ಹಂಚಿನಾಳ: ಸಿಡಿಲು ಬಡಿದು ಇಬ್ಬರು ಸಾವು

posted in: ರಾಜ್ಯ | 0
ಬೆಳಗಾವಿ :ಸವದತ್ತಿ ತಾಲೂಕಿನ ಹಂಚಿನಾಳ ಗ್ರಾಮದಲ್ಲಿ ಶನಿವಾರ ಸಂಜೆ ಸಿಡಿಲು ಬಡಿದು ಇಬ್ಬರು ಮೃತಪಟ್ಟಿದ್ದಾರೆ.
ಗುಡುಮಕೇರಿ ಗ್ರಾಮದವರಾದ ಇವರಿಬ್ಬರೂ ಕುರಿಗಾಹಿಗಳಾಗಿದ್ದು ಕುರಿ ಮೇಯಿಸಲು ಹಂಚಿನಾಳಕ್ಕೆ ಹೋದಾಗ ಸಂಜೆ ಸುಮಾರಿಗೆ ಭಾರಿ ಮಳೆ, ಗಾಳಿ ಆರ್ಭಟಿಸಿದೆ. ಆ ಸಂದರ್ಭದಲ್ಲಿ ಸಿಡಿಲು ಬಡಿತಕ್ಕೆ ಇವರಿಬ್ಬರು ಮೃತಪಟ್ಟಿದ್ದಾರೆ.
ವಿಧಾನಸಭೆ ಉಪಸಭಾಧ್ಯಕ್ಷ ಆನಂದ ಮಾಮನಿ ತೀವ್ರ ಶೋಕ ವ್ಯಕ್ತಪಡಿಸಿದ್ದು ಸರಕಾರದಿಂದ ಈ ಕುಟುಂಬಗಳಿಗೆ ತಲಾ 5 ಲಕ್ಷ ರೂಪಾಯಿ ಪರಿಹಾರಧನ ನೀಡುವುದಾಗಿ ತಿಳಿಸಿದ್ದಾರೆ

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

5 / 5. ಒಟ್ಟು ವೋಟುಗಳು 2

ನಿಮ್ಮ ಕಾಮೆಂಟ್ ಬರೆಯಿರಿ