೂಗಲ್‌ನಲ್ಲಿ ಸರ್ಚ್‌ ಮಾಡುತ್ತಾರೆ. ಯಾಕೆಂದರೆ ಮಾಹಿತಿ ಕ್ಷಣಾರ್ಧದಲ್ಲಿ ಸಿಗುತ್ತದೆ. ಬೆರಳ ತುದಿಯಲ್ಲಿ ಉಚಿತವಾಗಿ ಸಿಗುತ್ತದೆ. ಹೀಗಾಗಿ ಮಾಹಿತಿಗಾಗಿ ಇದನ್ನೇ ಈಗ ಬಹುತೇಕ ಎಲ್ಲರೂ ಅವಲಂಬಿಸಿದ್ದಾರೆ.
ಆದರೆ ಕೌಟುಂಬಿಕ ಅವಹೇಳನ, ದೌರ್ಜನ್ಯದಂತಹ ಕಾರಣಗಳಿಗೂ ಬಳಸುವ ಸಾಧ್ಯತೆಯೂ ಇದೆ.
ಕೋವಿಡ್‌ ವೈರಸ್‌ ಸಾಂಕ್ರಾಮಿಕದಿಂದ ಜಗತ್ತಿನಾದ್ಯಂತ ಕೌಟುಂಬಿಕ ಕಲಹದಲ್ಲಿ ಆಘಾತಕಾರಿ ಏರಿಕೆ ಕಂಡಿದೆ. ಕೋವಿಡ್‌ನಿಂದ ಮೃತಪಟ್ಟವರು ಅನೇಕರು ಮತ್ತು ಬದುಕುಳಿದವರು ಮನೆಯಲ್ಲಿ ಲಾಕ್‌ ಆಗಿದ್ದರು. ಉದ್ಯೊಗ ಹಗೂ ಆರ್ಥಿಕತೆಯ ಅನಿಶ್ಚತತೆಯಿಂದಾಗಿ ಈ ಸಮಯದಲ್ಲಿ ಕುಟುಂಬ ಹಿಂಸಾಚಾರವೂ ಹೆಚ್ಚಾಯಿತು. ಈ ಅನಿಶ್ಚಿತತೆಯಯಿಂದಾದ ಒತ್ತಡವು ಹಿಂಸಾರೂಪಕ್ಕೆ ತಾಳಿ ವಿಶೇಷವಾಗಿ ಮಹಿಳೆಯರು ಹಿಂಸೆ ಅನುಭವಿಸುವಂತಾಯಿತು.ಇದು ಇತ್ತೀಚಿನ ವರ್ಷಗಳಲ್ಲಿ ಸಾರ್ವಕಾಲಿಕ ಗರಿಷ್ಠ ಮಟ್ಟ ತಲುಪಿತು.
ಟೇಲರ್ ಮತ್ತು ಫ್ರಾನ್ಸಿಸ್ ಎಂಬ ಜರ್ನಲ್ನಲ್ಲಿ ಪ್ರಕಟವಾದ ಒಂದು ಅಧ್ಯಯನ, 2020 ರಲ್ಲಿ ಕೌಟುಂಬಿಕ ಕಿರುಕುಳದ ಹೆಚ್ಚಳವನ್ನು ಜನರು ಬೆಂಬಲಿಸಬಹುದು ಎಂದು ಬಹಿರಂಗಪಡಿಸಿದೆ. ಈ ಅಧ್ಯಯನ ವರದಿಯನ್ನು ನ್ಯೂಜಿಲೆಂಡ್‌ನ ಒಟಾಗೊ ವಿಶ್ವವಿದ್ಯಾಲಯದ ರಾಷ್ಟ್ರೀಯ ಶಾಂತಿ ಮತ್ತು ಸಂಘರ್ಷ ಅಧ್ಯಯನ ಕೇಂದ್ರದಲ್ಲಿ ಉಪ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿರುವ ಕಟರೀನಾ ಸ್ಟ್ಯಾಂಡಿಶ್ ಬರೆದಿದ್ದಾರೆ. ಅವರು ಕಳೆದ ವರ್ಷ ಸ್ತ್ರೀಹತ್ಯೆ ಮತ್ತು ಸಾಂಕ್ರಾಮಿಕ ರೋಗದ ಬಗ್ಗೆ ಸಂಶೋಧನೆ ಆರಂಭಿಸಿದರು.
ಈ ಅಧ್ಯಯನವು ಅಮೆರಿಕದ ಗೂಗಲ್ ಸರ್ಚ್‌ಗಳನ್ನು ನೋಡಿದೆ. ಅವರು ಆರು ವಿಬಾಗಗಳಲ್ಲಿ ಅವರ ಅಧ್ಯಯನ ಕೇಂದ್ರೀಕರಿಸಿದ್ದಾರೆ. ಅದೆಂದರೆ ನಿಖರತೆ ಮತ್ತು ಅಭದ್ರತೆ, ನಿರಾಶೆ ಮತ್ತು ಅಸಹಾಯಕತೆ, ಸೂಚಿಸುವ ಪುರುಷ ಹಿಂಸೆ ಮತ್ತು ಉದ್ದೇಶಪೂರ್ವಕ ಪುರುಷ ಹಿಂಸೆ ಎಂಬ ಆಸಕ್ತಿಯ ಆರು ಕ್ಷೇತ್ರಗಳ ಮೇಲೆ ಅವರು ತಮ್ಮ ಅಧ್ಯಯನ ಕೇಂದ್ರೀಕರಿಸಿ ಫಲಿತಾಂಶ ಕಂಡುಕೊಂಡಿದ್ದಾರೆ. ಇದರ ಫಲಿತಾಂಶಗಳು 2020 ರಲ್ಲಿ 31% ರಿಂದ ಸುಮಾರು 106% ಕ್ಕೆ ಏರಿಕೆಯಾಗಿದೆ.
ಇದರಲ್ಲಿ ಮುಖ್ಯವಾಗಿ ಉದ್ದೇಶಪೂರ್ವಕ ಪುರುಷ ಹಿಂಸಾಚಾರಕ್ಕೆ ಸಂಬಂಧಿಸಿದ ಗೂಗಲ್‌ ಸರ್ಚ್‌ನ ಫಲಿತಾಂಶಗಳು ಆಘಾತಕಾರಿ ಎಂದು ಕಂಡುಬಂದಿದೆ. ‘ನಿಮ್ಮ ಮಹಿಳೆಯನ್ನು ಹೇಗೆ ನಿಯಂತ್ರಿಸುವುದು’ ? ಮತ್ತು ‘ಯಾರಿಗೂ ಗೊತ್ತಾಗದೇ ಮಹಿಳೆಯನ್ನು ಹೊಡೆಯುವುದು ಹೇಗೆ? – ಈ ಎರಡನ್ನೂ 165 ಮಿಲಿಯನ್‌ ಸಲ ( 16.5೦ ಕೋಟಿ ಸಲ) ಗೂಗಲ್‌ನಲ್ಲಿ ಹುಡುಕಿದ್ದು ಅಧ್ಯಯನದ ವೇಳೆ ಕಂಡುಬಂದಿದೆ. “ಅವಳು ಮನೆಗೆ ಬಂದಾಗ ನಾನು ಅವಳನ್ನು ಕೊಲ್ಲುತ್ತೇನೆ” ಎಂದು 178 ಮಿಲಿಯನ್ ಸಲ (17.8೦ ಕೋಟಿ ಸಲ) ಗೂಗಲ್‌ನಲ್ಲಿ ಹುಡುಕಲಾಗಿದೆ. ಕೋವಿಡ್‌ ಸಂದರ್ಭದಲ್ಲಿ ಕಂಡುಬಂದ ಈ ಮನಸ್ಥಿತಿ ಆಘಾತಾರಿಯಾಗಿದೆ.
ಅಲ್ಲದೆ, ಸೂಚಕ ಪುರುಷ ಹಿಂಸಾಚಾರದ ಬಗ್ಗೆಯೂ ಇದೇ ರೀತಿಯ ಹುಡುಕಾಟ ಫಲಿತಾಂಶಗಳನ್ನು ಕಾಣಬಹುದಾಗಿದೆ. ”ಅವನು ನನ್ನನ್ನು ಕೊಲ್ಲುತ್ತಾನೆ” ಎಂಬುದು 107 ಮಿಲಿಯನ್ ಸಲ ( 10.7) ಗೂಗಲ್‌ನಲ್ಲಿ ಹುಡುಕಲಾಗಿದೆ. “ಅವನು ನನ್ನನ್ನು ಹೊಡೆದನು” ಎಂಬುದು 320 ಮಿಲಿಯನ್ ಸಲ (32 ಕೊಟಿ ಸಲ) ಗೂಗಲ್ ಆಗಿತ್ತು.
ನನಗೆ ಸಹಾಯ ಮಾಡಿ, ಅವನು ಬಿಡುವುದಿಲ್ಲ” ಎಂದು 1.22 ಬಿಲಿಯನ್‌ ಬಾರಿ ಹುಡುಕಲಾಗಿದೆ. ಇಂಥ ಆಘಾತಕಾರಿ ಸಂಗತಿಗಳು ಅಧ್ಯಯನದ ಸಂದರ್ಭದಲ್ಲಿ ಕಂಡುಬಂದಿದೆ.
ಈ ಪ್ರತಿಯೊಂದು ರೌಂಡೆಡ್‌ ನಂಬರ್‌ಗಳು ಒಬ್ಬ ವ್ಯಕ್ತಿಯು ಈ ಹುಡುಕಾಟ ಪದಗಳನ್ನು ವೆಬ್ ಎಂಜಿನ್‌ಗೆ ಇನ್‌ಪುಟ್ ಮಾಡುವುದರಿಂದ ಉಂಟಾಗುತ್ತದೆ. ಈ ಅಂಕಿ ಅಂಶಗಳನ್ನು ಪೂರ್ಣ ರೂಪದಲ್ಲಿ ಪ್ರಸ್ತುತಪಡಿಸಲಾಗಿದೆ. ಲಕ್ಷಾಂತರ ಜನರು ಸಹಾಯಕ್ಕಾಗಿ ಆನ್‌ಲೈನ್‌ನಲ್ಲಿ ನೋಡುತ್ತಿದ್ದಾರೆ ಮತ್ತು ಈ ಕೋವಿಡ್ – 19 ವಾಸ್ತವವನ್ನು ಹೇಳಲು ಬಯಸುತ್ತೇನೆ” ಎಂದು ಅವರು ತಮ್ಮ ಅಧ್ಯಯನದ ಪರಿಚಯ ವಿಭಾಗದಲ್ಲಿ ಈ ಕುರಿತು ಬರೆದಿದ್ದಾರೆ.

ಪ್ರಮುಖ ಸುದ್ದಿ :-   ಶಿಂಧೆ ಬಣದ ಶಿವಸೇನೆ ಸೇರಿದ ಬಾಲಿವುಡ್‌ ನಟ ಗೋವಿಂದ : 14 ವರ್ಷಗಳ ವನವಾಸದ ನಂತರ ರಾಜಕೀಯಕ್ಕೆ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement