ಸಹಕಾರಿ ಸಂಸ್ಥೆಗಳ ಚುನಾವಣೆ, ಎಲ್ಲ ಜಿಲ್ಲೆಗಳಲ್ಲೂ ಗೋಶಾಲೆ ಸ್ಥಾಪನೆಗೆ ಸಂಪುಟ ಸಭೆ ಒಪ್ಪಿಗೆ

posted in: ರಾಜ್ಯ | 0

 ಬೆಂಗಳೂರು: ಸಹಕಾರ ಸಂಘಗಳು, ಸೊಸೈಟಿಗಳು, ಎಪಿಎಂಸಿಗಳ ಅಧ್ಯಕ್ಷ, ಉಪಾಧ್ಯಕ್ಷ ಮತ್ತು ಪದಾಧಿಕಾರಿಗಳ ಸ್ಥಾನಗಳಿಗೆ ಚುನಾವಣೆ ನಡೆಸಲು ಅನುಮತಿ. ಎಲ್ಲಾ ಜಿಲ್ಲೆಗಳಲ್ಲಿ ಗೋ ಶಾಲೆಗಳನ್ನು ತೆರೆಯಲು ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಗೃಹ ಮತ್ತು ಕಾನೂನು ಸಚಿವ ಬಸವರಾಜ ಬೊಮ್ಮಾಯಿ ಅವರು ಸಚಿವ ಸಂಪುಟ ಸಭೆಯ ಬಳಿಕ … Continued

ಕೌಶಲ್ಯ: ಕರ್ನಾಟಕದಲ್ಲಿ ಮುಂದಿನ 5 ವರ್ಷಗಳಲ್ಲಿ ಒಂದು ಕೋಟಿ ಉದ್ಯೋಗ ಸೃಷ್ಟಿ

ಬೆಂಗಳೂರು: ಮುಂದಿನ ಐದು ವರ್ಷಗಳಲ್ಲಿ ಒಂದು ಕೋಟಿ ಉದ್ಯೋಗ ಸೃಷ್ಟಿಸಲು ಕರ್ನಾಟಕ ಕೌಶಲ್ಯ ಮತ್ತು ಜೀವನೋಪಾಯ ಕಾರ್ಯಪಡೆ ರಚಿಸಲಾಗಿದೆ ಎಂದು ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಗುರುವಾರ ತಿಳಿಸಿದ್ದಾರೆ. ಮುಂದಿನ ಐದು ವರ್ಷಗಳಲ್ಲಿ ಒಂದು ಕೋಟಿ ಉದ್ಯೋಗಾವಕಾಶಗಳನ್ನು ಸೃಷ್ಟಿಸಲು ಕರ್ನಾಟಕ ಕೌಶಲ್ಯ ಮತ್ತು ಜೀವನೋಪಾಯ ಕಾರ್ಯಪಡೆ ರಚಿಸಲಾಗಿದೆ. ಅದು ಶೀಘ್ರದಲ್ಲೇ ತನ್ನ ವರದಿ ಸಲ್ಲಿಸುವ ನಿರೀಕ್ಷೆಯಿದೆ … Continued

ತಮಿಳುನಾಡು: ಬಾಲಕಿಯ ಪ್ರಾಣ ಉಳಿಸಲು ಹೋದ ಐವರ ದುರ್ಮರಣ

ಚೆನ್ನೈ:ದೇವಸ್ಥಾನದ ಕೊಳದಲ್ಲಿ ಮುಳುಗುತ್ತಿದ್ದ ಬಾಲಕಿಯ ರಕ್ಷಣೆಗೆ ತೆರಳಿದ್ದ ಐದು ಮಂದಿ ಮೃತಪಟ್ಟ ಘಟನೆ ತಮಿಳುನಾಡಿನ ಪುಧು ಗುಮ್ಮಿಡಿಪುಂಡಿ ಗ್ರಾಮದಲ್ಲಿ ನಡೆದಿದೆ. ಇಲ್ಲಿನ ಅಂಗಲಮ್ಮನ್‌ ದೇವಸ್ಥಾನದ ಕೊಳದಲ್ಲಿ ಈ ದುರ್ಘಟನೆ ನಡೆದಿದ್ದು, ಗ್ರಾಮವೇ ದುಃಖದಲ್ಲಿ ಮುಳುಗಿದೆ. ಮೃತರನ್ನು ನರ್ಮದಾ (12 ವರ್ಷ), ಜೀವಿತಾ (14 ವರ್ಷ ), ಅಶ್ಮಿತಾ (14 ವರ್ಷ ), ತಾಯಿ ಸುಮತಿ ( … Continued

ಸಿಬಿಐ ತನಿಖೆ, ಪಶ್ಚಿಮ ಬಂಗಾಳದ ಹೊರಗಡೆ ವಿಚಾರಣೆ:ಮತದಾನೋತ್ತರ ಹಿಂಸಾಚಾರದ ಬಗ್ಗೆ ಕೋಲ್ಕತ್ತಾ ಹೈಕೋರ್ಟಿಗೆ ಎನ್‌ಎಚ್‌ಆರ್‌ಸಿ ನೀಡಿದ ವರದಿಯಲ್ಲಿ ಶಿಫಾರಸು

ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ನಡೆದ ಮತದಾನದ ನಂತರದ ಹಿಂಸಾಚಾರದ ಬಗ್ಗೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ಸಿಬಿಐ ತನಿಖೆಗೆ ಗುರುವಾರ ಶಿಫಾರಸು ಮಾಡಿದೆ. ಕೋಲ್ಕತ್ತಾ ಹೈಕೋರ್ಟ್‌ನ ಐದು ನ್ಯಾಯಾಧೀಶರ ಪೀಠಕ್ಕೆ ನೀಡಿದ ವರದಿಯಲ್ಲಿ, ಮಾನವ ಹಕ್ಕುಗಳ ಆಯೋಗವು ಮಮತಾ ಬ್ಯಾನರ್ಜಿ-ರಾಜ್ಯ ಸರ್ಕಾರವನ್ನು ಚುನಾವಣೋತ್ತರ ಹಿಂಸಾಚಾರಕ್ಕಾಗಿ ಮಮತಾ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ. ಪಶ್ಚಿಮ ಬಂಗಾಳದಲ್ಲಿ ಹಿಂಸಾತ್ಮಕ … Continued

ಹುಬ್ಬಳ್ಳಿ-ಧಾರವಾಡ ಪಾಲಿಕೆ ಚುನಾವಣೆ ಮೀಸಲಾತಿ ಮತ್ತೆ ಹೈಕೋರ್ಟ್‌ ಅಂಗಳಕ್ಕೆ

posted in: ರಾಜ್ಯ | 0

ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಚುನಾವಣೆಗೆ ಸರಕಾರ ನಿಗದಿ ಪಡಿಸಿದ್ ಮೀಸಲಾತಿ ಮತ್ತು ಮತದಾರರ ಹಂಚಿಕೆ ಅವೈಜ್ಞಾನಿಕವಾಗಿದೆ ಎಂದು ಆರೋಪಿಸಿ ಕಾಂಗ್ರೆಸ್ ನಾಯಕರು ಹೈಕೋರ್ಟ ಧಾರವಾಡ ಪೀಠದ ಮೊರೆ ಹೋಗಿದ್ದು, ಎರಡೂವರೆ ವರ್ಷಗಳಿಂದಲೂ ಚುನಾವಣೆ ನಡೆಯದಿರುವ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಚುನಾವಣೆಗೆ ಮತ್ತಷ್ಟು ವಿಳಂಬಗೊಳ್ಳುವ ಸಾಧ್ಯತೆ ಇದೆ. ಎರಡೂವರೆ ವರ್ಷಗಳಿಂದ ಮಹಾನಗರ ಪಾಲಿಕೆಗೆ ಚುನಾಯಿತ ಪ್ರತಿನಿಧಿಗಳೇ … Continued

ವೇಟರ್‌ ಆರ್ಡರ್‌ ತರುವುದು ಲೇಟ್‌ ಮಾಡಿದ್ದಕ್ಕೆ ಪ್ರಶ್ನಿಸಿದ್ದೆ, ಇಂದ್ರಜೀತ್‌ ಲಂಕೇಶ್‌ ಅವರು ಇನ್ವೆಸ್ಟಿಗೇಟರಾ: ನಟ ದರ್ಶನ್‌

ಬೆಂಗಳೂರು: ಹೋಟೆಲ್‌ನಲ್ಲಿ ವೇಟರ್‌ ಮೇಲೆ ನಟ ದರ್ಶನ್‌ ಹಲ್ಲೆ ನಡೆಸಿದ್ದರು ಎಂಬ ಇಂದ್ರಜಿತ್‌ ಲಂಕೇಶ್‌ ಅವರ ಆರೋಪವನ್ನು ದರ್ಶನ್‌ ತಳ್ಳಿಹಾಕಿದ್ದಾರೆ. ಈ ಕುರಿತು ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ನಟ ದರ್ಶನ್‌, ಆರ್ಡರ್‌ ತರುವುದನ್ನು ತಡ ಮಾಡಿದ್ದಕ್ಕೆ ಸಿಟ್ಟು ಮಾಡಿದ್ದೇನೆ. ಯಾಕಪ್ಪಾ ಲೇಟು, ಬೇಗ ಬಾ ಎಂದು ಕೇಳಿದ್ದೇನೆ ಅಷ್ಟೆ. ಅದು ಮಾತುಕತೆಯಲ್ಲೇ ಮುಗಿದಿದೆ. ನಾನು … Continued

ಮಹಾತ್ಮಾ ಗಾಂಧಿ ಮೌನಗೊಳಿಸಲು ಬ್ರಿಟಿಷರು ಬಳಸಿದ ದೇಶದ್ರೋಹ ಕಾನೂನು ಇನ್ನೂ ಅಗತ್ಯವಿದೆಯೇ: ಕೇಂದ್ರ ಸರ್ಕಾರಕ್ಕೆ ಸುಪ್ರೀಂಕೋರ್ಟ್ ಪ್ರಶ್ನೆ

ನವದೆಹಲಿ: ವಸಾಹತುಶಾಹಿ-ಯುಗದ ದೇಶದ್ರೋಹ ಕಾನೂನಿನ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಗುರುವಾರ ಕೇಂದ್ರಕ್ಕೆ ನೋಟಿಸ್ ನೀಡಿದೆ. ಮಹಾತ್ಮಾ ಗಾಂಧಿ ಅವರನ್ನು ಮೌನಗೊಳಿಸಲು ಬ್ರಿಟಿಷರು ಬಳಸಿದ ಕಾನೂನು ಇನ್ನೂ 75 ವರ್ಷಗಳ ಸ್ವಾತಂತ್ರ್ಯದ ನಂತರವೂ ಅಗತ್ಯವಿದೆಯೇ” ಎಂದು ಭಾರತದ ಮುಖ್ಯ ನ್ಯಾಯಮೂರ್ತಿ ಕೇಳಿದರು, ಏಕೆಂದರೆ ದೇಶದ್ರೋಹ ಕಾನೂನಿನ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಹೊಸ … Continued

ವರದಕ್ಷಿಣೆ ಪಿಡುಗು ವಿರುದ್ಧ ಜಾಗೃತಿಗೆ ಕೇರಳ ರಾಜ್ಯಪಾಲರಿಂದ ಉಪವಾಸ

ತಿರುವನಂತಪುರ: ವರದಕ್ಷಿಣೆ ಪಿಡುಗು ಮತ್ತು ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯದ ವಿರುದ್ಧ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಉದ್ದೇಶದಿಂದಲೇ ಕೇರಳ ರಾಜ್ಯದ ರಾಜ್ಯಪಾಲರಾಗಿರುವ ಆರಿಫ್ ಮೊಹಮ್ಮದ್ ಖಾನ್ ಅವರು ತಮ್ಮ ಇಳಿ ವಯಸ್ಸಿನಲ್ಲಿಯೂ ತಿರುವನಂತಪುರದ ತಮ್ಮ ಅಧಿಕೃತ ನಿವಾಸದಲ್ಲಿ ಒಂದು ದಿನ ಉಪವಾಸ ನಡೆಸುವ ಮೂಲಕ ಗಮನ ಸೆಳೆದಿದ್ದಾರೆ. ರಾಜ್ಯದಲ್ಲಿ ವರದಕ್ಷಿಣೆ ಪಿಡುಗಿಗೆ ಹಲವಾರು ಮಂದಿ ಮಹಿಳೆಯರು ತುತ್ತಾಗಿರುವ … Continued

ಜುಲೈ 17ರಂದು ಚೆನ್ನಾಭೈರಾದೇವಿ ಕಾದಂಬರಿ ಎರಡನೇ ಆವೃತ್ತಿ ಬಿಡುಗಡೆ

ಸಿದ್ದಾಪುರ: ಸಿದ್ದಾಪುರದ ಪ್ರಯೋಗ ಸ್ವಯಂಸೇವಾ ಸಂಸ್ಥೆ ಹಾಗೂ ಸಂಸ್ಕೃತಿ ಸಂಪದದ ಸಹಯೋಗದಲ್ಲಿ ಡಾ. ಗಜಾನನ ಶರ್ಮಾ ಅವರ ಚೆನ್ನಾಭೈರಾದೇವಿ ಕಾದಂಬರಿ ಎರಡನೇ ಆವೃತ್ತಿ ಬಿಡುಗಡೆ ಸಮಾರಂಭ ರಾಘವೇಂದ್ರ ಮಠದ ಸಭಾಭವನದಲ್ಲಿ ಜುಲೈ 17ರಂದು ಮಾಧ್ಯಾಹ್ನ 3 ಗಂಟೆಗೆ ನಡೆಯಲಿದೆ. ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಪುಸ್ತಕ ಬಿಡುಗಡೆ ಮಾಡುವರು. ಚಿಂತಕ ಹಾಗೂ ಪರಿಸರ ತಜ್ಷ ಪ್ರೊ.ಬಿ.ಎಂ.ಕುಮಾರಸ್ವಾಮಿ … Continued

ಇಂದ್ರಜಿತ್‌ ಲಂಕೇಶ್‌ ದೂರು: ತನಿಖೆಗೆ ಮೈಸೂರು ಪೊಲೀಸ್‌ ಆಯುಕ್ತರಿಗೆ ಗೃಹ ಸಚಿವರ ಸೂಚನೆ

ಬೆಂಗಳೂರು: ನಿರ್ದೇಶಕ ಇಂದ್ರಜಿತ್‌ ಲಂಕೇಶ್‌ ನೀಡಿದ ದೂರನ್ನು ಆಧರಿಸಿ ತನಿಖೆ ಸೂಚಿಸಿದ್ದು, ಮೈಸೂರು ಪೊಲೀಸ್‌ ಆಯುಕ್ತರಿಗೆ ಈ ಕುರಿತು ಮಾಹಿತಿ ನೀಡಿದ್ದೇನೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂದ್ರಜಿತ್ ಲಂಕೇಶ್ ನನಗೆ ಮನವಿ ಪತ್ರ ನೀಡಿದ್ದಾರೆ. ಮನವಿ ಪತ್ರದ ಆಧಾರದ ಮೇಲೆ ತನಿಖೆ ಮಾಡುವಂತೆ ಮೈಸೂರು ಪೊಲೀಸ್ … Continued