ಪ್ರಿಯಕರನ ಜೊತೆ ಸೇರಿ ಸೋದರನ ಕೊಲೆ ಪ್ರಕರಣ: ಕೋರ್ಟಿಗೆ ಸಾವಿರ ಪುಟಗಳ ಚಾರ್ಜ್ ಶೀಟ್ ಸಲ್ಲಿಕೆ

posted in: ರಾಜ್ಯ | 0

ಹುಬ್ಬಳ್ಳಿ: ವಾಣಿಜ್ಯ ನಗರಿ ಹುಬ್ಬಳ್ಳಿಯನ್ನೇ ಬೆಚ್ಚಿ ಬೀಳಿಸಿದ್ದ ರುಂಡ ಮುಂಡ ಬೇರ್ಡಿಸಿ ಬೇರೆಬೇರೆ ಜಾಗದಲ್ಲಿ ಎಸೆದ ಪ್ರಕರಣದಲ್ಲಿ ನಟಿ ಶನಯಾ ಕಾಟವೇ ಸೇರಿದಂತೆ ಹಲವು ಆರೋಪಿಗಳ ವಿರುದ್ಧ ನ್ಯಾಯಾಲಯಕ್ಕೆ ಪೊಲೀಸರು ಸಾವಿರ ಪುಟಗಳ ಚಾರ್ಜ್ ಶೀಟ್ ಸಲ್ಲಿಕೆ ಮಾಡಿದ್ದಾರೆ.
ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆ ಪೊಲೀಸರು ನ್ಯಾಯಾಲಯಕ್ಕೆ ಸಾವಿರ ಪುಟಗಳ ಚಾರ್ಜ್ ಶೀಟ್ ಸಲ್ಲಿಸಿದ್ದು, ಕೊಲೆಯಾದ ರಾಕೇಶ ಕಾಟವೆ ಡಿಎನ್‍ಎ ವರದಿಯ ನಿರೀಕ್ಷೆಯಲ್ಲಿದ್ದಾರೆ.
ನಟಿ ಶನಾಯ ಕಾಟವೆ ಸಹೋದರ ರಾಕೇಶ್ ಕಾಟವೆಯನ್ನ ಕಳೆದ ಏಪ್ರಿಲ್ 9ರಂದು ಹತ್ಯೆ ಮಾಡಿ ರುಂಡ ಮುಂಡ ಬೇರ್ಪಡಿಸಿ ದೇಹದ ಭಾಗಗಳನ್ನ ಬೇರೆ ಪ್ರದೇಶಗಳಲ್ಲಿ ಎಸೆದು ಹೋದ ಬಗ್ಗೆ ಹುಬ್ಬಳ್ಳಿಯ ಗ್ರಾಮೀಣ ಠಾಣೆ ಹಾಗೂ ಕೇಶ್ವಾಪುರ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣಗಳು ದಾಖಲಾಗಿದ್ದವು.
ಈ ಹತ್ಯೆಗೆ ಆಸ್ತಿಯೂ ಒಂದು ಪ್ರಮುಖ ಕಾರಣ ಎನ್ನಲಾಗಿದೆ. ಇದಕ್ಕೆ ಅಡ್ಡಿಯಾಗಿದ್ದ ರಾಕೇಶನನ್ನು ಕೊಲೆ ಮಾಡಿದ್ದ. ಶನಾಯ ಕಾಟವೆ ಪ್ರಿಯಕರ ನಿಯಾಜ್ ಕಾಟೀಗಾರ ಹಾಗೂ ಸಹಚರರು ಏಪ್ರಿಲ್ 9ರಂದು ರಾಕೇಶ್ ಕಾಟವೆ ಕೊಲೆ ಮಾಡಿ ರುಂಡವನ್ನು ಹುಬ್ಬಳ್ಳಿ ತಾಲೂಕಿನ ದೇವರಗುಡಿಹಾಳ ಗ್ರಾಮದ ಅರಣ್ಯ ಪ್ರದೇಶದಲ್ಲಿ ಹಾಗೂ ಮುಂಡವನ್ನು ಕೇಶ್ವಾಪುರದ ನಿರ್ಜನ ಪ್ರದೇಶದಲ್ಲಿ ಎಸೆದಿದ್ದರು.
ಏಪ್ರಿಲ್ 12ರಂದು ಹುಬ್ಬಳ್ಳಿಯ ಪೊಲೀಸರಿಗೆ ನಿರ್ಜನ ಪ್ರದೇಶದಲ್ಲಿ ರುಂಡ ಮುಂಡ ಪತ್ತೆಯಾಗಿತ್ತು. ಈ ಪ್ರಕರಣದ ಬೆನ್ನು ಹತ್ತಿದ್ದ ಹುಬ್ಬಳ್ಳಿ ಧಾರವಾಡದ ಪೊಲೀಸರು ಏಪ್ರಿಲ್ 18ರಂದು ಗ್ರಾಮೀಣ ಠಾಣೆ ಪೊಲೀಸರು ಪ್ರಮುಖ ಆರೋಪಿ ಬೆಂಗೇರಿಯ ನಿಯಾಜ್ ಸೈಫುದ್ದೀನ್ ಕಾಟೇಗಾರ, ತೌಸೀಫ್ ಚನ್ನಾಪುರ, ಅಲ್ತಾಫ ಮುಲ್ಲಾ ಹಾಗೂ ಅಮನ್ ಗಿರಣಿವಾಲೆ ಎಂಬುವವರನ್ನು ಬಂಧಿಸಿದ್ದರು. ಬಳಿಕ ಮಲೀಕಜಾನ್, ಫಿರೋಜ್ ಕಾಟೀಗಾರ, ಸೈಫುದ್ದೀನ್ ಕಾಟೀಗಾರ ಹಾಗೂ ಶನಾಯ ಕಾಟವೆ ಬಂಧಿಸಲಾಗಿತ್ತು.
ಮಾಡೆಲ್ ಶನಯಾ ಕಾಟವೇಯನ್ನ ಆರೋಪಿ ನಿಯಾಜ್ ಪ್ರೀತಿಸುತ್ತಿದ್ದುದಕ್ಕೆ ರಾಕೇಶ್ ವಿರೋಧ ವ್ಯಕ್ತಪಡಿಸಿದ್ದ. ಅಲ್ಲದೇ ನಟಿಯ ಆಸ್ತಿಯ ಮೇಲೆ ಕಣ್ಣು ಇಟ್ಟಿದ್ದ ಆರೋಪಿ ನಿಯಾಜ್ ಹಾಗೂ ಸಹಚರರು , ರಾಕೇಶನನ್ನ ಕೊಲೆ ಮಾಡಿ ರುಂಡ ಮುಂಡ ಬೇರ್ಪಡಿಸಿ ಬೇರೆ ಬೇರೆ ಸ್ಥಳಗಳಲ್ಲಿ ಎಸೆದು ಸಾಕ್ಷಿ ನಾಶಕ್ಕೆ ಯತ್ನಿಸಿದ್ದರ. ಕಾರಲ್ಲಿ ಶವ ಇಟ್ಟುಕೊಂಡು ವಿವಿಧೆಡೆ ಓಡಾಡಿದ್ದರು.
ಹುಬ್ಬಳ್ಳಿ ಗ್ರಾಮೀಣ ಠಾಣೆ ಇನ್‍ಸ್ಪೆಕ್ಟರ್ ರಮೇಶ ಗೋಕಾಕ್ ನೇತೃತ್ವದ ತಂಡ ಪ್ರಕರಣದ ತನಿಖೆ ನಡೆಸಿ 2ನೇ ಜೆಎಂಎಫ್‍ಸಿ ನ್ಯಾಯಾಲಯಕ್ಕೆ ಸಾವಿರ ಪುಟಗಳ ಚಾರ್ಜ್ ಶೀಟ್ ಸಲ್ಲಿಕೆ ಮಾಡಿದೆ. ಕೊಲೆಯಾದ ರಾಕೇಶ್‍ನ ಡಿಎನ್‍ಎ ಪರೀಕ್ಷೆಗಾಗಿ ರಕ್ತದ ಮಾದರಿ ಸಂಗ್ರಹಿಸಿ ಬೆಂಗಳೂರು ಮತ್ತು ಬೆಳಗಾವಿಯ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿದ ವರದಿ ಬರಬೇಕಿದೆ. ಕೊಲೆಯಾದ ರಾಕೇಶ್ ಕಾಟವೆಯನ್ನು ಶನಾಯ್ ಕಾಟವೆಯವರ ತಾಯಿ ದತ್ತು ಪಡೆದಿದ್ದರು ಎನ್ನಲಾಗಿದೆ.
ಈ ಕೊಲೆ ಪ್ರಕರಣದಲ್ಲಿ ಈಗಾಗಲೇ ನಟಿ ಶನಯಾ ಕಾಟವೆ ಹಾಗೂ ಕೆಲ ಅರೋಪಿಗಳಿಗೆ ಜಾಮೀನು ದೊರೆತಿದೆ.

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

0 / 5. ಒಟ್ಟು ವೋಟುಗಳು 0

ನಿಮ್ಮ ಕಾಮೆಂಟ್ ಬರೆಯಿರಿ