ರಾಯ್ಪುರ: ಸೂರಜ್ಪುರದ ಜಿಲ್ಲಾಧಿಕಾರಿ ಅವರನ್ನು ತೆಗೆಯುವಂತೆ ಛತ್ತೀಸ್ಗಡ ಮುಖ್ಯಮಂತ್ರಿ ಭೂಪೇಶ್ ಬಾಗೆಲ್ ಆದೇಶಿಸಿದ್ದಾರೆ.
ಕೊರೊನಾ ವೈರಸ್ ಲಾಕ್ಡೌನ್ ನಿರ್ಬಂಧಗಳನ್ನು ಉಲ್ಲಂಘಿಸಿದ ಆರೋಪದ ಮೇಲೆ ಸೂರಜ್ಪುರದ ಜಿಲ್ಲಾಧಿಕಾರಿ ರಣಬೀರ್ ಶರ್ಮಾ ಯುವಕನ ಕೆನ್ನೆಗೆ ಹೊಡೆದಿದ್ದು ಹಾಗೂ ಮೊಬೈಲ್ ಫೋನ್ ಅನ್ನು ರಸ್ತೆಗೆ ಅಪ್ಪಳಿಸಿ ಒಡೆದು ಹಾಕಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ನಂತರ ಈ ಆದೇಶ ಹೊರಬಿದ್ದಿದೆ.
ವೈರಲ್ ಕ್ಲಿಪ್ ಬಲವಾದ ಸಾರ್ವಜನಿಕ ಟೀಕೆಗೆ ಕಾರಣವಾಯಿತು ಮತ್ತು ಅನೇಕರು ಶರ್ಮಾ ಅವರನ್ನು ವಜಾಗೊಳಿಸುವಂತೆ ಒತ್ತಾಯಿಸಿದ್ದರು..
ಮುಖ್ಯಮಂತ್ರಿ ಭೂಪೇಶ್ ಬಾಗೆಲ್ ಅವರು ಈ ಘಟನೆ ಖಂಡಿಸಿದ್ದಾರೆ ಮತ್ತು ವಿಷಾದ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದಾರೆ.
ನಾನು ಘಟನೆಯ ಬಗ್ಗೆ ಸಾಮಾಜಿಕ ಮಾಧ್ಯಮದಿಂದ ಅರಿತಿದ್ದೇನೆ. ಇದು ಅತ್ಯಂತ ದುಃಖಕರ ಮತ್ತು ಖಂಡನೀಯಘಟನೆ. ಛತ್ತೀಸ್ಗಡದಲ್ಲಿ ಇಂತಹ ಕೃತ್ಯವನ್ನು ಸಹಿಸಲಾಗುವುದಿಲ್ಲ ”ಎಂದು ಅವರು ಟ್ವೀಟ್ ಮಾಡಿದ್ದಾರೆ.
ಏತನ್ಮಧ್ಯೆ, ಜಿಲ್ಲಾಧಿಕಾರಿ ರಣಬೀರ ಶರ್ಮಾ ಅವರು ತಮ್ಮ ವರ್ತನೆಗೆ ಕ್ಷಮೆಯಾಚಿಸಿದ್ದಾರೆ.
ಶನಿವಾರದ ವರ್ತನೆಗೆ ನಾನು ಪ್ರಾಮಾಣಿಕವಾಗಿ ಕ್ಷಮೆಯಾಚಿಸುತ್ತೇನೆ. ವ್ಯಕ್ತಿಯನ್ನು ಅಗೌರವಗೊಳಿಸುವ ಅಥವಾ ಕಡಿಮೆ ಮಾಡುವ ಉದ್ದೇಶವನ್ನು ಎಂದಿಗೂ ಹೊಂದಿರಲಿಲ್ಲ, ”ಎಂದು ಅವರು ಹೇಳಿದರು ಆದರೆ ಹೆಚ್ಚುತ್ತಿರುವ ಸಾಂಕ್ರಾಮಿಕ ಬಿಕ್ಕಟ್ಟನ್ನು ನಿಭಾಯಿಸಲು ಶ್ರಮಿಸುತ್ತಿರುವ ಸರ್ಕಾರಿ ನೌಕರನಾಗಿ ಇದನ್ನು ಮಾಡಿದ್ದೇನೆ ಎಂದು ಅವರು ಹೇಳಿದ್ದಾರೆ.
ಆದಾಗ್ಯೂ, ಹಲವಾರು ಹಿರಿಯ ಅಧಿಕಾರಿಗಳು ಜಿಲ್ಲಾಧಿಕಾರಿಯ ಈ ವರ್ತನೆಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಹಾಗೂ ಇದು ನ್ಯಾಸಮ್ಮತವಲ್ಲ ಎಂದು ಹೇಳಿದ್ದಾರೆ.
ಈ ವರ್ತನೆಅನಗತ್ಯವಾಗಿತ್ತು ಮತ್ತು ತಪ್ಪಿಸಬಹುದಾಗಿತ್ತು” ಎಂದು ಛತ್ತೀಸ್ಗಡದ ವಿಶೇಷ ಡಿಜಿ ಆರ್. ಕೆ. ವಿಜ್ ಹೇಳಿದ್ದಾರೆ.
ಐಎಎಸ್ ಅಸೋಸಿಯೇಷನ್ನ ಅಧಿಕೃತ ಟ್ವಿಟರ್ ಹ್ಯಾಂಡಲ್ ಸೂರಜ್ಪುರ ಜಿಲ್ಲಾಧಿಕಾರಿ ನಡವಳಿಕೆಯನ್ನು ಬಲವಾಗಿ ಖಂಡಿಸಿದೆ, ವಿಶೇಷವಾಗಿ ಸವಾಲಿನ ಸಂದರ್ಭಗಳ ಮಧ್ಯೆ ನಾಗರಿಕ ಸೇವಕರು ಎಲ್ಲಾ ಸಮಯದಲ್ಲೂ ಅನುಭೂತಿ ಹೊಂದಿರಬೇಕು ಎಂದು ಹೇಳಿದೆ.
ಇದು ಸ್ವೀಕಾರಾರ್ಹವಲ್ಲ ಮತ್ತು ಸೇವೆ ಮತ್ತು ನಾಗರಿಕತೆಯ ಮೂಲ ಸಿದ್ಧಾಂತಗಳಿಗೆ ವಿರುದ್ಧವಾಗಿದೆ” ಎಂದು ಅದು ಹೇಳಿದೆ.


ನಿಮ್ಮ ಕಾಮೆಂಟ್ ಬರೆಯಿರಿ