ಶಿರಸಿ: ಹುಲೆಮಳಗಿ ಬಳಿ ಉರುಳಿಗೆ ಸಿಲುಕಿ ಕಪ್ಪು ಚಿರತೆ ಸಾವು

ಶಿರಸಿ: ಕಾಡು ಪ್ರಾಣಿ ಸೆರೆ ಹಿಡಿಯಲು ಹಾಕಿದ್ದ ಉರುಳಿಗೆ ಅಪರೂಪದ ಕರಿ ಚಿರತೆಯೊಂದು ಸಿಲುಕಿಕೊಂಡು ಪ್ರಾಣಬಿಟ್ಟ ಘಟನೆ ಉತ್ತರ ಕನ್ನಡ ಜಿಲ್ಲೆ ಶಿರಸಿ ತಾಲೂಕಿನ ಬೆಂಗಳೆ ಗ್ರಾಮದ ಹುಲೆಮಳಗಿ- ಮಂಟಕಾಲ ಮಧ್ಯೆ ನಡೆದಿದೆ.
ಕಪ್ಪು ಚಿರತೆಯನ್ನು ಅಪರೂಪದ್ದು ಎಂದು ಹೇಳಲಾಗುತ್ತದೆ. ಮೃತ ಕಪ್ಪು ಚಿರತೆ ಹೆಣ್ಣಾಗಿದೆ. ಬನವಾಸಿ ಅರಣ್ಯ ಭಾಗದಲ್ಲಿ ಪತ್ತೆಯಾದ ಪತ್ತೆಯಾದ ಮೊದಲ ಕಪ್ಪು ಚಿರತೆ ಇದಾಗಿದ್ದು, ಅಂದಾಜು 4 ವರ್ಷದ ಇರಬಹುದು ಎಂದು ಅರಣ್ಯ ಇಲಾಖೆಯವರು ತಿಳಿಸಿದ್ದಾರೆ.

ನಸುಕಿನ ಜಾವ ಕಪ್ಪು ಚಿರತೆಯು ಬೇಲಿಗೆ ಸಿಲುಕಿ ಒದ್ದಾಡುವುದನ್ನು ಕಂಡ ಗ್ರಾಮಸ್ಥರು ಅರಣ್ಯ ಇಲಾಖೆಗೆ ವಿಷಯ ತಿಳಿಸಿದ್ದರು. ಅದನ್ನು ಸುರಕ್ಷಿತವಾಗಿ ಸೆರೆಹಿಡಿಯುವ ಪ್ರಯತ್ನ ಅರಣ್ಯ ಇಲಾಖೆ ನಡೆಸಿತ್ತು. ಉರುಳು ತಂತಿಯಿಂದ ಸೊಂಟದ ಭಾಗಕ್ಕೆ ತೀವ್ರ ಪೆಟ್ಟು ಬಿದ್ದಿತ್ತು. ಅರಣ್ಯ ಇಲಾಖೆಯವರು ಇದನ್ನು ಬದುಕಿಸಲು ತೀವ್ರ ಪ್ರಯತ್ನ ನಡಸಿದರು. ಆದರೆ ಅವರ ಪ್ರಯತ್ನ ಸಫಲವಾಗಲಿಲ್ಲ. ಅದು ಘಂಭಿರ ಗಾಯಗಳಿಂದ ಪರಿಣಾಮ ಮೃತಪಟ್ಟಿದೆ. ಪ್ರಾಣಿ ಬೇಟೆಗೆ ಉರುಳು ಹಾಕಿದ್ದರಿಂದ ಇದು ಸತ್ತಿರಬಹುದು ಎಂಬ ಸಂಶಯ ವ್ಯಕ್ತವಾಗಿದೆ. ಅದನ್ನು ನೋಡಲು ಬಹುಸಂಖ್ಯೆಯಲ್ಲಿ ಜನರು ಸೇರಿದ್ದರು.
ಪಶು ವೈದ್ಯಾಧಿಕಾರಿ ಡಾ.ದಿನೇಶ ಕೆ.ಎನ್. ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ವಲಯ ಅರಣ್ಯಾಧಿಕಾರಿ ಕಚೇರಿ ಆವರಣದಲ್ಲಿ ಅಂತ್ಯಸಂಸ್ಕಾರ ನಡೆಸಲಾಯಿತು.

ಪ್ರಮುಖ ಸುದ್ದಿ :-   ಕುಮಟಾ : ಬಾಡದಲ್ಲಿ ಚಿರತೆ ದಾಳಿಗೆ ಇಬ್ಬರಿಗೆ ಗಾಯ ; ಮನೆಯೊಳಗೆ ನುಗ್ಗಿ ಅವಿತುಕೊಂಡ ಚಿರತೆ

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement