ಮೆಕ್ಸಿಕೊ ಸಿಟಿ ಮೆಟ್ರೊ ಭೀಕರ ಅಪಘಾತ: ಓವರ್‌ಪಾಸ್ ಕುಸಿದು 15 ಸಾವು, 70 ಜನರಿಗೆ ಗಾಯ

ಮೆಕ್ಸಿಕೋ : ಮೆಕ್ಸಿಕೊ ನಗರದ ಮೆಟ್ರೊದ ಓವರ್‌ಪಾಸ್ ಕುಸಿದಿದ್ದರ ಜೊತೆಗೆ ಅದರ ಮೇಲೆ ಚಲಿಸುತ್ತಿದ್ದ ರೈಲು ಸಹ ರಸ್ತೆಗೆ ಬಿದ್ದು ಕನಿಷ್ಠ 15 ಜನ ಮೃತಪಟ್ಟ ಘಟನೆ ಸೋಮವಾರ ನಡೆದಿದೆ.
ಘಟನೆಯಲ್ಲಿ ರಸ್ತೆಯ ಮೇಲೆ ಸಂಚರಿಸುತ್ತಿದ್ದ ಕಾರೊಂದು ನುಜ್ಜುಗುಜ್ಜಾಗಿದೆ ಹಾಗೂ 70 ಜನರು ಗಾಯಗೊಂಡಿದ್ದಾರೆ. ಇನ್ನೂ ಅನೇಕರು ರೈಲಿನಲ್ಲೇ ಸಿಲುಕಿದ್ದಾರೆ, ರೈಲು ಎರಡು ತುಂಡಾಗಿದ್ದು ಭಾಗಶಃ ಹಾನಿಯಾಗಿದೆ.
ಕುಸಿದ ಮೆಟ್ರೋ ಓವರ್‌ಪಾಸ್ ಭಗ್ನಾವಶೇಷದಡಿ ಶೋಧಕಾರ್ಯಾಚರಣೆ ನಡೆದಿದೆ. ಓವರ್‌ಪಾಸ್ ದಕ್ಷಿಣ ಮೆಕ್ಸಿಕೊ ನಗರದ ರಸ್ತೆಯಿಂದ ಸುಮಾರು 5 ಮೀಟರ್ ದೂರದಲ್ಲಿತ್ತು. ” ರೈಲಿನೊಳಗೆ ಇನ್ನೂ ಜನರು ಸಿಕ್ಕಿಬಿದ್ದಿದ್ದಾರೆ ಎಂದು ಮೇಯರ್ ಕ್ಲೌಡಿಯಾ ಶೀನ್ಬೌಮ್ ಹೇಳಿದ್ದಾರೆ.
ಮೆಟ್ರೊದ 12 ನೇ ಲೇನ್ ನಲ್ಲಿ ಅಪಘಾತ ಸಂಭವಿಸಿದ್ದು, ಇದರ ನಿರ್ಮಾಣ ಸಂಬಂಧ ದೂರುಗಳು ಮತ್ತು ಅಕ್ರಮಗಳ ಆರೋಪ ಕೇಳಿಬಂದಿತ್ತು. “ಇದೊಂದು ಭಯಾನಕ ದುರಂತ” ಎಂದು ಮೆಕ್ಸಿಕನ್ ವಿದೇಶಾಂಗ ಸಚಿವ ಮಾರ್ಸೆಲೊ ಎಬ್ರಾರ್ಡ್ ಟ್ವೀಟ್ ಮಾಡಿದ್ದಾರೆ.
ಮೆಕ್ಸಿಕೊ ಸಿಟಿ ಮೆಟ್ರೊ, ವಿಶ್ವದ ಅತಿದೊಡ್ಡ ಮತ್ತು ಅತ್ಯಂತ ಜನನಿಬಿಡ ಸ್ಥಳಗಳಲ್ಲಿ ಒಂದಾಗಿದೆ, ಅರ್ಧ ಶತಮಾನದ ಹಿಂದೆ ಉದ್ಘಾಟನೆಯಾದ ಈ ಮಾರ್ಗದಲ್ಲಿ ಇದುವರೆಗೆ ಕನಿಷ್ಠ ಎರಡು ಗಂಭೀರ ಅಪಘಾತಗಳು ಸಂಭವಿಸಿವೆ.

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

5 / 5. ಒಟ್ಟು ವೋಟುಗಳು 1

ನಿಮ್ಮ ಕಾಮೆಂಟ್ ಬರೆಯಿರಿ