ಚಿನ್ನಾಭರಣ ಅಂಗಡಿಗೆ ಕದಿಯಲು ಬಂದ ಕಳ್ಳರಿಂದ ಫೈರಿಂಗ್​; ಯುವಕ ಸಾವು

ಮೈಸೂರು: ಹಾಡಹಗಲೇ ಚಿನ್ನಾಭರಣದ ಅಂಗಡಿಗೆ ನುಗ್ಗಿದ ಕಳ್ಳರು, ಆಭರಣಗಳನ್ನು ಕದಿಯಲು ಯತ್ನಿಸಿದ್ದಾರೆ ಹಾಗೂ ಇದಕ್ಕೆ ಪ್ರತಿರೋಧ ಒಡ್ಡಿದ ಅಂಗಡಿ ಮಾಲೀಕನ ಮೇಲೆ ಗುಂಡು ಹಾರಿಸಿದ್ದಾರೆ.
ನಾಲ್ಕು ಜನರ ತಂಡ ಮೈಸೂರಿನ ವಿದ್ಯಾರಣ್ಯಪುರಂ ಅಮೃತ್ ಗೋಲ್ಡ್ ಅಂಡ್ ಸಿಲ್ವರ್ ಚಿನ್ನಾಭರಣ ಅಂಗಡಿಗೆ ಅಭರಣ ಕದಿಯಲು ಆಗಮಿಸಿದೆ. ಕಳ್ಳತನಕ್ಕೆ ಬಂದಿರುವ ಬಗ್ಗೆ ಸುಳಿವು ಗೊತ್ತಾದ ಕೂಡಲೇ ಅಂಗಡಿಯಲ್ಲಿದ್ದ ಮಾಲೀಕ ಧರ್ಮೇಂದ್ರ ಪ್ರತಿರೋಧ ಒಡ್ಡಿದ್ದಾರೆ, ಆಗ ಅವರಿಗೆ ಥಳಿಸಿದ ತಂಡ ನಂತರ ಅವರನ್ನು ಕೊಡಿ ಹಾಕಿ, ಚಿನ್ನದಂಗಡಿಯಲ್ಲಿದ್ದ ಚಿನ್ನಾಭರಣಗಳನ್ನ ದೋಚಿದ್ದಾರೆ. ದರೋಡೆಕೋರರ ಹೊಡೆತಕ್ಕೆ ಅಂಗಡಿ ಮಾಲೀಕ ಕುಸಿದು ಬಿದ್ದಿದ್ದಾನೆ, ನಂತರ ಹೊರಗೆ ಬಂದ ದರೋಡೆಕೋರರಿಗೆ ಸ್ಥಳೀಯ ಯುವಕನೊಬ್ಬ ಎದುರಾಗಿದ್ದಾನೆ, ಆತನ ಮೇಲೂ ಖದೀಮರು ಫೈರ್​ ಮಾಡಿದ್ದಾರೆ. ಆ ಯುವಕನಿಗೆ ಗುಂಡುತಾಗಿ, ಆತ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲಿಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ. ಶ್ವಾನದಳ ಕರೆಸಿ ದರೋಡೆಕೋರರ ಪತ್ತೆ ಹಚ್ಚುವ ಕಾರ್ಯ ಮಾಡುತ್ತಿದ್ದಾರೆ. ಹಲ್ಲೆಯಿಂದ ಚಿನ್ನಾಭರಣ ಅಂಗಡಿ ಮಾಲೀಕ ಧರ್ಮೇಂದ್ರನಿಗೆ ಗಂಭೀರ ಗಾಯಗಳಾಗಿದ್ದು, ಹೆಚ್ಚಿನ ಚಿಕಿತ್ಸೆಗೆ ಎಂದು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಚಿನ್ನಾಭರಣ ದೋಚಲು ಬಂದಿದ್ದ ಕಳ್ಳರು ಸಾಕಷ್ಟು ತಯಾರಿ ನಡೆಸಿಯೇ ಬಂದಿದ್ದಾರೆ ಎನ್ನುವುದು ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಕಳ್ಳತನ ನಡೆಸಿ ಹೋಗುವ ವೇಳೆ ಬ್ಲೂ ಶರ್ಟ್ ಕಳಚಿ ರಸ್ತೆಬದಿಯ ಕಾಂಪೌಡ್ ಕಡೆಗೆ ಎಸೆದ ದರೋಡೆಕೋರ ಬೇರೆ ಕಡೆಗೆ ದೌಡಾಯಿಸಿದ್ದಾನೆ. ದರೋಡೆಕೋರನ ಈ ಚಾಣಕ್ಷತನ ಹತ್ತಿರದಲ್ಲೇ ಇದ್ದ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ಪ್ರಮುಖ ಸುದ್ದಿ :-   ಲೋಕಸಭಾ ಚುನಾವಣೆ : ಕರ್ನಾಟಕದ ಮೊದಲ ಹಂತದಲ್ಲಿ ಶೇ. 69.23 ಮತದಾನ ; 14 ಕ್ಷೇತ್ರಗಳ ಮತದಾನದ ಪ್ರಮಾಣದ ವಿವರ...

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement