ಭಾರತದಲ್ಲಿ 3.86 ಲಕ್ಷ ದಾಟಿದ ಕೊರೊನಾ ಹೊಸ ಸೋಂಕು..

ನವ ದೆಹಲಿ: ಭಾರತದಲ್ಲಿ ಕಳೆದ 24 ಗಂಟೆಯಲ್ಲಿ 3.80 ಲಕ್ಷಕ್ಕೂ ಹೆಚ್ಚು ಜನರಿಗೆ ಕೊರೊನಾ ಸೋಂಕು ದೃಢಪಟ್ಟಿರುವುದು ದಾಖಲಾಗಿದೆ.
ದೇಶದಲ್ಲಿ ಶುಕ್ರವಾರ 3,86,452 ಕೊರೊನಾ ಸೋಂಕಿತರು ಪತ್ತೆಯಾಗಿಗಿದ್ದು, 3498 ಮಂದಿ ಮೃತಪಟ್ಟಿದ್ದಾರೆ, 2,87,540 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ದೇಶದಲ್ಲಿ ಒಟ್ಟು 1,87,62,976 ಜನರಿಗೆ ಕೊರೊನಾ ಸೋಂಕು ತಗುಲಿದೆ, ಇದುವರೆಗೂ 1,53,84,418 ಮಂದಿ ಗುಣಮುಖರಾಗಿದ್ದಾರೆ.
2,08,330 ಮಂದಿ ಮೃತಪಟ್ಟಿದ್ದಾರೆ, 31,70,228 ಸಕ್ರಿಯ ಪ್ರಕರಣಗಳಿವೆ, ಇದುವರೆಗೂ ಒಟ್ಟು 15,22,45,179 ಲಸಿಕೆ ವಿತರಿಸಲಾಗಿದೆ. ಒಟ್ಟು 28,63,92,086 ಮಾದರಿಗಳನ್ನು ಏಪ್ರಿಲ್ 29ರವರೆಗೆ ಪರೀಕ್ಷಿಸಲಾಗಿದೆ. ಏಪ್ರಿಲ್ 29ರಂದು ಒಂದೇ ದಿನ, 19,20,107 ಮಾದರಿಗಳನ್ನು ಪರೀಕ್ಷಿಸಲಾಗಿದೆ ಎಂದು ಐಸಿಎಂಆರ್ ತಿಳಿಸಿದೆ.

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

5 / 5. ಒಟ್ಟು ವೋಟುಗಳು 1

ನಿಮ್ಮ ಕಾಮೆಂಟ್ ಬರೆಯಿರಿ