ಸೆಲ್ಫಿ ತೆಗೆಯುವಾಗ ಕಾಲುಜಾರಿ ಸಮುದ್ರದಲ್ಲಿ ಬಿದ್ದಿದ್ದ ಯುವಕನ ಶವಪತ್ತೆ

posted in: ರಾಜ್ಯ | 0

ಕುಮಟಾ :ಇಲ್ಲಿನ ಹೆಡ್ ಬಂದರು ಸಮೀಪ ಅರಬ್ಬಿ ಸಮುದ್ರ ತೀರದಲ್ಲಿ ಗುರುವಾರ ಸೆಲ್ಫಿ ತೆಗೆಯುತ್ತಿರುವಾಗ ಗುರುವಾರ ಸಂಜೆ ಬಂಡೆ ಮೇಲಿಂದ ಜಾರಿಬಿದ್ದು ನಾಪತ್ತೆಯಾಗಿದ್ದ ಯುವಕನ ಮೃತ ದೇಹ ಶುಕ್ರವಾರ ಪತ್ತೆಯಾಗಿದೆ.
ಮೃತನನ್ನುಅಭಿಷೇಕ್ ಹನುಮಂತ ಭೋಯ್( 25)ಎಂದು ಗುರುತಿಸಲಾಗಿದೆ.ಅಭಿಷೇಕ ಕೊಪ್ಪಳದ ಹೊಸಲಿಂಗಪುರದ ಎಂದು ಗುರುತಿಸಲಾಗಿದೆ. ಕುಮಟಾದ ತನ್ನ ಅಕ್ಕನ ಮನೆಗೆ ಬಂದಿದ್ದು ಲಾಕ್ ಡೌನ್‌ನಿಂದಾಗಿ ಕುಮಟಾದಲ್ಲಿ ಅಕ್ಕನ ಮನೆಯಲ್ಲೇ ಉಳಿದುಕೊಂಡಿದ್ದ. ಗುರುವಾರ ಸಮುದ್ರ ವೀಕ್ಷಣೆಗಾಗಿ ಹೆಡ್ ಬಂದರಿಗೆ ಹೋಗಿದ್ದಾಗ ಸೆಲ್ಫಿ ತೆಗೆಯುವಾಗ ದುರದೃಷ್ಟಶಾತ್ ಕಾಲುಜಾರಿ ಬಿದ್ದು ಸಮುದ್ರದಲ್ಲಿ ಮೃತಪಟ್ಟಿದ್ದಾನೆ. ಈತನಿಗಾಗಿ ಗುರುವಾರ ಸಂಜೆಯಿಂದ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಮದಿ ಹುಡುಕಅಟ ನಡೆಸಿದ್ದರು. ಕುಮಟಾ ಪೊಲೀಸರು ತನಿಖೆ ನಡೆಸಿದ್ದಾರೆ.

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

5 / 5. ಒಟ್ಟು ವೋಟುಗಳು 2

ನಿಮ್ಮ ಕಾಮೆಂಟ್ ಬರೆಯಿರಿ