ಏನೇನ್‌ ಮಾಡ್ತಾರೋ..ಕೋವಿಡ್ ನಿರ್ಬಂಧ ತಪ್ಪಿಸಲು ವಿಮಾನದಲ್ಲಿ ಮದುವೆಯಾದ ಮಧುರೈ ದಂಪತಿ…!

ಚೆನ್ನೈ: ಮದುವೆಯೆಂದರೆ ತಮ್ಮ ಹತ್ತಿರದ ಮತ್ತು ಆತ್ಮೀಯರೆಲ್ಲರೂ ಸಮಾರಂಭದಲ್ಲಿ ಹಾಜರಾಗಬೇಕೆಂದು ಬಯಸಿದಾಗ ಅದು ಒಬ್ಬರ ಜೀವನದ ಒಂದು ವಿಶೇಷ ಘಟನೆಯಾಗುತ್ತದೆ. ಆದರೆ ಕೋವಿಡ್‌-19 ಸಾಂಕ್ರಾಮಿಕದ ದೃಷ್ಟಿಯಿಂದ, ಅನೇಕ ರಾಜ್ಯಗಳು ಮತ್ತು ನಗರಗಳುಲಾಕ್‌ಡೌನ್‌ ಜಾರಿ ಮಾಡಿದ್ದು, ವಿವಾಹಗಳಿಗೆ ಜನರು ಪಾಲ್ಗೊಳ್ಳುವುದನ್ನು ಸೀಮಿತಗೊಳಿಸಲಾಗಿದೆ.
ಆದರೆ, ಇದೆಲ್ಲದರ ಮಧ್ಯೆ, ತಮಿಳುನಾಡಿನ ಮಧುರೈನ ನವ ವಧು-ವರರು ತಾವು ತಮ್ಮ ಎಲ್ಲ ಪ್ರೀತಿಪಾತ್ರರ ಸಮ್ಮುಖದಲ್ಲಿ ಮದುವೆಯಾಗಬೇಕೆಂಬ ಅನನ್ಯ ಆಲೋಚನೆಯಿಂದ ಕೋವಿಡ್ ನಿರ್ಬಂಧ ತಪ್ಪಿಸಿಕೊಳ್ಳಲು ವಿಮಾನದಲ್ಲಿ ಮದುವೆಯಾಗುವ ಈಡಿಯಾ ಮಾಡಿದರು..! ವಿಮಾನವೊಂದರಲ್ಲಿ ಮದುವೆ ಕಾರ್ಯಕ್ರಮ ಏರ್ಪಡಿಸಿ ಸತಿ-ಪತಿಗಳಾಗಿದ್ದಾರೆ…!

ಈ ದಂಪತಿ ಮಧುರೈ-ಬೆಂಗಳೂರಿಗೆ ತೆರಳುವ ಪೂರ್ಣ ವಿಮಾನದ ಪ್ರಯಾಣವನ್ನೇ ಕಾಯ್ದಿರಿಸಿದ್ದಾರೆ. ಈ ವಿಮಾನವು ಮಧುರೈ ಮೀನಾಕ್ಷಿ ಅಮ್ಮನವರ ದೇವಾಲಯದ ಮೇಲೆ ಹಾರಿದಾಗ ನಿಖರವಾಗಿ ಮದುವೆ ಗಂಟು ಕಟ್ಟಲಾಗಿದೆ. 161 ಸಂಬಂಧಿಕರು ಈ ಮದುವೆಗೆ ವಿಮಾನ ಮೇಲೆ ಸಾಕ್ಷಿಯಾಗಿದ್ದಾರೆ ಎಂದು ವರದಿಯೊಂದು ತಿಳಿಸಿದೆ.
ಮಧುರೈ ನಿವಾಸಿಗಳಾದ ರಾಕೇಶ್-ದಕ್ಷಿಣಾ ದಂಪತಿ ತಮಿಳುನಾಡಿನಲ್ಲಿ ನಡೆಯುತ್ತಿರುವ ಕೋವಿಡ್‌-19 ವಿವಾಹ ನಿರ್ಬಂಧಗಳು ಮತ್ತು ಕರ್ಫ್ಯೂ ತಪ್ಪಿಸುವ ಉದ್ದೇಶದಿಂದ ಎರಡು ಗಂಟೆಗಳ ಕಾಲ ವಿಮಾನವನ್ನು ಬಾಡಿಗೆಗೆ ಪಡೆಯಲು ನಿರ್ಧರಿಸಿದರು. ಆಕಾಶದ ಮೇಲೆಯೇ ತಾಳಿ ಕಟ್ಟಿ ಸತಿ-ಪತಿಗಳಾದರು. ಇದಕ್ಕೆ ಅವರು ಸಂಬಂಧಿಕರು, ಸ್ನೇಹಿತರು ಸೇರಿದಂತೆ 161 ಜನರು ಸಾಕ್ಷಿಯಾದರು. ಆಕಾಶದಲ್ಲಿ ಮದುವೆ ಯಾಕೆ ನಡೆಯಿತೆಂದರೆ ಈ ನೆಲದ ಕಾನೂನು ಅಲ್ಲಿ ಜಾರಿಗೆ ಬರುವುದಿಲ್ಲವಲ್ಲ..!!

ಪ್ರಮುಖ ಸುದ್ದಿ :-   ಭಾರತ ತಂಡದ ಕ್ರಿಕೆಟ್‌ ಆಟಗಾರ ರಿಂಕು ಸಿಂಗ್–ಸಂಸದೆ ಪ್ರಿಯಾ ಸರೋಜ ಮದುವೆಗೆ ಮುಹೂರ್ತ ಫಿಕ್ಸ್

4.4 / 5. 5

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement