ಭಾರತದಲ್ಲಿ ಕೋವಿಡ್ ದೈನಂದಿನ ಪ್ರಕರಣಗಳು ಮತ್ತಷ್ಟು ಕಡಿಮೆ.. ಸಕ್ರಿಯ ಪ್ರಕರಣಗಳ ಹೆಚ್ಚಳ..

ನವ ದೆಹಲಿ:ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ 3.57 ಲಕ್ಷಕ್ಕೂ ಹೆಚ್ಚು ಹೊಸ ಕೋವಿಡ್-19 ಪ್ರಕರಣಗಳು ದಾಖಲಾಗಿದೆ.
3,57,229 ಹೊಸ ಸೋಂಕುಗಳು ಕಾಣಿಸಿಕೊಂಡಿದ್ದು , 3,449 ಸಾವುಗಳು ಸಂಭವಿಸಿವೆ.
ಶನಿವಾರ ದೇಶವು 4 ಲಕ್ಷಕ್ಕೂ ಹೆಚ್ಚು ಪ್ರಕರಣಗಳನ್ನು ದಾಖಲಿಸುವ ಭೀಕರ ಮೈಲಿಗಲ್ಲನ್ನು ದಾಟಿದ ನಂತರದಲ್ಲಿ ಸತತ ಎರಡು ದಿನ ಹೊಸ ಸೋಂಕುಗಳ ಕನಿಷ್ಠ ಕುಸಿತವನ್ನು ಸೂಚಿಸಿದೆ.
ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆಯನ್ನು 2 ಕೋಟಿಗೆ ಏರಿಸಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ದತ್ತಾಂಶವು ಮಂಗಳವಾರ ತಿಳಿಸಿದೆ. ಇದೇ ಸಮಯದಲ್ಲಿ 3,20,289 ಸೋಂಕಿತರು ಚೇತರಿಸಿಕೊಂಡು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ಕೊರೊನಾ ವೈರಸ್ ಎರಡನೇ ಅಲೆಯ ಮೂಲಕ ಹಾದುಹೋಗುತ್ತಿರುವ ಭಾರತದಲ್ಲಿ ಈಗ ಒಟ್ಟು 2,02,82,833 ಪ್ರಕರಣಗಳಿವೆ.
ಕಳೆದ 24 ಗಂಟೆಗಳಲ್ಲಿ ಸಕ್ರಿಯ ಸಂಖ್ಯೆಯು 34,47,133 ಕ್ಕೆ ತಲುಪಿದೆ.ದೇಶವು ಇಲ್ಲಿಯವರೆಗೆ 15,89,32,921 ಜನರು ಕೋವಿಡ್‌ ಲಸಿಕೆಗಳನ್ನು ಪಡೆದಿದ್ದಾರೆ.

5 / 5. 2

ನಿಮ್ಮ ಕಾಮೆಂಟ್ ಬರೆಯಿರಿ

advertisement