ಭಾರಿ ಮಳೆಗೆ ಉಕ್ಕಿದ ಅಘನಾಶಿನಿ: ಗ್ರಾಮಗಳೇ ಜಲಾವೃತ, ಮನೆಗಳಿಗೆ ನುಗ್ಗಿದ ನೀರು, ಮಣ್ಣು ಕುಸಿದು ಸಾವು, ರಸ್ತೆ ಸಂಪರ್ಕ ಕಡಿತ, ಜನರ ಸ್ಥಳಾಂತರ

ಕುಮಟಾ/ಸಿದ್ದಾಪುರ; ಘಟ್ಟದ ಪ್ರದೇಶದಲ್ಲಿ ಸುರಿಯುತ್ತಿರುವ ಮಳೆಯಿಂದ ಕರಾವಳಿಯಲ್ಲಿ ಪ್ರವಾಹದ ವೇಗ ಹಾಗೂ ಭೀಕರತೆ ಹೆಚ್ಚಾಗಿದೆ. ಸಿದ್ದಾಪುರ ತಾಲೂಕಿನ ಹಾರ್ಸಿಕಟ್ಟಾ ಸಮೀಪ ಹೊಸಗದ್ದೆಯಲ್ಲಿ ಧರೆ ಕುಸಿದು ಮಣ್ಣಲ್ಲಿ ಸಿಲುಕಿ ವ್ಯಕ್ತಿಯೊಬ್ಬ ಮೃತಪಟ್ಟಿದ್ದಾನೆ. ಮೃತನನ್ನು ದ್ಯಾವ ರಾಮ ನಾಯ್ಕ(65) ಎಂದು ಗುರುತಿಸಲಾಗಿದೆ.
ಸಿದ್ದಾಪುರ, ಶಿರಸಿ ಹಾಗೂ ಕುಮಟಾ ತಾಲೂಕಿನಲ್ಲಿ ಸುರಿಯುತ್ತರುವ ಬಾರಿ ಮಳೆಯಿಂದಾಗಿ ಅಘನಾಶಿನಿ ನದಿಯಲ್ಲಿ ನೀರು ಅಪಾಯದ ಮಟ್ಟಕ್ಕಿಂತ ಮೇಲೆ ಹರಿಯುತ್ತಿದ್ದು ಅನೇಕ ಮನೆಗಳಿಗೆ ನೀರು ನುಗ್ಗಿದೆ. ಅನೇಕ ಪ್ರದೇಶಗಳು ಜಲಾವೃತವಾಗಿ ಸಂಪರ್ಕ ಕಡಿತಗೊಂಡಿವೆ.
ಇದೇರೀತಿ ಮಳೆ ಮುಂದುವರಿದರೆ ಪ್ರವಾಹ ಇನ್ನೂ ಹೆಚ್ಚಾಗಲಿದೆ. ಈಗಾಗಲೇ ಅಘನಾಶಿನಿ ಪ್ರವಾಹದಿಂದ ಜನರು ಜೀವರಕ್ಷಣೆ ಮತ್ತು ಜಾನುವಾರುಗಳ ರಕ್ಷಣೆಗಾಗಿ ಹರಸಾಹಸ ಮಾಡುತ್ತಿದ್ದಾರೆ.
ಕುಮಟಾ ತಾಲೂಕಿನ ಅನೇಕ ಕಡೆಯಲ್ಲಿ ನೆಮ್ಮದಿ ಕೇಂದ್ರ ತೆರೆಯಲಾಗಿದೆ.ಕುಮಟಾ ತಾಲೂಕಿನ ಹೆಗಡೆ, ದಿವಗಿ, ಹಣ್ಣೇಮಠ. ಮದ್ಗುಣಿ, ಮೊಸಳೆ ಸಾಲು ಮೊದಲಾದ ಗ್ರಾಮಗಳಲ್ಲಿ ನದಿ ನೀರು ಮನೆಗೆ ನೀರು ನುಗ್ಗಿದೆ.
ಅಘನಾಶನಿ ನದಿ,ಚಂಡಿಕಾ ಹೊಳೆ, ಬಡಗಣಿ ಹೊಳೆಗಳು ತುಂಬಿ ಹರಿಯುತ್ತಿದೆ.ಕೇಲವು ಪ್ರದೇಶದಲ್ಲಿ ದೋಣಿಯನ್ನು ಬಳಸಿ ಜನರನ್ನು ರಕ್ಷಣೆ ಮಾಡಲಾಗುತ್ತಿದೆ..

ಪ್ರಮುಖ ಸುದ್ದಿ :-   ಕುಮಟಾ : ಕಣ್ಣುಗಳನ್ನು ದಾನ ಮಾಡಿ ಸಾವಿನ ನಂತರವೂ ಸಾರ್ಥಕ್ಯದ ಕಾರ್ಯ

ಕತಗಾಲ ಸಮೀಪದ ಚಂಡಿಕಾ ಹೊಳೆ ಉಕ್ಕಿ ಕುಮಟಾ-ಶಿರಸಿ ರಸ್ತೆ ಸಂಚಾರ ಬಂದ್‌ ಆಗಿದೆ..ಅಘನಾಶನಿ ನದಿಯು ಉಗ್ರತೆಯಿಂದ ಏರುತ್ತಿದ್ದು ಕುಮಟಾ- ಸಿದ್ದಾಪುರ ಮಾರ್ಗದ ಬಾಸೋಳ್ಳಿ ಮತ್ತು ಸೊಪ್ಪಿನ ಹೊಸಳ್ಳಿಯಲ್ಲಿ ರಸ್ತೆಯಲ್ಲಿಯೂ ನೀರು ತುಂಬಿದ್ದು ಕುಮಟಾ -ಸಿದ್ದಾಪುರ ರಸ್ತೆ ಬಂದ್‌ ಆಗಿದೆ.
ಕುಮಟಾ ಕಂದಾಯ ಇಲಾಖೆ ಮತ್ತು ಪೊಲೀಸ ಇಲಾಖೆ ಜಂಟಿಯಾಗಿ ಜನರ ಪ್ರಾಣ ರಕ್ಷಣೆಗಾಗಿ ನದಿ ತೀರದಲ್ಲಿ ಬಿಟುಬಿಟ್ಟಿದ್ದು ಅನೇಕರು ಮನೆ ಬಿಡಲು ತಯಾರು ಇಲ್ಲದವರನ್ನು ಸುರಕ್ಷಿತ ಪ್ರದೇಶಕ್ಕೆ ಸಾಗಿಸುವಲ್ಲಿ ಅಧಿಕಾರಿಗಳು ಹೈರಾಣ ಆಗುತ್ತಿದ್ದಾರೆ.

ಸಿದ್ದಾಪುರ ತಾಲೂಕಿನ ಹಾರ್ಸಿಕಟ್ಟಾ , ಬಿಳಗಿ, ಹೆಮನಬೈಲ್, ಸೋವಿನಕೊಪ್ಪ ಸೇರಿದಂತೆ ಅನೇಕ ಗ್ರಾಮಗಳ ಸಂಪರ್ಕ ಸಂಪೂರ್ಣ ಕಡಿತಗೊಂಡಿದೆ.
ಸಿದ್ದಾಪುರ ತಾಲೂಕಿನ ಹಾರ್ಸಿಕಟ್ಟಾ ಗ್ರಾಪಂ ವ್ಯಾಪ್ತಿಯ ಮುಠ್ಠಳ್ಳಿ ಹಳಿಯಾಳ ಸೇರಿಂದತೆ ಕೆಲ ಗ್ರಾಮಗಳು ಸಂಪೂರ್ಣ ಜಲಾವೃತವಾಗಿದ್ದು, 25 ಕ್ಕೂ ಹೆಚ್ಚು ಮನೆಗಳು ನೀರಿನಲ್ಲಿ ಮುಳುಗಡೆಯಾಗಿದೆ. ಜಲಾವೃತಗೊಂಡ ಮನೆಗಳಲ್ಲಿರುವ ಜನರನ್ನು ಸುರಕ್ಷಿತವಾಗಿ ರಕ್ಷಣೆ ಮಾಡಲಾಗಿದ್ದು, ಎಲ್ಲ ಕಡೆ ಗಂಜಿ ಕೇಂದ್ರ ತೆರೆಯಲಾಗಿದೆ.

ಹಾರ್ಸಿಕಟ್ಟಾ ಗ್ರಾಪಂ ವ್ಯಾಪ್ತಿಯ ಹೊಸ್ಕೊಪ್ಪ ಸುರೇಶ ಹೆಗಡೆ ಅವರ ಮನೆಯ ತೋಟದಲ್ಲಿ ಗುಡ್ಡಕುಸಿತದಿಂದ ಅಪಾರ ಹಾನಿಯುಂಟಾಗಿದೆ. ಸುಮಾರು 100 ಹೆಚ್ಚಿನ ಅಡಿಕೆ ಮರಗಳು ನೆಲಸಮವಾಗಿದೆ.
ಸಿದ್ದಾಪುರ ತಾಲೂಕಿನಿಂದ ಶಿರಸಿಗೆ ಸಂಪರ್ಕ ಸಂಪೂರ್ಣ ಕಡಿತಗೊಂಡಿದೆ. ತ್ಯಾಗಲಿ ಬಳಿ ಗುಡ್ಡಕುಸಿತವಾಗಿದ್ದು, ಶಿರಸಿ ಸಿದ್ದಾಪುರ ಮಾರ್ಗ ಕಡಿತಗೊಂಡಿದೆ. ಸಿದ್ದಾಪುರದಿಂದ ಹೆಗ್ಗರಣಿ ಸಂಪರ್ಕ ಕಲ್ಪಿಸುವ ರಸ್ತೆಯೂ ಬಂದ್ ಆಗಿದೆ. ಮಾಣಿಹೊಳೆ ಉಕ್ಕಿ ಹರಿಯತೊಡಗಿದೆ.

ಪ್ರಮುಖ ಸುದ್ದಿ :-   ಪೆನ್‌ಡ್ರೈವ್ ಕೇಸ್‌ನಲ್ಲಿ ಎಚ್‌.ಡಿ. ಕುಮಾರಸ್ವಾಮಿ ಹೆಸರು ಹೇಳಲು ನನಗೆ 100 ಕೋಟಿ ರೂ. ಆಫರ್ ನೀಡಿದ್ದ ಡಿ.ಕೆ.ಶಿವಕುಮಾರ : ದೇವರಾಜೇ ಗೌಡ ಸ್ಫೋಟಕ ಹೇಳಿಕೆ

 

ಮಾಣಿ ಹೊಳೆ ಹಾಗೂ ಬಿಳಗಿ ಹೊಳೆ ಸಂಗಮದಲ್ಲಿ ಮಾಣಿಹೊಳೆ ಹೊಸ ಸೇತುವೆಯ ಮೇಲೆ ನೀರು ಹರಿಯುತ್ತಿದ್ದು, ಸುತ್ತಮುತ್ತಲ ತಗ್ಗು ಪ್ರದೇಶಗಳು ಸಂಪೂರ್ಣ ಜಲಾವೃತವಾಗಿದೆ. ಶಿರಸಿಯ ವಾನಳ್ಳಿ ಜಡ್ಡಿಗದ್ದೆ ಮಾರ್ಗದ ಸಂಪರ್ಕವೂ ಕಡಿತಗೊಂಡಿದ್ದು. ಜನ ಜೀವನ ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿದೆ.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement