ಬ್ಲ್ಯಾಕ್ ಫಂಗಸ್ ಬೆನ್ನಲ್ಲೇ ಈಗ ಅಪಾಯಕಾರಿ ವೈಟ್ ಫಂಗಸ್ ಪತ್ತೆ..!

ನವ ದೆಹಲಿ: ದೇಶ ಬ್ಲ್ಯಾಕ್​​ ಫಂಗಸ್​ (ಕಪ್ಪು ಶಿಲೀಂಧ್ರ) ಭೀತಿಯಲ್ಲಿರುವಾಗಲೇ ಇದಕ್ಕಿಂತ ಭಯಾನಕವಾದ ವೈಟ್​ ಫಂಗಸ್​​ ಕಾಯಿಲೆ ಈಗ ಕಾಣಿಸಿಕೊಂಡಿದೆ.
ಬಿಹಾರ ಪಟ್ನಾದ ನಾಲ್ವರಲ್ಲಿ ವೈಟ್​​ ಫಂಗಸ್​ (ಶ್ವೇತ ಬಣ್ಣದ ಶಿಲೀಂಧ್ರ) ಕಾಣಿಸಿಕೊಂಡಿದೆ. ಭಾರತದಲ್ಲಿ ಕಾಣಿಸಿಕೊಂಡಿರುವ ಈ ವೈಟ್​ ಫಂಗಸ್​ ಅತ್ಯಂತ ಅಪಾಯಕಾರಿ ಎಂದು ತಜ್ಞ ವೈದ್ಯರು ಎಚ್ಚರಿಸಿದ್ದಾರೆ. ವೈಟ್​ ಫಂಗಸ್​ ಶ್ವಾಸಕೋಶ ಸೇರಿದಂತೆ ಹೊಟ್ಟೆ, ಕಿಡ್ನಿ, ಜನನಾಂಗಗಳು, ಬಾಯಿ, ಚರ್ಮ ಹಾಗೂ ಉಗುರಿಗೆ ಹಾನಿ ಮಾಡುತ್ತದೆ ಎಂದು ಹೇಳಲಾಗಿದೆ.
ಈ ವೈಟ್​ ಫಂಗಸ್​ ಪರಿಸರದಲ್ಲಿ ಬೆಳೆಯುತ್ತದೆ. ಮಣ್ಣು, ಎಲೆಗಳ ಮೇಲೆ, ಒಣಗಿದ ಮರದಲ್ಲಿ ಈ ಫಂಗಸ್​ ಬೆಳೆಯುತ್ತದೆ ಎಂದು ಹೇಳಲಾಗಿದೆ.
ತೀವ್ರ ಮಧುಮೇಹ ಸಮಸ್ಯೆಯಿಂದ ಬಳಲುತ್ತಿರುವವರು, ಅತಿ ಹೆಚ್ಚು ಸ್ಟಿರಾಯಿಡ್ಸ್​ ಬಳಸುವವರರು, ಕ್ಯಾನ್ಸರ್​ ಚಿಕಿತ್ಸೆ ಪಡೆಯುತ್ತಿರುವವರು
ದೀರ್ಘ ಆರೋಗ್ಯ ಸಮಸ್ಯೆ ಇರುವವರು, ಅತಿಯಾದ ನೆಗಡಿ ಸಮಸ್ಯೆ ಎದುರಿಸುತ್ತಿರುವವರು, ಉಸಿರಾಟದ ಸಮಸ್ಯೆಯಿಂದ ದೀರ್ಘ ವೈದ್ಯಕೀಯ ಆಮ್ಲಜನಕದ ಬೆಂಬಲದಲ್ಲಿದ್ದವರು ಹೀಗೆ ಅನೇಕರಲ್ಲಿ ಈ ರೋಗ ಕಾಣಿಸಿಕೊಳ್ಳಬಹುದು ಎಂದು ತಿಳಿಸಲಾಗಿದೆ.
ವೈಟ್​ ಫಂಗಸ್​ನ ಪ್ರಮುಕ ಲಕ್ಷಣಗಳೆಂದರೆ ತಲೆನೋವು, ಮುಖದಲ್ಲಿ ನೋವು, ಮೂಗು ಕಟ್ಟುವಿಕೆ, ದೃಷ್ಟಿ ಕಡಿಮೆಯಾಗುವುದು, ಕಣ್ಣಿನಲ್ಲಿ ನೋವು ಹಾಗೂ ಕಪ್ಪಾಗುವುದು, ಕೆನ್ನೆಗಳು ಊದಿಕೊಳ್ಳುವುದು, ವಿಪರೀತವಾದರೆ ರಕ್ತ ವಾಂತಿ ಸಂಭವಿಸಬಹುದು.ಮಾನಸಿಕ ಆರೋಗ್ಯದಲ್ಲಿ ವ್ಯತ್ಯಾಸ ಈ ಎಲ್ಲ ಲಕ್ಷಣಗಳು ಕಂಡುಬಂದರೆ ವೈದ್ಯರನ್ನು ಸಂಪರ್ಕಿಸಲು ತಿಳಿಸಲಾಗಿದೆ.
ಇದಕ್ಕಿರುವ ಔಷಧವೆಂದರೆ ಆ್ಯಂಟಿ ಫಂಗಲ್​ ಇಂಜೆಕ್ಷನ್.​​ ಇದನ್ನು ಸತತ 8 ವಾರಗಳ ಕಾಲ ಪಡೆದರೆ ಫಂಗಸ್​ ವಿರುದ್ಧ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಸದ್ಯ ದೇಶದಲ್ಲಿ ಬೆರಳೆಣಿಕೆಯಷ್ಟು ಜನರಲ್ಲಿ ಮಾತ್ರ ಈ ವೈಟ್​ ಫಂಗಸ್​ ಕಾಣಿಸಿಕೊಂಡಿದೆ.ಈ ಲಕ್ಷಣಗಳು ಕಂಡು ಬಂದಲ್ಲಿ ಕೂಡಲೇ ವೈದ್ಯರನ್ನು ಸಂಪರ್ಕಿಸಬೇಕು ಎಂದು ತಿಳಿಸಲಾಗಿದೆ.

ಪ್ರಮುಖ ಸುದ್ದಿ :-   ವಿಡಿಯೊ | ಕಾರ್ಗಿಲ್ ಯುದ್ಧದಲ್ಲಿ ತಮ್ಮ ಸೈನಿಕರ ಶವಗಳನ್ನೂ ಸ್ವೀಕರಿಸದ ಪಾಕ್ ಸೇನೆ, ಭಾರತ ಸಮಾಧಿ ಮಾಡಿತ್ತು ; ತಮ್ಮ ಸೇನೆಗೇ ಪಾಕ್‌ ನಾಯಕನಿಂದ ಮಂಗಳಾರತಿ

 

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement