‘ಡ್ರ್ಯಾಗನ್ ಮ್ಯಾನ್’: ಚೀನಾದಲ್ಲಿ ಪತ್ತೆಯಾದ 1.40 ಲಕ್ಷ ವರ್ಷ ಹಳೆಯ ತಲೆಬುರುಡೆ ಹೊಸ ಜಾತಿ ಪ್ರತಿನಿಧಿಸುತ್ತದೆ:ವಿಜ್ಞಾನಿಗಳು

ಚೀನಾದಲ್ಲಿ ಸಂಶೋಧಕರ ಗುಂಪೊಂದು ಪುರಾತನ ತಲೆಬುರುಡೆಯನ್ನು ಕಂಡುಹಿಡಿದಿದೆ, ಅದು ಸಂಪೂರ್ಣವಾಗಿ ಹೊಸ ಜಾತಿಯ ಮಾನವನಿಗೆ ಸೇರಿದ್ದು ಎಂದು ನಂಬಲಾಗಿದೆ.
933 ರಲ್ಲಿ ಹಾರ್ಬಿನ್‌ನಲ್ಲಿ ಪತ್ತೆಯಾದ ಈ ಮಾದರಿಯನ್ನು ‘ಡ್ರ್ಯಾಗನ್ ಮ್ಯಾನ್’ ಎಂದು ಅಡ್ಡಹೆಸರು ಮಾಡಲಾಗಿದೆ ಮತ್ತು ಇದು ಇತ್ತೀಚೆಗೆ ವಿಜ್ಞಾನಿಗಳ ಗಮನಕ್ಕೆ ಬಂದಿದೆ. ಇದನ್ನು ಜಪಾನಿನ ಸೈನ್ಯದಿಂದ ರಕ್ಷಿಸಲು 85 ವರ್ಷಗಳ ಕಾಲ ಬಾವಿಯಲ್ಲಿಟ್ಟು ಮರೆಮಾಡಲಾಗಿದೆ ಎಂದು ವರದಿಯಾಗಿದೆ.
2018 ರಲ್ಲಿ ಇದನ್ನು ಅಗೆದು ಹೆಬೀ ಜಿಇಒ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಜಿ ಕಿಯಾಂಗ್‌ ಅವರಿಗೆ ಹಸ್ತಾಂತರಿಸಲಾಯಿತು.ವರದಿಗಳ ಪ್ರಕಾರ, ತಲೆಬುರುಡೆಯು 1,40,000 ವರ್ಷಗಳಿಗಿಂತಲೂ ಹಳೆಯದಾಗಿದೆ. ಈಶಾನ್ಯ ಚೀನಾದಲ್ಲಿ ಇನ್ನೂ ಸಂಪೂರ್ಣವಾಗಿ ಸಂರಕ್ಷಿಸಲ್ಪಟ್ಟಿದೆ.
ಈಗ, ತಲೆಬುರುಡೆಯ ವಿಶ್ಲೇಷಣೆಯು ನಿಯಾಂಡರ್‌ತಾಲ್‌ ಗಳಿಗಿಂತ ಮನುಷ್ಯರೊಂದಿಗೆ ಹೆಚ್ಚು ನಿಕಟ ಸಂಬಂಧ ಹೊಂದಿರುವ ಹೊಸ ಜಾತಿಯ ಪ್ರಾಚೀನ ಜನರನ್ನು ಪ್ರತಿನಿಧಿಸುತ್ತದೆ ಎಂದು ಬಹಿರಂಗಪಡಿಸಿದೆ.
ಈ ಸಂಶೋಧನೆಯು ಮಾನವ ವಿಕಾಸದ ನಮ್ಮ ಆಲೋಚನೆ ಮತ್ತು ತಿಳುವಳಿಕೆಯನ್ನು ಮೂಲಭೂತವಾಗಿ ಬದಲಾಯಿಸಬಹುದು ಎಂದು ಸಂಶೋಧಕರು ನಂಬಿದ್ದಾರೆ. ಈ ಮಾದರಿಯು ತನ್ನ 50 ವರ್ಷದ ಆಳವಾದ ಮಿದುಳಿನ ಗಂಡು ಮಾನವನದ್ದು ಎಂದು ಹೇಳಲಾಗಿದ್ದು ಮತ್ತು ಆಳವಾದ ಕಣ್ಣುಗಳು ಮತ್ತು ದಪ್ಪವಾದ ಹುಬ್ಬು ರೇಖೆಗಳಿಂದ ಕೂಡಿದೆ ಎಂದು ಅಧ್ಯಯನ ಹೇಳಿದೆ.
ಈ ಗಂಡು ತಲೆ ಬುರುಡೆ ಕಡಿಮೆ ಮತ್ತು ಚಪ್ಪಟೆಯಾದ ಕೆನ್ನೆಯ ಮೂಳೆಗಳೊಂದಿಗೆ ಅಗಲವಾದ ಮುಖವನ್ನು ಹೊಂದಿದ್ದು, ಇದು ಮಾನವ ಕುಟುಂಬ ವೃಕ್ಷದ ಅಳಿವಿನಂಚಿನಲ್ಲಿರುವ ಇತರ ಸದಸ್ಯರಿಗಿಂತ ಆಧುನಿಕ ಜನರನ್ನು ಹೋಲುತ್ತದೆ ಎಂದು ಎಎಫ್‌ಪಿ ವರದಿ ಮಾಡಿದೆ.
ಈ ಅಧ್ಯಯನವನ್ನು ಈಗ ದಿ ಇನ್ನೋವೇಶನ್ ಜರ್ನಲ್ಲಿನಲ್ಲಿ ಪ್ರಕಟಿಸಲಾಗಿದೆ.
ನ್ಯಾಚುರಲ್ ಹಿಸ್ಟರಿ ಮ್ಯೂಸಿಯಂನ ಸಹ-ಲೇಖಕ ಕ್ರಿಸ್ ಸ್ಟ್ರಿಂಗರ್ ಅವರು ನಮ್ಮ ವಿಶ್ಲೇಷಣೆಗಳಲ್ಲಿ, ಹಾರ್ಬಿನ್ ಗುಂಪು ನಿಯಾಂಡರ್ತಲ್‌ಗಳಿಗಿಂತ ಹೋಮೋ ಸೇಪಿಯನ್‌ಗಳೊಂದಿಗೆ (ಮಾನವನೊಂದಿಗೆ) ಹೆಚ್ಚು ನಿಕಟ ಸಂಬಂಧ ಹೊಂದಿದೆ – ಅಂದರೆ, ಹರ್ಬಿನ್ ನಿಯಾಂಡರ್ತಾಲ್‌ಗಳಿಗಿಂತ ಇತ್ತೀಚಿನ ಸಾಮಾನ್ಯ ಪೂರ್ವಜರನ್ನು ನಮ್ಮೊಂದಿಗೆ ಹಂಚಿಕೊಂಡಿದೆ ಎಂದು ಎಎಫ್‌ಪಿ ಹೇಳಿದ್ದಾರೆ.
ಡ್ರ್ಯಾಗನ್ ಮ್ಯಾನ್’ ಮಾನವರಿಗೆ ‘ಸಹೋದರ ಜಾತಿ ಮತ್ತು ನಿಯಾಂಡರ್ತಾಲ್‌ ಗಳಿಗಿಂತ ಆಧುನಿಕ ಮನುಷ್ಯನ ಪೂರ್ವಜರು ಎಂದು ಅವರು ಹೇಳಿದ್ದಾರೆ.
2019 ರಲ್ಲಿ, ವಿಜ್ಞಾನಿಗಳು ಗ್ರೀಕ್ ಗುಹೆಯೊಂದರಲ್ಲಿ ಮುರಿದ ತಲೆಬುರುಡೆಯನ್ನು ಕಂಡುಕೊಂಡರು ಮತ್ತು ಇದು ಆಫ್ರಿಕಾದ ಹೊರಗೆ ದೊರೆತ ಅತ್ಯಂತ ಹಳೆಯ ಆಧುನಿಕ ಮಾನವ ಪಳೆಯುಳಿಕೆ ಎಂದು ಪ್ರತಿಪಾದಿಸಿದರು. ದಕ್ಷಿಣ ಪೆಲೊಪೊನ್ನೀಸ್‌ನ ಮಣಿ ಪರ್ಯಾಯ ದ್ವೀಪದಲ್ಲಿರುವ ಎಪಿಡಿಮಾ ಗುಹೆಯಲ್ಲಿ ತಲೆಬುರುಡೆ ಕಂಡುಬಂದಿದೆ. ಭಾಗಶಃ ತಲೆಬುರುಡೆಯು ಕನಿಷ್ಠ 2,10,000 ವರ್ಷಗಳಷ್ಟು ಹಳೆಯದು ಎಂದು ಹೇಳಲಾಗಿದೆ.

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

5 / 5. ಒಟ್ಟು ವೋಟುಗಳು 1

ನಿಮ್ಮ ಕಾಮೆಂಟ್ ಬರೆಯಿರಿ