ಸಿಎಂ ಬದಲಾವಣೆ ವಿಚಾರ ಶೀಘ್ರ ಸುಖಾಂತ್ಯ : ಕೋಡಿಮಠದ ಶ್ರೀ ಭವಿಷ್ಯ

posted in: ರಾಜ್ಯ | 0

ಶಿರಸಿ: ರಾಜ್ಯದಲ್ಲಿ ಸದ್ಯ ಎದ್ದಿರುವ ರಾಜಕೀಯ ಡೊಂಬರಾಟ, ಮುಖ್ಯಮಂತ್ರಿ ಬದಲಾವಣೆ ವಿಚಾರ ಅತಿ ಶೀಘ್ರದಲ್ಲಿಯೇ ಸುಖಾಂತ್ಯ ಕಾಣಲಿದೆ ಎಂದು ಕೋಡಿಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ. ಉತ್ತರ ಕನ್ನಡ ಜಿಲ್ಲೆ ಶಿರಸಿಯಲ್ಲಿ ರಾಜ್ಯ ರಾಜಕೀಯದ ಬಗ್ಗೆ ಭವಿಷ್ಯ ಹೇಳಿರುವ ಸ್ವಾಮೀಜಿ ರಾಜ್ಯದಲ್ಲಿ ಎದ್ದಿರುವ ರಾಜಕೀಯ ವಿಪ್ಲವ ಸುಖಾಂತ್ಯ ಕಾಣಲಿದೆ ಎಂದು ಪುನರುಚ್ಚರಿಸಿದ್ದಾರೆ. ಬೇಟೆಗಾರನೊಬ್ಬನಿಂದ … Continued

ಶರಣ ಸಾಹಿತಿ-ಚಿಂತಕ ಪ್ರೊ. ಜಿ. ಬಿ.ವೀರಭದ್ರಯ್ಯನವರ

(ಪ್ರೊ. ಜಿ. ಬಿ. ವೀರಭದ್ರಯ್ಯನವರ ಪ್ರಥಮ ಸ್ಮರಣೆ ಮತ್ತು ಸಂಸ್ಮರಣಾ ಗ್ರಂಥ ಲೋಕಾರ್ಪಣೆ ಕಾರ್ಯಕ್ರಮ ಲಿಂಗರಾಜ ನಗರದ ಸಮುದಾಯ ಭವನದಲ್ಲಿ ದಿ. ೨೨.೦೭.೨೦೨೧ ರಂದು ಮುಂಜಾನೆ ೧೦.೩೦ ಗಂಟೆಗೆ ನಡೆಯಲಿದೆ., ಆ ನಿಮಿತ್ತ ಲೇಖನ) ಹುಬ್ಬಳ್ಳಿ ತಾಲ್ಲೂಕಿನ ಹಳ್ಯಾಳ ಗ್ರಾಮದ ಪ್ರೊ. ಗುರುಶಾಂತಯ್ಯ ಬಸಯ್ಯ ವೀರಭದ್ರಯ್ಯನವರ ಅವರು ವಿದ್ಯಾರ್ಥಿಗಳಿಗೆಲ್ಲ ಶರಣ ಸಾಹಿತಿ ಪ್ರೊ. ವೀರಭದ್ರಯ್ಯನವರ ಎಂದೇ … Continued

ಭಾರತದಲ್ಲಿ ಕೋವಿಡ್ ನಿಂದ ಪಾಲಕರನ್ನು ಕಳೆದುಕೊಂಡ ೧.೯೦ ಲಕ್ಷ ಮಕ್ಕಳು..!

ನವದೆಹಲಿ: ಕೊರೊನಾ ಸಾಂಕ್ರಾಮಿಕವು ಕೇವಲ ಉದ್ಯೋಗ, ನೆಮ್ಮದಿ, ಆರೋಗ್ಯವನ್ನು ಮಾತ್ರ ಕಸಿದುಕೊಂಡಿಲ್ಲ ಲಕ್ಷಾಂತರ ಮಕ್ಕಳ ಭವಿಷ್ಯವನ್ನೇ ಕಿತ್ತುಕೊಂಡಿದೆ. ಕೊರೊನಾ ಸೋಂಕಿನಿಂದ ಜೀವತೆತ್ತ ಪಾಲಕರು ತಮ್ಮ ಮಕ್ಕಳನ್ನು ಅನಾಥರನ್ನಾಗಿಸಿದ್ದಾರೆ. ತಂದೆ, ತಾಯಿಯ ಆಶ್ರಯ ಪಡೆಯಬೇಕಿದ್ದ ಮಕ್ಕಳು ಸೋಂಕಿನಿಂದಾಗಿ ಪಾಲಕರನ್ನು ಕಳೆದುಕೊಂಡು ಕೆಲವರು ಅನಾಥರಾದರೆ, ಬಹುತೇಕರು ತಂದೆ ಅಥವಾ ತಾಯಿ ಪ್ರೀತಿಯಿಂದ ವಂಚಿತರಾಗಿದ್ದಾರೆ. ಕೊರೊನಾ ಸೋಂಕು ಆರಂಭವಾದ ೧೪ … Continued

ತನ್ನ ನೌಕರರಿಗೆ ಮರ್ಸಿಡಿಸ್ ಬೆಂಜ್ ಕಾರ್‌’ ಗಿಫ್ಟ್ ನೀಡಲು ಮುಂದಾದ ಐಟಿ ಕಂಪನಿ…!

ನವದೆಹಲಿ : ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಕಂಪನಿಗಳು ತನ್ನ ಉದ್ಯೋಗಿಗಳನ್ನ ಉಳಿಸಿಕೊಳ್ಳಲು ಏನೆಲ್ಲ ಕಸರತ್ತು ಮಾಡುತ್ತವೆ. ಕೋವಿಡ್‌ ಸಾಂಕ್ರಾಮಿಕದ ಈ ಸಂದರ್ಭದಲ್ಲಿ ದೇಶದ ದೊಡ್ಡ ಐಟಿ ಕಂಪೆನಿಗಳಲ್ಲಿ ಒಂದಾದ ಎಚ್‌ಸಿಎಲ್ ಟೆಕ್ ತನ್ನ ಪ್ರತಿಭಾವಂತ ನೌಕರರಿಗೆ ‘ಮರ್ಸಿಡಿಸ್ ಬೆಂಜ್ ಕಾರು’ಗಳನ್ನು ಗಿಫ್ಟ್ ಆಗಿ ನೀಡಲು ಯೋಜಿಸುತ್ತಿದೆ ಎಂದು ವರದಿಯೊಂದು ತಿಳಿಸಿದೆ. ಎಚ್‌ಸಿಎಲ್ ಟೆಕ್ನಾಲಜಿಸ್ ಮುಖ್ಯ ಮಾನವ … Continued

ನಾಯಕತ್ವ ಬದಲಾವಣೆ ಊಹಾಪೋಹ, ಇದನ್ನು ನಾನು ನಂಬುವುದಿಲ್ಲ:ಸದಾನಂದ ಗೌಡ

ಬೆಂಗಳೂರು:ಕರ್ನಾಟಕದಲ್ಲಿ ಅಭಿವೃದ್ಧಿ ಚಟುವಟಿಕೆಗಳು ಮತ್ತು ಕೊರೋನಾ ನಿರ್ವಹಣೆ ಕುರಿತು ಬಿಜೆಪಿ ಹೈಕಮಾಂಡ್ ಸಂತಸಗೊಂಡಿರುವುದರಿಂದ ಕರ್ನಾಟಕದಲ್ಲಿ ನಾಯಕತ್ವ ಬದಲಾವಣೆಗೆ ಯಾವುದೇ ಅವಕಾಶವಿಲ್ಲ ಎಂದು ಕೇಂದ್ರದ ಮಾಜಿ ಸಚಿವ ಡಿ.ವಿ. ಸದಾನಂದ ಗೌಡ ಹೇಳಿದ್ದಾರೆ. ಮುಖ್ಯಮಂತ್ರಿ ಬಿ. ಎಸ್. ಯಡಿಯುರಪ್ಪ ಅವರ ಸ್ಥಾನವು ಅಡಕತ್ತರಿಯಲ್ಲಿ ಸಿಲುಕಿವೆ ಎಂಬ ಊಹಾಪೋಹಗಳ ಮಧ್ಯೆ ಬೆಂಗಳೂರು ಉತ್ತರದ ಬಿಜೆಪಿ ಸಂಸದ ಸದಾನಂದ ಗೌಡ, … Continued

ಸಿಬಿಎಸ್‌ಇ 12ನೇ ತರಗತಿ ಫಲಿತಾಂಶ ಅಂತಿಮಗೊಳಿಸುವ ದಿನಾಂಕ ವಿಸ್ತರಣೆ

ನವದೆಹಲಿ : ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ (ಸಿಬಿಎಸ್ ಇ) 12ನೇ ತರಗತಿ ಫಲಿತಾಂಶವನ್ನು ಜುಲೈ.25ರಂದು ಸಂಜೆ 5ರಂದು ಪ್ರಕಟಿಸಲಾಗುತ್ತದೆ ಎಂದು ತಿಳಿಸಿದೆ. ಈ ಕುರಿತು ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿಯು, ಮಾಹಿತಿ ಬಿಡುಗಡೆ ಮಾಡಿದ್ದು, 12ನೇ ತರಗತಿ ಫಲಿತಾಂಶಗಳನ್ನು ಅಂತಿಮಗೊಳಿಸುವ ಕೊನೆಯ ದಿನಾಂಕವನ್ನು ವಿಸ್ತರಿಸಿದೆ. 12ನೇ ತರಗತಿಯ ಫಲಿತಾಂಶಗಳನ್ನು ಅಂತಿಮಗೊಳಿಸಲು ಕೊನೆಯ ದಿನಾಂಕ ಜುಲೈ … Continued

ಶ್ಯಾಮರಾವ್ ದತ್ತಿ ಪ್ರಶಸ್ತಿ ಪತ್ರಕರ್ತ ವಿಠ್ಠಲದಾಸ ಕಾಮತರ ೩೫ ವರ್ಷಗಳ ಪರಿಶ್ರಮಕ್ಕೆ ಸಂದ ಗೌರವ: ಜಗದೀಶ ನಾಯಕ

ಅಂಕೋಲಾ : ಹಿರಿಯ ಪತ್ರಕರ್ತ ವಿಠ್ಠಲದಾಸ ಕಾಮತ ಅವರಿಗೆ ಕೆ. ಶ್ಯಾಮರಾವ್ ದತ್ತಿ ಪ್ರಶಸ್ತಿ ಸಿಕ್ಕಿರುವುದು ಅಂಕೋಲೆ ಹೆಮ್ಮೆಗೆ ಕಾರಣವಾಗಿದೆ. ಕಳೆದ ೩೫ ವರ್ಷಗಳಿಂದ ಪತ್ರಕರ್ತರಾಗಿ ಸೇವೆ ಸಲ್ಲಿಸುವುದರ ಜೊತೆಗೆ ವಿವಿಧ ಸಂಘ-ಸಂಸ್ಥೆ ಮತ್ತು ಮಾನವೀಯ ಮೌಲ್ಯಗಳನ್ನು ಹೊಂದಿರುವ ಇವರಿಗೆ ಇನ್ನಷ್ಟು ಪ್ರಶಸ್ತಿಗಳು ದೊರೆಯುವಂತಾಗಲಿ ಎಂದು ಕನ್ನಡ ಚಂದ್ರಮದ ಅಧ್ಯಕ್ಷ ಜಗದೀಶ ಜಿ. ನಾಯಕ ಹೊಸ್ಕೇರಿ … Continued

ಯಡಿಯೂರಪ್ಪ ಭೇಟಿ ಮಾಡಿದ ಸಿದ್ಧಗಂಗಾ ಶ್ರೀಗಳು: ಸಿಎಂ ಬದಲಾವಣೆ ಬೇಡ ಎಂದು ಬಿಜೆಪಿ ಹೈಕಮಾಂಡಿಗೆ ಆಗ್ರಹ

ಬೆಂಗಳೂರು: ಮುಖ್ಯಮಂತ್ರಿ ಸ್ಥಾನದಿಂದ ಯಡಿಯೂರಪ್ಪ ಅವರನ್ನ ಕೆಳಗಿಳಿಸುತ್ತಾರೆ ಎಂದು ಸುದ್ದಿ ಹರಡಿದ ಬೆನ್ನಲ್ಲೇ ಮಠಾಧೀಶರೆಲ್ಲ ಅವರ ಬೆಂಬಲಕ್ಕೆ ನಿಂತಿದ್ದಾರೆ. ಈಗಾಗಲೇ ಹಲವು ಮಠಾಧೀಶರು ಬಹಿರಂಗವಾಗಿಯೇ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಬೆಂಬಲಕ್ಕೆ ನಿಂತಿದ್ದಾರೆ. ಬುಧವಾರ ತುಮಕೂರಿನ ಸಿದ್ಧಗಂಗಾ ಮಠಾಧೀಶರು ಮುಖ್ಯಮಂತ್ರಿ ನಿವಾಸಕ್ಕೆ ತೆರಳಿ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿಯಾಗಿ ಸುದೀರ್ಘ ಚರ್ಚೆ ನಡೆಸಿದರು. ಈ ಮೂಲಕ ಯಡಿಯೂರಪ್ಪ ಮುಖ್ಯಮಂತ್ರಿಯಾಗಿ … Continued

ಸಿಎಂ ಏರ್ಪಡಿಸಿದ್ದ ಶಾಸಕರ ಭೋಜನ ಕೂಟವೂ ದಿಢೀರ್ ಮುಂದೂಡಿಕೆ..!

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ನಾಯಕತ್ವ ಬದಲಾವಣೆಯಾಗಲಿದೆ ಎಂಬ ವದಂತಿ ಕೇಳಿ ಬರುತ್ತಿರುವಾಗಲೇ ಆಡಳಿತಾರೂಢ ಬಿಜೆಪಿಯಲ್ಲಿ ಕ್ಷಣಕ್ಕೊಂದು ಬೆಳವಣಿಗೆಗಳು ನಡೆಯುತ್ತಿವೆ. ಜುಲೈ 26ರಂದು ಸರ್ಕಾರಕ್ಕೆ ಎರಡು ವರ್ಷ ಪೂರೈಸುತ್ತಿರುವ ಹಿನ್ನಲೆಯಲ್ಲಿ ಭಾನುವಾರ ಸಂಜೆ ನಗರದ ಖಾಸಗಿ ಹೋಟೆಲ್‍ನಲ್ಲಿ ಸಚಿವರು, ಶಾಸಕರು , ವಿಧಾನಪರಿಷತ್ ಸದಸ್ಯರು ಹಾಗೂ ಅಧಿಕಾರಿಗಳ ವರ್ಗಕ್ಕೆ ಏರ್ಪಡಿಸಿದ್ದ ಭೋಜನ ಕೂಟವನ್ನು ದಿಢೀರನೆ ರದ್ದುಗೊಳಿಸಲಾಗಿದೆ. … Continued

ದೇಶದಲ್ಲಿ ಹಕ್ಕಿಜ್ವರದ ಸಾವಿನ ಮೊದಲ ಪ್ರಕರಣ ವರದಿ: ಹೆಚ್‌5ಎನ್‌1 ವೈರಸ್ಸಿಗೆ 11 ವರ್ಷದ ಬಾಲಕ ಸಾವು

ನವದೆಹಲಿ: ಕೊರೋನಾ 2ನೇ ಅಲೆಯಿಂದ ಈಗಷ್ಟೇ ದೇಶದ ಜನತೆ ಸುಧಾರಿಸಿಕೊಳ್ಳುತ್ತಿದ್ದು, ಈಗ ಹಕ್ಕಿ ಜ್ವರಕ್ಕೆ ದೇಶದಲ್ಲಿ ಮೊದಲ ಸಾವು ಸಂಭವಿಸಿದೆ. ದೆಹಲಿಯ ಏಮ್ಸ್​ನಲ್ಲಿ ಹಕ್ಕಿ ಜ್ವರಕ್ಕೆ ಚಿಕಿತ್ಸೆ ಪಡೆಯುತ್ತಿದ್ದ 11 ವರ್ಷದ ಬಾಲಕನೊಬ್ಬ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾನೆ. ಇದು ಈ ವರ್ಷ ಹಕ್ಕಿ ಜ್ವರದಿಂದ ಮೃತಪಟ್ಟ ಮೊದಲ ಪ್ರಕರಣವಾಗಿದೆ. ಏಮ್ಸ್​ನ ಮಕ್ಕಳ ವಿಭಾಗದಲ್ಲಿ ದಾಖಲಾಗಿದ್ದ ಬಾಲಕನಿಗೆ … Continued