ಜನಿಸಿದಾಗ ಸೇಬು ಹಣ್ಣಿನಷ್ಟು ತೂಕವಿದ್ದ ವಿಶ್ವದ ಅತ್ಯಂತ ಸಣ್ಣ ಮಗು 13 ತಿಂಗಳ ಆಸ್ಪತ್ರೆ ವಾಸದ ನಂತರ ಎಷ್ಟಾಗಿದೆಯೆಂದರೆ..

ಆರೋಗ್ಯ ಸಮಸ್ಯೆ ಅಥವಾ ಇತರೆ ಕಾರಣಗಳಿಂದ 9 ತಿಂಗಳಿಗೆ ಜನಿಸುವ ಮಗು 7 ಅಥವಾ 8 ನೇ ತಿಂಗಳಿಗೆ ಜನಿಸುತ್ತದೆ. ಆಗ ನಿಗದಿತ ಅವಧಿಗೂ ಮುನ್ನ ಜನಿಸಿದ ಮಕ್ಕಳನ್ನು ಸ್ವಲ್ಪ ಹೆಚ್ಚಾಗಿ ವಿಶೇಷ ಆರೈಕೆ ಮಾಡಬೇಕಾಗುತ್ತದೆ. ಅದಕ್ಕೂ ಮುಂಚೆ ಜನಿಸಿದರೆ ಆ ಮಗು ಬದುಕುವ ಸಾಧ್ಯತೆ ತೀರಾ ಕಡಿಮೆಯಿರುತ್ತದೆ. ಆದರೆ ಸಿಂಗಾಪುರದಲ್ಲಿ ​ ಕಳೆದ ವರ್ಷ ಒಬ್ಬ ತಾಯಿಗೆ 5 ತಿಂಗಳಿಗೇ ಮಗು ಜನಿಸಿತ್ತು. ಆಕೆ ಕೇವಲ 25 ವಾರಗಳಿಗೇ ಅವಧಿಪೂರ್ವ ಮಗವಿಗೆ ಜನ್ಮ ನೀಡಿದ್ದಳು. ಜನಿಸಿದಾಗ ಮಗು ಕೇವಲ ಒಂದು ಸೇಬಿನ ಹಣ್ಣಿನಷ್ಟು ತೂಕವಿತ್ತು. ಅಂದರೆ 212 ಗ್ರಾಂ ತೂಕವಿತ್ತು ಈ ಮಗುವನ್ನು ‘ವಿಶ್ವದ ಅತ್ಯಂತ ಸಣ್ಣ ಮಗು‘ ಎಂದು ಹೇಳಲಾಗಿತ್ತು.

ಸತತ 13 ತಿಂಗಳು ಆಸ್ಪತ್ರೆಯಲ್ಲಿ ನಿರಂತರ ಆರೈಕೆಯಿಂದಾಗಿ ಮಗು ಈಗ ಮನೆ ಸೇರಿದೆ.
ಕ್ವೆಕ್​ ಯು ಜ್ಸೌನ್​ ಎಂಬ ಮಗು ಕಳೆದ ವರ್ಷ 2020 ಜೂನ್​ 9ರಂದು ಜನಿಸಿತ್ತು. ತಾಯಿಗೆ ಕೇವಲ 25 ವಾರಗಳಿಗೆ ಹೆರಿಗೆಯಾಗಿತ್ತು. ಹೀಗಾಗಿ ಆ ಮಗುವನ್ನು ಆಸ್ಪತ್ರೆ ಸಿಬ್ಬಂದಿ ವಿಶೇಷ ಕಾಳಜಿಯೊಂದಿಗೆ ಇರಿಸಿದ್ದರು. ಆಸ್ಪತ್ರೆ ಮೂಲಗಳ ಪ್ರಕಾರ, ತಾಯಿ ಯು ಜ್ಸೌನ್​ಗೆ ಪ್ರಿ-ಎಕ್ಲಾಂಪ್ಸಿಯಾ ಸಮಸ್ಯೆ ಇರುವುದು ತಿಳಿದ ಬಳಿಕ, ವೈದ್ಯರು ತುರ್ತಾಗಿ ಸಿಜೇರಿಯನ್(ಸಿ-ಸೆಕ್ಷನ್) ಮಾಡಿ ಮಗುವನ್ನು ಹೊರ ತೆಗೆದಿದ್ದರು. ಮಗು ಜನಿಸಿದಾಗ ಗಾತ್ರದಲ್ಲಿ ತುಂಬಾ ಸಣ್ಣದಾಗಿತ್ತು. ಹೀಗಾಗಿ ಮಗುವನ್ನು ನವಜಾತ ಶಿಶುಗಳ ಆರೈಕೆ ವಿಭಾಗದಲ್ಲಿ ಇರಿಸಿ ಆರೈಕೆ ಮಾಡಲಾಗಿತ್ತು.
ಅವಧಿಗಿಂತ 4 ತಿಂಗಳು ಮುಂಚೆ ಜನಿಸಿದ ಮಗು ಸುಮಾರು 400 ಗ್ರಾಂ ಇರಲಿದೆ ಎಂದು ವೈದ್ಯರು ಭಾವಿಸಿದ್ದರು. ಆದರೆ ಶಿಶುವಿನ ತೂಕ ಕೇವಲ 212 ಗ್ರಾಂ ಇತ್ತು. ಅಂದರೆ ಒಂದು ಸೇಬು ಹಣ್ಣಿನಷ್ಟು..! ಆದರೆ ವೈದ್ಯಕಿಯ ಸಿಬ್ಬಂದಿಯ 13 ತಿಂಗಳ ಆರೈಕೆ ನಂತರ ಮಗು ಆರೋಗ್ಯವಾಗಿದ್ದು, 6.3 ಕೆ.ಜಿ ತೂಕ ಹೊಂದುವಂತಾಗಿದೆ. 2021ರ ಜುಲೈ 9ರಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಿದ್ದಾರೆ.

ಪ್ರಮುಖ ಸುದ್ದಿ :-   ವೀಡಿಯೊಗಳು..| ದುಬೈನಲ್ಲಿ 1.5 ವರ್ಷಕ್ಕೆ ಬೀಳುವಷ್ಟು ಮಳೆ ಒಂದೇ ದಿನ ಸುರಿಯಿತು...! ಜನಜೀವನ ಅಸ್ತವ್ಯಸ್ತ; ರಸ್ತೆಗಳು ಜಲಾವೃತ, ವಿಮಾನಗಳ ಹಾರಾಟ ರದ್ದು

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement