ನವ ದೆಹಲಿ: ಜೂನ್ 21 ರಿಂದ 18 ವರ್ಷ ಮೇಲ್ಪಟ್ಟ ವಯಸ್ಸಿನ ಎಲ್ಲರಿಗೂ ಉಚಿತ ಲಸಿಕೆಗಳನ್ನು ನೀಡುವುದಾಗಿ ಪ್ರದಾನಿ ನರೇಂದ್ರ ಮೋದಿ ಘೋಷಣೆ ಮಾಡಿದ್ದಾರೆ.
ಜೂನ್ 21 ರಿಂದ ರಾಜ್ಯಗಳಿಗೆ ಉಚಿತವಾಗಿ ಲಸಿಕೆಗಳನ್ನು ನೀಡಲಾಗುವುದು. ಕೇಂದ್ರವು ಶೇಕಡಾ 75 ರಷ್ಟು ಲಸಿಕೆಗಳನ್ನು ಸಂಗ್ರಹಿಸುತ್ತದೆ ಮತ್ತು ರಾಜ್ಯಗಳಿಗೆ ಉಚಿತವಾಗಿ ನೀಡುತ್ತದೆ. ಖಾಸಗಿ ಆಸ್ಪತ್ರೆಗಳು ಶೇಕಡಾ 25 ರಷ್ಟು ಖರೀದಿಸಬಹುದು, ಆದರೆ ಹೆಚ್ಚುವರಿ ಆಸ್ಪತ್ರೆಗಳು ಲಸಿಕೆ ಶುಲ್ಕ ಬಿಟ್ಟು ಒಂದು ಡೋಸಿಗೆ ಸೇವಾ ಶುಲ್ಕ 150 ರೂ.ಗಳು ತೆಗೆದುಕೊಳ್ಳಬೇಕು ಎಂದು ತಿಳಿಸಿದರು.
ಭಾರತದ ಕೋವಿಡ್-19 ಪರಿಸ್ಥಿತಿ ಕುರಿತು ಪ್ರಧಾನಿ ನರೇಂದ್ರ ಮೋದಿ ಸೋಮವಾರ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಿ 18-44 ವಯೋಮಾನದವರಿಗೆ ಮತ್ತು ದೇಶದ 45 ಕ್ಕಿಂತ ಹೆಚ್ಚು ವಯಸ್ಸಿನವರಿಗೆ ಲಸಿಕೆ ಹಾಕುವ ವ್ಯಾಕ್ಸಿನೇಷನ್ ಡ್ರೈವ್ ಅನ್ನು ಕೇಂದ್ರ ಸರ್ಕಾರ ವಹಿಸಿಕೊಳ್ಳಲಿದೆ ಎಂದು ಹೇಳಿದರು.
ಜೂನ್ 21 ರಿಂದ ಕೇಂದ್ರ ಸರ್ಕಾರವು 18 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಉಚಿತವಾಗಿ ಲಸಿಕೆ ನೀಡಲಿದೆ. ರಾಜ್ಯಗಳಿಗೆ ಇದಕ್ಕೆ ಒಂದು ಪೈಸೆ ವೆಚ್ಚ ಇರುವುದಿಲ್ಲ. ಕೇಂದ್ರ ಸರ್ಕಾರವು ದೇಶದಲ್ಲಿ ಉತ್ಪಾದಿಸುವ 75% ಲಸಿಕೆಗಳನ್ನು ತಯಾರಕರಿಂದ ಖರೀದಿಸಿ ರಾಜ್ಯಗಳಿಗೆ ಉಚಿತವಾಗಿ ವಿತರಿಸುತ್ತದೆ. ದೇಶದಲ್ಲಿ ಉತ್ಪತ್ತಿಯಾಗುವ ಉಳಿದ 25% ಲಸಿಕೆಗಳನ್ನು ಖಾಸಗಿ ವಲಯದಿಂದ ನೇರವಾಗಿ ಲಸಿಕೆ ತಯಾರಕರಿಂದ ಖರೀದಿಸಬಹುದು ಎಂದು ಪ್ರಧಾನಿ ಹೇಳಿದರು.
ಪ್ರತಿ ರಾಜ್ಯಕ್ಕೆ ಎಷ್ಟು ಡೋಸ್‌ಗಳು ಸಿಗುತ್ತವೆ ಮತ್ತು ಯಾವಾಗ ಸಿಗುತ್ತವೆ ಎಂಬುದನ್ನು ಕೆಲವು ವಾರಗಳ ಮುಂಚಿತವಾಗಿ ತಿಳಿಸಲಾಗುತ್ತದೆ ಎಂದು ಸ್ಪಷ್ಟಪಡಿಸಿದರು.
ಒಡಿಶಾ, ತೆಲಂಗಾಣ ಮತ್ತು ಕೇರಳ ಸೇರಿದಂತೆ ಅನೇಕ ರಾಜ್ಯಗಳ ಮುಖ್ಯಮಂತ್ರಿಗಳು ಕೇಂದ್ರ ಸರ್ಕಾರವನ್ನು ಸಂಗ್ರಹಣೆಯ ಉಸ್ತುವಾರಿ ವಹಿಸಿಕೊಳ್ಳಲು ಮತ್ತು ಲಸಿಕೆಗಳ ವಿತರಣೆಯನ್ನು ಉಚಿತವಾಗಿ ನಡೆಯುವಂತೆ ನೋಡಿಕೊಳ್ಳುವಂತೆ ಕೇಳಿದ ಬೆನ್ನಲ್ಲೇ ಈ ಘೋಷಣೆ ಬಂದಿದೆ. ಲಸಿಕೆ ಕಂಪನಿಗಳು ರಾಜ್ಯಗಳೊಂದಿಗೆ ನೇರವಾಗಿ ವ್ಯವಹರಿಸಲು ಸಿದ್ಧರಿಲ್ಲ ಎಂದು ಪಂಜಾಬ್ ಮತ್ತು ದೆಹಲಿಯಂತಹ ಅನೇಕ ರಾಜ್ಯಗಳು ಹೇಳಿದ್ದವು.
ವ್ಯಾಕ್ಸಿನೇಷನ್ ಪ್ರಕ್ರಿಯೆಯ ವಿಕೇಂದ್ರೀಕರಣಕ್ಕೆ ಒತ್ತಾಯಿಸಿ, ನಂತರ ‘ಅಡೆತಡೆಗಳನ್ನು’ ಎದುರಿಸಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದ ರಾಜ್ಯ ಸರ್ಕಾರಗಳನ್ನು ತಮ್ಮ ಭಾಷಣದಲ್ಲಿ ಪ್ರಧಾನಿ ಟೀಕಿಸಿದರು.
“ಆರೋಗ್ಯವು ರಾಜ್ಯ ವಿಷಯವಾಗಿರುವುದರಿಂದ, ರಾಜ್ಯಗಳು ಎಲ್ಲವನ್ನೂ ಮಾಡುವುದು ಒಳ್ಳೆಯದು ಎಂಬ ಒತ್ತಾಯ ಕೇಳಿಬಂದಿದ್ದರಿಂದ ಈ ದಿಕ್ಕಿನಲ್ಲಿ, ಕೇಂದ್ರ ಸರ್ಕಾರವು ಉದಾರೀಕೃತ ವ್ಯಾಕ್ಸಿನೇಷನ್ ನೀತಿಯನ್ನು ರೂಪಿಸಿತು. ಲಾಕ್‌ಡೌನ್, ಕಂಟೈನ್‌ಮೆಂಟ್, ಮೂಲಸೌಕರ್ಯಗಳಂತಹ ನಿರ್ಧಾರಗಳನ್ನು ತೆಗೆದುಕೊಳ್ಳುವ ರಾಜ್ಯಗಳ ಬೇಡಿಕೆಗಳನ್ನು ಗಮನಿಸಲಾಯಿತು. ವ್ಯಾಕ್ಸಿನೇಷನ್ ಡ್ರೈವ್ ಅನ್ನು ಕೇಂದ್ರ ಸರ್ಕಾರ ನೋಡಿಕೊಳ್ಳುತ್ತಿದೆ. ಭಾರತ ತನ್ನ ಉಚಿತ ವ್ಯಾಕ್ಸಿನೇಷನ್ ನೀತಿಯೊಂದಿಗೆ ಮುಂದುವರಿಯುತ್ತಿದೆ ಮತ್ತು ಲಸಿಕೆ ಪಡೆಯಲು ಜನರು ತಮ್ಮ ಸರದಿಗಾಗಿ ಕಾಯುತ್ತಿದ್ದರು. ನಂತರ ರಾಜ್ಯಗಳು ಪ್ರಕ್ರಿಯೆಯನ್ನು ವಿಕೇಂದ್ರೀಕರಿಸಬೇಕೆಂದು ಕೇಳಿಕೊಂಡವು ಎಂದು ಅವರು ಹೇಳಿದರು.
ವ್ಯಾಕ್ಸಿನೇಷನ್ ವಯಸ್ಸಾದವರಿಗೆ ಮೊದಲು ಏಕೆ ಮಾಡಬೇಕು? ಕೇಂದ್ರವು ವಯಸ್ಸಿನ ಗುಂಪನ್ನು ಏಕೆ ನಿರ್ಧರಿಸುತ್ತಿದೆ? ಹಿರಿಯ ನಾಗರಿಕರು ಏಕೆ ಮೊದಲ ಸ್ಥಾನ ಪಡೆಯುತ್ತಿದ್ದಾರೆ ಎಂದು ಪ್ರಶ್ನಿಸಿದವು ಎಂದು ಟೀಕಿಸಿದರು. ಆದರೆ ವ್ಯಾಕ್ನಿನೇಶನ್ ಅವರ ಕೈಗೆ ಬಂದಾಗ ಅವರಿಗೆ ಅದರ ಸಮಸ್ಯೆಗಳು ಎದುರಾದವು ಎಂದು ಹೇಳಿದರು.
ಇಂದು ರಾಜ್ಯಗಳಿಗೆ ನೀಡಲಾಗಿದ್ದ 25% ಕೆಲಸವನ್ನು ಕೇಂದ್ರ ಸರ್ಕಾರವು ಸಹ ತೆಗೆದುಕೊಳ್ಳುತ್ತದೆ. ಮುಂದಿನ ಎರಡು ವಾರಗಳಲ್ಲಿ ಇದನ್ನು ಜಾರಿಗೆ ತರಲಾಗುವುದು ಮತ್ತು ಹೊಸ ಮಾರ್ಗಸೂಚಿಗಳನ್ನು ಹೊರಡಿಸಲಾಗುವುದು ”ಎಂದು ಪ್ರಧಾನಿ ಹೇಳಿದರು. “ಜೂನ್ 21 ರಿಂದ, 18 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲಾ ನಾಗರಿಕರಿಗೆ ಸರ್ಕಾರ ಉಚಿತ ಲಸಿಕೆಗಳನ್ನು ನೀಡುತ್ತದೆ. ಪ್ರಧಾನ ಮಂತ್ರಿ 75% ಲಸಿಕೆಗಳನ್ನು ಕೇಂದ್ರ ಸರ್ಕಾರದಿಂದ ಸಂಗ್ರಹಿಸಿ ರಾಜ್ಯಗಳಿಗೆ ನೀಡಲಾಗುವುದು, ಆದ್ದರಿಂದ ರಾಜ್ಯಗಳು ಲಸಿಕೆಗಳಿಗೆ ಖರ್ಚು ಮಾಡಬೇಕಾಗಿಲ್ಲ ಎಂದು ಹೇಳಿದರು.
ನ ಮೂರನೇ ಅಲೆಯನ್ನು ನೋಡುತ್ತಿರುವ ಸಮಯದಲ್ಲಿ ಪ್ರಧಾನಿ ಮೋದುವರು ದೇಶವನ್ನುದ್ದೇಶಿಸಿ ಮಾತನಾಡಿದರು.


ನಿಮ್ಮ ಕಾಮೆಂಟ್ ಬರೆಯಿರಿ