ಕೋವಿಡ್-19 ಮೂಲದ ಬಗ್ಗೆ ಆಧಾರ ಸಹಿತ ತನಿಖೆಗೆ ಜಿ-7 ಒತ್ತಾಯ

ಲಂಡನ್: ಬ್ರಿಟನ್ನಿನಲ್ಲಿ ನಡೆಯುತ್ತಿರುವ ಜಿ-7 ಶೃಂಗಸಭೆಯಲ್ಲಿ ಕೋವಿಡ್‌ ಲಸಿಕೆಗೆ ಸಹಕಾರ ನೀಡುವುದೂ ಸೇರಿದಂತೆ ಹಲವು ಪ್ರಮುಖ ನಿರ್ಣಯಗಳನ್ನು ಕೈಗೊಳ್ಳಲಾಗಿದ್ದು, ಕೊರೊನಾ ಮೂಲದ ಪತ್ತೆ ಬಗ್ಗೆಯೂ ನಿರ್ಣಯ ಅಂಗೀಕರಿಸಿರುವುದು ಮಹತ್ವ ಪಡೆದಿದೆ.
ಸಮಯೋಚಿತ, ಪಾರದರ್ಶಕ, ತಜ್ಞರ ನೇತೃತ್ವದ ಮತ್ತು ವಿಜ್ಞಾನ ಆಧಾರಿತ, ಡಬ್ಲ್ಯುಹೆಚ್‌ಒ ಮೇಲ್ವಿಚಾರಣೆಯಲ್ಲಿ ಕೋವಿಡ್-19 ಸೋಂಕು ಮೂಲದ ಪತ್ತೆ ಮಾಡಬೇಕಿದೆ ಎಂದು ಜಿ-7 ನಾಯಕರು ಕರೆ ನೀಡಿದ್ದಾರೆ.
ಚೀನಾದಲ್ಲಿ ಕೊರೊನಾ ವೈರಸ್ ಸೃಷ್ಟಿಯಾಗಿದೆ ಎಂಬ ಆರೋಪದ ಬಗ್ಗೆ ತಜ್ಞರ ಆಯಾಮದಿಂದಲೂ ತನಿಖೆ ನಡೆಯಬೇಕೆಂದು ಜಿ-7 ನಾಯಕರು ಒತ್ತಾಯಿಸಿದ್ದಾರೆ.
ಈ ಪೈಕಿ ಕೊರೊನಾ ಮೂಲವನ್ನು ಪತ್ತೆ ಮಾಡುವ ನಿರ್ಣಯವನ್ನೂ ಕೈಗೊಳ್ಳಲಾಗಿದೆ. ಕೊರೊನಾ ವುಹಾನ್ ನಿಂದ ಮೊದಲು ವರದಿಯಾಗಿ 1.5 ವರ್ಷಗಳೇ ಕಳೆದರೂ ಸಹ ಕೋವಿಡ್-19 ಮೂಲ ರಹಸ್ಯಾವಗಿಯೇ ಉಳಿದಿದೆ.
ಈ ಹಿನ್ನೆಲೆಯಲ್ಲಿ ಕೊರೊನಾ ಮೂಲ ಪತ್ತೆಗೆ ಈಗಾಗಲೇ ಬ್ರಿಟನ್ ಹಾಗೂ ಅಮೆರಿಕ ಅನುಮತಿ ನೀಡಿದೆ. ಶೃಂಗಸಭೆಯ ಬಳಿಕ ಜಂಟಿ ಹೇಳಿಕೆ ನೀಡಿರುವ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್- ಅಮೆರಿಕ ಅಧ್ಯಕ್ಷ ಜೋ ಬಿಡೆನ್, ಸಾಂಕ್ರಾಮಿಕದಿಂದ ಹೊರಬರಲು ಮನುಷ್ಯರ ಪರಿಸ್ಥಿತಿ ಗಂಭೀರವಾಗಿದೆ. ಭವಿಷ್ಯಕ್ಕೆ ಸಿದ್ಧತೆ ನಡೆಸುವುದು ಸೂಕ್ತ ಎಂದು ಹೇಳಿದ್ದಾರೆ.

ಪ್ರಮುಖ ಸುದ್ದಿ :-   ದಾಖಲೆಯ 613 ದಿನಗಳ ಕಾಲ ಕೋವಿಡ್‌ ಜೊತೆ ಜೀವಿಸಿದ್ದ 72 ವರ್ಷದ ವ್ಯಕ್ತಿ ; ಸಾಯುವ ಮೊದಲು ಆತನ ದೇಹದಲ್ಲಿ ಕೊರೊನಾ ವೈರಸ್‌ 50ಕ್ಕೂ ಹೆಚ್ಚು ಬಾರಿ ರೂಪಾಂತರಗೊಂಡಿತ್ತು..!

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement