ನವ ದೆಹಲಿ: ದೇಶ ಬ್ಲ್ಯಾಕ್ ಫಂಗಸ್ (ಕಪ್ಪು ಶಿಲೀಂಧ್ರ) ಭೀತಿಯಲ್ಲಿರುವಾಗಲೇ ಇದಕ್ಕಿಂತ ಭಯಾನಕವಾದ ವೈಟ್ ಫಂಗಸ್ ಕಾಯಿಲೆ ಈಗ ಕಾಣಿಸಿಕೊಂಡಿದೆ.
ಬಿಹಾರ ಪಟ್ನಾದ ನಾಲ್ವರಲ್ಲಿ ವೈಟ್ ಫಂಗಸ್ (ಶ್ವೇತ ಬಣ್ಣದ ಶಿಲೀಂಧ್ರ) ಕಾಣಿಸಿಕೊಂಡಿದೆ. ಭಾರತದಲ್ಲಿ ಕಾಣಿಸಿಕೊಂಡಿರುವ ಈ ವೈಟ್ ಫಂಗಸ್ ಅತ್ಯಂತ ಅಪಾಯಕಾರಿ ಎಂದು ತಜ್ಞ ವೈದ್ಯರು ಎಚ್ಚರಿಸಿದ್ದಾರೆ. ವೈಟ್ ಫಂಗಸ್ ಶ್ವಾಸಕೋಶ ಸೇರಿದಂತೆ ಹೊಟ್ಟೆ, ಕಿಡ್ನಿ, ಜನನಾಂಗಗಳು, ಬಾಯಿ, ಚರ್ಮ ಹಾಗೂ ಉಗುರಿಗೆ ಹಾನಿ ಮಾಡುತ್ತದೆ ಎಂದು ಹೇಳಲಾಗಿದೆ.
ಈ ವೈಟ್ ಫಂಗಸ್ ಪರಿಸರದಲ್ಲಿ ಬೆಳೆಯುತ್ತದೆ. ಮಣ್ಣು, ಎಲೆಗಳ ಮೇಲೆ, ಒಣಗಿದ ಮರದಲ್ಲಿ ಈ ಫಂಗಸ್ ಬೆಳೆಯುತ್ತದೆ ಎಂದು ಹೇಳಲಾಗಿದೆ.
ತೀವ್ರ ಮಧುಮೇಹ ಸಮಸ್ಯೆಯಿಂದ ಬಳಲುತ್ತಿರುವವರು, ಅತಿ ಹೆಚ್ಚು ಸ್ಟಿರಾಯಿಡ್ಸ್ ಬಳಸುವವರರು, ಕ್ಯಾನ್ಸರ್ ಚಿಕಿತ್ಸೆ ಪಡೆಯುತ್ತಿರುವವರು
ದೀರ್ಘ ಆರೋಗ್ಯ ಸಮಸ್ಯೆ ಇರುವವರು, ಅತಿಯಾದ ನೆಗಡಿ ಸಮಸ್ಯೆ ಎದುರಿಸುತ್ತಿರುವವರು, ಉಸಿರಾಟದ ಸಮಸ್ಯೆಯಿಂದ ದೀರ್ಘ ವೈದ್ಯಕೀಯ ಆಮ್ಲಜನಕದ ಬೆಂಬಲದಲ್ಲಿದ್ದವರು ಹೀಗೆ ಅನೇಕರಲ್ಲಿ ಈ ರೋಗ ಕಾಣಿಸಿಕೊಳ್ಳಬಹುದು ಎಂದು ತಿಳಿಸಲಾಗಿದೆ.
ವೈಟ್ ಫಂಗಸ್ನ ಪ್ರಮುಕ ಲಕ್ಷಣಗಳೆಂದರೆ ತಲೆನೋವು, ಮುಖದಲ್ಲಿ ನೋವು, ಮೂಗು ಕಟ್ಟುವಿಕೆ, ದೃಷ್ಟಿ ಕಡಿಮೆಯಾಗುವುದು, ಕಣ್ಣಿನಲ್ಲಿ ನೋವು ಹಾಗೂ ಕಪ್ಪಾಗುವುದು, ಕೆನ್ನೆಗಳು ಊದಿಕೊಳ್ಳುವುದು, ವಿಪರೀತವಾದರೆ ರಕ್ತ ವಾಂತಿ ಸಂಭವಿಸಬಹುದು.ಮಾನಸಿಕ ಆರೋಗ್ಯದಲ್ಲಿ ವ್ಯತ್ಯಾಸ ಈ ಎಲ್ಲ ಲಕ್ಷಣಗಳು ಕಂಡುಬಂದರೆ ವೈದ್ಯರನ್ನು ಸಂಪರ್ಕಿಸಲು ತಿಳಿಸಲಾಗಿದೆ.
ಇದಕ್ಕಿರುವ ಔಷಧವೆಂದರೆ ಆ್ಯಂಟಿ ಫಂಗಲ್ ಇಂಜೆಕ್ಷನ್. ಇದನ್ನು ಸತತ 8 ವಾರಗಳ ಕಾಲ ಪಡೆದರೆ ಫಂಗಸ್ ವಿರುದ್ಧ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಸದ್ಯ ದೇಶದಲ್ಲಿ ಬೆರಳೆಣಿಕೆಯಷ್ಟು ಜನರಲ್ಲಿ ಮಾತ್ರ ಈ ವೈಟ್ ಫಂಗಸ್ ಕಾಣಿಸಿಕೊಂಡಿದೆ.ಈ ಲಕ್ಷಣಗಳು ಕಂಡು ಬಂದಲ್ಲಿ ಕೂಡಲೇ ವೈದ್ಯರನ್ನು ಸಂಪರ್ಕಿಸಬೇಕು ಎಂದು ತಿಳಿಸಲಾಗಿದೆ.


ನಿಮ್ಮ ಕಾಮೆಂಟ್ ಬರೆಯಿರಿ