ಕೋವಿಡ್ -19ಕ್ಕೆ ಮತ್ತೊಂದು ಔಷಧ: ರೋಚೆಸ್ ಎಂಟಿಬಾಡಿ ಕಾಕ್ಟೈಲ್ ಔಷಧ ಈಗ ಭಾರತದಲ್ಲಿ ಲಭ್ಯ

ನವ ದೆಹಲಿ: ಹೆಚ್ಚಿನ ಅಪಾಯದಲ್ಲಿರುವ ಸೌಮ್ಯ ಮತ್ತು ಮಧ್ಯಮ ಕೋವಿಡ್‌-19 ರೋಗಿಗಳ ಚಿಕಿತ್ಸೆಗಾಗಿ ಭಾರತದಲ್ಲಿ ಎಂಟಿಬಾಡಿ ಕಾಕ್ಟೈಲ್ (ಕ್ಯಾಸಿರಿವಿಮಾಬ್ ಮತ್ತು ಇಮ್ಡೆವಿಮಾಬ್) ಮೊದಲ ಬ್ಯಾಚ್ ಲಭ್ಯತೆಯನ್ನು ಫಾರ್ಮಾ ಕಂಪನಿಗಳಾದ ರೋಚೆ ಇಂಡಿಯಾ ಮತ್ತು ಸಿಪ್ಲಾ ಸೋಮವಾರ ಪ್ರಕಟಿಸಿವೆ.
ರೋಚೆಸ್‌ ಇಂಡಿಯಾ ಹಾಗೂ ಸಿಪ್ಲಾ ಸಂಸ್ಥೆ ಸೇರಿ ಹೊರತಂದಿರುವ ಈ ಕಾಕ್‍ಟೈಲ್ ಪ್ರತಿ ಡೋಸ್‍ನ ಬೆಲೆ ಪ್ರತಿ ರೋಗಿಯ ಡೋಸ್‌ನ ಬೆಲೆ (1200 ಮಿಗ್ರಾಂ (600 ಮಿಗ್ರಾಂ ಕ್ಯಾಸಿರಿವಿಮಾಬ್ ಮತ್ತು 600 ಮಿಗ್ರಾಂ ಇಮ್ಡೆವಿಮಾಬ್) ಎಲ್ಲಾ ತೆರಿಗೆಗಳನ್ನು ಒಳಗೊಂಡಂತೆ, 59,750 ರೂ.ಆಗಿರುತ್ತದೆ. ಮಲ್ಟಿಡೋಸ್ ಪ್ಯಾಕ್‌ಗೆ ಗರಿಷ್ಠ ಚಿಲ್ಲರೆ ಬೆಲೆ (ಪ್ರತಿ ಪ್ಯಾಕ್ ಇಬ್ಬರು ರೋಗಿಗಳಿಗೆ ಚಿಕಿತ್ಸೆ ನೀಡಬಹುದು) ಎಲ್ಲ ತೆರಿಗೆಗಳನ್ನು ಒಳಗೊಂಡಂತೆ 1,19,500 ರೂ.ಗಳಾಗಿರುತ್ತದೆ.
SARS-COV2 ಸೋಂಕಿಗೆ ಒಳಗಾದ ಮತ್ತು ಹೆಚ್ಚಿನ ಅಪಾಯದಲ್ಲಿರುವ ಮತ್ತು ಆಮ್ಲಜನಕದ ಅಗತ್ಯವಿಲ್ಲದ ವಯಸ್ಕರು ಮತ್ತು ಮಕ್ಕಳ ರೋಗಿಗಳಲ್ಲಿ (12 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನ, ಕನಿಷ್ಠ 40 ಕೆಜಿ ತೂಕದ) ಸೌಮ್ಯದಿಂದ ಮಧ್ಯಮ ಕೊರೊನಾವೈರಸ್ ಕಾಯಿಲೆ 2019 (COVID-19) ಚಿಕಿತ್ಸೆಗಾಗಿ ಪ್ರತಿಕಾಯ ಕಾಕ್ಟೈಲ್ (ಕ್ಯಾಸಿರಿವಿಮಾಬ್ ಮತ್ತು ಇಮ್ಡೆವಿಮಾಬ್) ಅನ್ನು ನಿರ್ವಹಿಸಲಾಗುತ್ತದೆ.
ಎರಡನೆ ಬ್ಯಾಚಿನಲ್ಲಿ ಮತ್ತಷ್ಟು ಕಾಕ್‍ಟೈಲ್ ಔಷಧಿ ಲಭ್ಯವಾಗಲಿದೆ ಎಂದು ಕಂಪನಿ ಹೇಳಿದ್ದು ಒಂದು ಲಕ್ಷ ಔಷಧದ ಪ್ಯಾಕೇಟ್‍ಗಳಿಂದ ಎರಡು ಲಕ್ಷ ಜನರಿಗೆ ಚಿಕಿತ್ಸೆ ಕೊಡಬಹುದಾಗಿದೆ. ಭಾರತದಲ್ಲಿ ಇಬ್ಬರು ಸೋಂಕಿತರಿಗೆ ಚಿಕಿತ್ಸೆ ನೀಡಲಾಗಿದೆ ಎಂದು ರೋಚೆ ಹಾಗೂ ಸಿಪ್ಲಾ ಸಂಸ್ಥೆಗಳು ಜಂಟಿ ಹೇಳಿಕೆಯಲ್ಲಿ ತಿಳಿಸಿವೆ.
ಕಾಕ್‍ಟೈಲ್ ಔಷಧವನ್ನು ದೇಶದ ಎಲ್ಲಾ ಭಾಗಗಳಿಗೂ ತಲುಪಿಸುವ ಹೊಣೆಯನ್ನು ಸಿಪ್ಲಾ ಸಂಸ್ಥೆ ವಹಿಸಿಕೊಂಡಿದೆ. ಈಗಾಗಲೇ ವಿದೇಶಗಳಲ್ಲಿ ಯಶಸ್ವಿಯಾಗಿರುವ ಈ ಔಷಧಿಯನ್ನು ದೇಶದಲ್ಲಿ ಬಳಕೆ ಮಾಡಲು ಡ್ರಗ್ ಕಂಟ್ರೋಲ್ ಸಂಸ್ಥೆ ಗ್ರೀನ್ ಸಿಗ್ನಲ್ ನೀಡಿದೆ. ಹೀಗಾಗಿ ದೇಶದ ಪ್ರತಿಷ್ಠಿತ ಆಸ್ಪತ್ರೆಗಳಲ್ಲಿ ಇನ್ನು ಈ ಔಷಧಿ ಲಭ್ಯವಾಗಲಿದೆ.

ಪ್ರಮುಖ ಸುದ್ದಿ :-   ಹ್ಯಾರಿಯರ್ ಕಾರು, ನಕಲಿ ಎನ್‌ಎಸ್‌ಜಿ ಕಮಾಂಡೋಗಳು ! ಸೇನೆಯ ಬ್ರಿಗೇಡಿಯರ್ ಸೋಗಿನಲ್ಲಿ ಓಡಾಡುತ್ತಿದ್ದ ಯುವಕ ಬಲೆಗೆ ಬಿದ್ದಿದ್ದೇ ರೋಚಕ

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement